ಶುಭ ಮಂಜುಳಗಾತ್ರ್ರೆಕುಂಜರದಂತೆ ಗಮನೆ ರಂಜಿತಾಂಗಿ ನಿರಂಜನಾಂಗಿ ಪ
ಧರೆಯ ಮ್ಯಾಲೆ ಹಿರಿಯಳು ನಾ-ನಿರಲು ಲಜ್ಜೆ ತೊರೆದು ನೀನುಸರಸವಾಡೋದೆ ಮುರಹರನಕರೆದು ಭಾಮಿನಿ ಸುಗುಣೆ ಕಾಮಿನಿ 1
ಪತಿಯ ಪ್ರೀತಿ ಎನ್ನ ಮ್ಯಾಲೆಅತಿಶಯದಿ ಇರಲು ಜ್ಯೇಷ್ಠಸತಿಯಳೇನೇ ನೀನು ನೋಡುಮತಿಯ ರುಕ್ಮಿಣಿ ಸುಪದ್ಮಗಂಧಿನಿ2
ಒಂದು ಕಾಲದಲ್ಲಿ ದಾಸಿ-ಯಿಂದ ಪತಿಯು ಸರಸವಾಡಲುಬಂದಳೇನೇ ಅರಸಿ ಸಮ-ಳೆಂದು ಭಾಮಿನಿ ಸುಗುಣೆ ಕಾಮಿನಿ 3
ದಾಸಿ ಸಮಳು ನಾನು ಅಲ್ಲ ದೋಷ ಮಾತನಾಡಬೇಡಶ್ರೀಶನ ದಯರಾಶಿ ಇರಲುದಾಸಿಯೆ ರುಗ್ಮಿಣಿ ಸುಪದ್ಮಗಂಧಿನಿ 4
ಸಾರೆ ಕೃತ್ಯವಾರೆ ಹೂಡಿದ್ವಾರಾವತಿಯಿಂದ ಎನ್ನಸಾರೆ ಬಂದ ಪ್ರೀತಿಯು ಅ-ಪಾರೆ ಭಾಮಿನಿ ಸುಗುಣೆ ಕಾಮಿನಿ5
ಕಡಲಶಾಯಿ ತಡೆದರಿನ್ನುದಿಡುಗು ದೇಹ ಬಿಡುವೆನೆಂಬೊನುಡಿಯ ಕೇಳಿ ಪಿಡಿದನೆಬಿಡದೆ ರುಗ್ಮಿಣಿ ಸುಪದ್ಮಗಂಧಿನಿ 6
ಮಂದರಧರನು ಪ್ರೀತಿ-ಯಿಂದ ನಿನ್ನ ಪಡೆದನೇನೆಒಂದು ಮಣಿಯ ಕಾರಣದಿಬಂದೆ ಭಾಮಿನಿ ಸುಗುಣೆ ಕಾಮಿನಿ7
ಸುಮ್ಮನೆ ಬಂದವಳಿಗೆಬ್ರಹ್ಮ-ಲಗ್ನದಿ ಬಂದೆನಗೆಸಾಮ್ಯವೇನೆ ಯಾಕೆ ನಿನಗೆಹೆಮ್ಮೆ ರುಗ್ಮಿಣಿ ಸುಪದ್ಮಗಂಧಿನಿ. 8
ಮಾನಾದಿ ಭಕ್ತಿಯು ಕನ್ಯಾ-ದಾನವು ಲೋಕದೊಳಗುಂಟುಏನು ನಿನ್ನ ತಾತ ಕೊಟ್ಟದೀನ ಭಾಮಿನಿ ಸುಗುಣೆ ಕಾಮಿನಿ 9
ಎನ್ನ ಹಂಗದೆಂದುಪ್ರಸನ್ನ ಕೇಳಿ ಶತಧನ್ವನಬೆನ್ನಟ್ಟಿ ಕೊಂದನೇ ನೀ-ಚೆನ್ನ ರುಗ್ಮಿಣಿ ಸುಪದ್ಮ ಗಂಧಿನಿ 10
ವೀರ ಅರಸರ ಸ್ವಭಾವಚೋರರ ಕೊಲ್ಲಬೇಕೆಂಬೋಸಾರ ಪ್ರೀತಿಯದರಿಂದತೋರಿ ಭಾಮಿನಿ ಸುಗುಣೆ ಕಾಮಿನಿ11
ಇಂದ್ರಾದಿ ದೇವತೆಗಳೊಳುಸಾಂದ್ರಯುದ್ಧವನ್ನೆ ಮಾಡಿವೀಂದ್ರ ಎನಗೆ ಪಾರಿಜಾತತಂದ ರುಗ್ಮಿಣಿ ಸುಪದ್ಮಗಂಧಿನಿ12
ಕ್ಲೇಶ ನೋಡಿ ತಂದತರುವ ಭಾಮಿನಿ ಸುಗುಣೆ ಕಾಮಿನಿ13
ನಿಜಳೆಂದು ರಂಗನು ಎನ್ನವಿಜಯಯಾತ್ರೆಯಲ್ಲಿ ತನ್ನಭುಜಗಳಿಂದಾಲಂಗಿಸಿದಸುಜನೆ ರುಗ್ಮಿಣಿ ಸುಪದ್ಮಗಂಧಿನಿ 14
ಅರಸರ ಸ್ವಭಾವ ತಮ್ಮಅರಸೇರ ಮನೆಯೊಳಗಿಟ್ಟುಸರಸ ದಾಸೇರಿಂದ್ಹೋಗೋದುಸ್ಮರಿಸೆ ಭಾಮಿನಿ ಸುಗುಣೆ ಕಾಮಿನಿ 15
ಸಾರವಚನ ಕೇಳಿ ಭಾಮೆಮೋರೆ ಕೆಳಗೆ ಮಾಡುತಿರಲುನಾರಿ ರುಕ್ಮಿಣಿ ಭಾಮೆಯರನ್ನುವೀರ ಕರೆದನು ತಾ ಸೇರಿ ಮೆರೆದನು16
ಮಂಗಳಾಂಗ ಮಹಿಮ ಕೇಶವಾ-ಲಿಂಗಿಸಿದ ಭೈಷ್ಮಿಯನ್ನುತುಂಗಗುಣ ಗೋಪೀರಮಣರಂಗವಿಠಲನು ಅನಂಗಜನಕನು 17