ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಹಿರಿಯರನುಸರಿಸಿ ಹÀರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿರೊ ಪ. ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದಿರಿರಕ್ಕಸಾರಿಯ ಭಕ್ತರೊಳು ಸೇರಿ ಮುಂದೆ ಸೆರೆ-ಯಿಕ್ಕದಂತವನ ಮರೆಹೋಗಿರೊ 1 ಕಂಬಳಿಯ ಬುತ್ತಿಯಂತೀ ದೇಹದೊಳಗೆ ಸುಖವೆಂಬುದಿಲ್ಲವು ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವ-ನುಂಬ ಸಂಭ್ರಮಕೆ ಸರಿಗಾಣೆನು 2 ಮಕ್ಕಳುಗಳಳುವಾಗ ಮಡದಿಯರು ಜರಿವಾಗಭಿಕ್ಷುಕರು ಬಂದು ಬೈದ್ಹೋಗುವಾಗಇಕ್ಕಿ ಪೊರೆವುದಕೆ ಬಗೆಯಿಲ್ಲದ ದರಿದ್ರಂಗೆಸೌಖ್ಯವೆತ್ತಣದು ಮನುಜರಿಗೆ 3 ತಾಯ ಮಾರಿ ತೊತ್ತಕೊಂಬ ಪಾಮರನಂತೆಹೇಯಕುಜನರ ಚರಣಕೆರಗಿಶ್ರೀಯರಸನಂಘ್ರಿಗಳ ನೆನೆಯಲೊಲ್ಲದ ಮನುಜರಿಗೆಆಯುಷ್ಯ ಬರಿದೆ ಹೋಯಿತಲ್ಲ 4 ಐವರಿತ್ತೊಡವೆಯನು ಅವರವರು ಒಯ್ವರು ಮ-ತ್ತೈವರೆಂಬುವರು ತೊಲಗುವರುಮೈಯ ಹತ್ತರಕೂಟ ಹರಿದು ಹೋಗುವ ಮುನ್ನಕೈಯ ಪಿಡಿದೆತ್ತುವರ ಕಾಣೆ 5 ಕಾಲು ಜವಗುಂದಿದವು ರೋಗರುಜಿನಗಳಿಂದಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖಘಂಟೆಯೊಳಗಿನನಾಲಿಗೆಗೆ ನಾದವೆಲ್ಲಿಹುದೊ 6 ಈಗಲೆ ಹರಿನಾಮನಾದದಿಂದೆಚ್ಚೆತ್ತುನಾಗಶಯನನ ಪುರದ ಪಥವಆಗಮಜ್ಞರ ಕೈಯ ಕೇಳಿಕೊಳ್ಳಿರೊ ನೀವುಈ ಗಾಳಿದೀಪ ಸ್ಥಿರವಲ್ಲ7 ಜರೆ ಬಂದು ಕಡೆಯಲ್ಲಿ ಗುರುಗುರುಟ್ಟುವಾಗಶರೀರಸಂಬಂಧಿಗಳ ಕಾಟತರುಣಿಯರ ಮೇಲಾಸೆ ತಮ್ಮ ಹಿತವರಿಯದೆಬರಿದೆ ಭವದೊಳಗೆ ಬಳಲದಿರಿ 8 ವೇದಶಾಸ್ತ್ರವನೋದಲಿಲ್ಲ ಜಪತಪಸಾಧು ಸತ್ಕರ್ಮಗಳ ಸರಕಿಲ್ಲಮಾಧವನ ಪೂಜೆಯನು ಮಾಡಿದವನಲ್ಲ ಹರಿಪಾದತೀರ್ಥ ವ್ರತಗಳಿಲ್ಲ 9 ಊಧ್ರ್ವಪುಂಢ್ರsÀಗಳೆಲ್ಲಿ ಹರಿಯ ಲಾಂಛನವೆಲ್ಲಿಪದ್ಮಾಕ್ಷಿ ಶ್ರೀತುಲಸಿ ಸರಗಳೆಲ್ಲಿಸದ್ಧರ್ಮಪಥವೆಲ್ಲಿ ವಿಷಯಾಂಧಕೂಪದೊಳುಬಿದ್ದು ಹೋರಳುವ ಮನುಜರೆಲ್ಲಿ 10 ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ 11 ಉಕ್ಕಿ ಹರಿಯನೆ ಪೊಗಳಿ ಅವನಂಗಣದಿ ಹೊರಳಿಶುಷ್ಕ ತರ್ಕಗಳ ಮೇಲೆ ಉಗುಳಿಭಕ್ತಿe್ಞÁನಗಳಿರಲಿ ಮಿಕ್ಕ ಪಥದಿಂ ಮರಳಿಮುಕ್ತಿಮಾರ್ಗದಲಿನ್ನು ತೆರಳಿ 12 ಕೊಳ್ಳೆನಾಯಕ ಬಂದು ಕೋಟೆಗಡರದ ಮುನ್ನಕಳ್ಳರೈವರ ಕಾಟದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭದಲಿ ಬಚ್ಚಿಡಿರೊ 13 ಮಲಮೂತ್ರರಕ್ತಮಾಂಸದ ರಾಸಿಗಳು ಕೂಡಿಎಲುವಿನ ಬಿಲದಲ್ಲಿ ಗೂಡಮಾಡಿಬೆಳೆಸಿದೀ ತನುವೆಂಬ ನರಕದಾಸೆಯ ಬಿಟ್ಟುಜಲಜನಾಭನ ಸೇರಿಕೊಳ್ಳಿರೊ14 ಒಂಬತ್ತು ಛಿದ್ರವುಳ್ಳ ದೇಹವೆಂಬ ಮಡಕೆಯಲ್ಲಿತುಂಬಿದ ವಾಯು ಸ್ಥಿರವೆಂದುನಂಬಿಕೊಂಡಿರಬೇಡಿ ಹಯವದನ ಹರಿಯ ಪಾ-ದಾಂಬುಜವ ಸೇರಿ ಬದುಕಿರೊ 15
--------------
ವಾದಿರಾಜ