ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲ ಭಜಿಸೋ ಮೈಲಾರ ಲಿಂಗನ ಪ ಪುರಹರ ಸ್ವರೂಪನೆ ಎಂದು ಧ್ಯಾನಿಸೋ ಪಾತಕ ತಿಮಿರ ಭಾಸ್ಕರನೆಂದು ನೀ ಸ್ಮರಿಸೋ ಶಿರಬಾಗಿ ನಮಿಸೋ ಅ.ಪ ತುರಗವಾಹನವೇರಿ ಬರುತಿಹನ ಧರೆಯೊಳಗೆ ಮೈಲಾಪುರ ಸುಮಂದಿರನೆಂದು ಕರೆಸುವನಾ ಹೊನಕೆರೆಯ ಜಲದಭಿಷೇಕದಿಂದ ರ್ಚನೆಯ ಕೊಂಬುವನ ಶರಣರನ ಪೊರೆವನ 1 ಕಾಲಕಾಲದಿ ಪಾಲಕಿಯ ಉತ್ಸವದಿ ಮೆರೆಯುವನ ಅನು ಗಾಲಭಕುತರ ಮ್ಯಾಳವನು ಪಾಲಿಸಲು ಬಂದಿಹನ ಕೇಳಿ ದ್ವರಗಳ ಕೊಡುವ ಘನ ತ್ರಿಶೂಲ ಧರಿಸಿಹನ ಮಾಳಸಾಕಾಂತನ 2 ನಿಷ್ಠೆಯಿಂದಲಿ ಭಜಿಪ ಭಕುತರನ ರಕ್ಷಿಸಲು ಕೊಪ್ಪರ ಕಟ್ಟಿಯಲಿ ಸೇವೆಯನ್ನು ಕೊಳುತಿಹನ ಸಿರಿ ವಿಷ್ಣು ಭಕುತರ ಮನೆಗಳಲಿ ಪೂಜೆಯನು ಕೊಂಬುವನ ಇಷ್ಟ ಪ್ರದಾತನ3 ಸಂಚರಿಸುತಲಿ ದಿನಕರನು ಮಕರದಿ ಬರಲು ಸಂಕ್ರಮಣ ಉತ್ಸವದಿ ನೋಡಲು ನೆರೆದ ಬಹು ಜನ ರಿಂದ ಸೇವಿತನ ಗಿರಿಶಿಖರ ಗುಂಡಿನ ಮೇಲೆ ದೀಪೋತ್ಸವದಿ ರಾಜಿತನ ಮಹಿಮಾನ್ವಿತನ 4 ವಿನುತ ಶುಭಚರಣ ಸರೋಜ ಕಾರ್ಪರ ನಾರಸಿಂಹನ ಒಲಿಮೆ ಪಡೆ ದಿಹನಾ ರವಿವಾರ ವಾರದಿ ಮಾರ್ತಾಂಡದೇವನ5
--------------
ಕಾರ್ಪರ ನರಹರಿದಾಸರು
ಮುಂಚೆ ನೋಡಣು ಬನ್ನಿ ಜನಗಳೆ ಹಂಚಿನಾಳಿನವ ಹನುಮನ ವಾಂಛಿತಾರ್ಥಗಳೀವ ಭಾವಿ ವಿರಂಚಿದೇವ ಪದಾರ್ಹನಾ ಪ ಅಂದು ಕಪಿಕುಲದಿಂದ ದುಸ್ತರ ಸಿಂಧು ದಾಟಿದ ಧೀರನ ವಂದಿಸುತ ಭೂನಂದನೆಯು ಕ್ಷೇಮೆಂದು ರಾಮಗೆ ಪೇಳ್ದನ 1 ಧಾರುಣಿಯೊಳವತರಿಸಿ ಕುಂತಿ ಕುಮಾರನೆನಿಸಿದ ಧೀರನ ಕೌರವಾಂತಕನೆನಿಸಿ ಕೃಷ್ಣನ ಭೂರಿ ಕರುಣವ ಪಡೆದನ 2 ವಾದಿಗಳ ನಿರ್ವಾದ ಗೈಸಿದ ಬಾದರಾಯಣನ ಶಿಷ್ಯನ ಭೇದಮತವನು ಸ್ಥಾಪಿಸಿದ ಗುರು ಮೋದ ತೀರ್ಥ ಯತೀಂದ್ರನಾ 3 ಪಾಲಕಿಯ ಉತ್ಸವದಿ ಮೆರೆಯುತ ವಾಲಗವ ಕೈಕೊಳುವನ ಕಾಲಕಾಲಗಳಲ್ಲಿ ಭಜಕರ ಮ್ಯಾಳವನು ಪಾಲಿಸುವನಾ 4 ಶೇಷಭೂಷಣ ವಾಸವಾದಿಸು ರೇಶ ಭಕುತರ ಪೋಷನ ಶ್ರೀಶ ಕಾರ್ಪರವಾಸ ಸಿರಿನರ ಕೇಸರಿಗೆ ಪ್ರಿಯ ದಾಸನ5
--------------
ಕಾರ್ಪರ ನರಹರಿದಾಸರು