ಶರಣು ಶ್ರೀ ಗುರುಲಿಂಗ ಶರಣು ಮುನಿಜನಸಂಗ
ಶರಣುಭವ ಭಯ ವಿಭಂಗಾ ಪ
ಪಾವನಿ ಜಾನ್ಹವಿಯ ತೀರದಲಿ ಕಾಶೀ |
ಪುರ ವಿಶ್ವನಾಥನೆನಿಸೀ |
ಹರುಷದಲಿ ನಿಂದು ಮತ್ತೊಂದು ರೂಪದಲಿ ತೆರಳಿ |
ಧರೆಯ ದೇಶವ ನೋಡುತಾ ಬರುತಾ 1
ಮೊದಲೆ ತಾ ಕೃಷ್ಣ - ವೇಣಿ ಮ್ಯಾಲುತ್ತರವಾಹಿನಿ |
ಸದಮಲ ಸುಖ ಕಾರಿಣೀ |
ಇದ ನರಿತು ನಡಿ ಮಧ್ಯೆ - ಉತ್ತರೇಶ್ವರ ನೆನಸಿ |
ಮುದದಿಂದ ಬಂದು ನಿಂದು || 2
ಸಖನ ದರುಶನ ನೆವದಿ ಬರುತಿರಲು ನಾ ನಿಮ್ಮ
ಪ್ರಕಟದಲಿ ಕಂಡೆ ನಿಂದು |
ಭಕುತಿಯಚ್ಚರ ನೀಡು ಗುರು ಮಹೀಪತಿ ಸ್ವಾಮಿ |
ಸಕಲ ಸುರರಾಜ ಮಾದ್ಯ ಧನ್ಯಾ || 3