ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿರಿನಲ್ಲ ಕೇಳುತಲೆನ ಸೊಲ್ಲ ಬಾರೊ ಬಾರೆನುತಲಿ ಭಕ್ತವತ್ಸಲನೆ ಬಾರಿ ಬಾರಿಗೆ ನಿನ್ನ ಬೇಡಿಕೊಂಬುವೆನು ಪ ಕಡಲೊಳು ಮುಣಿಗಜಗ್ವೇದವ ತರುವ ಕ್ಷೀರಾಂಬುಧಿ ಕಡೆವ ಕಡು ಕ್ರೋಡರೂಪದಿ ಬೇರನೆ ಕಡಿವ ಅಸುರನ ಒಡಲೊಡೆವ ಬಡವನಾಗ್ಯಜ್ಞ ಶಾಲೆಗೆ ನಡೆವ ಕೊಡಲಿಯನೆ ಪಿಡಿವ ಹೊಡೆದ್ಹತ್ತು ಶಿರ ಕಾಳಿ ಮಡುವ್ಹಾರಿ ತ್ರಿಪುರರ ಮಡದೇರನ್ವೊಲಿಸ್ವಾಜಿ ಹಿಡಿದೇರೋಡಿಸುವನೆ 1 ಕಣ್ಣು ತೆರೆದೆವೆಯಿಕ್ಕದಲೆ ನೋಡಿ ಬೆನ್ನಲಿ ಗಿರಿ ಹೂಡಿ ಮಣ್ಣುಕೆದರುತಲವನ ದಾಡೆ ಕರುಳ್ಹಾರವ ಮಾಡಿ ಸಣ್ಣ ತ್ರಿಪಾದ ದಾನವ ಬೇಡಿ ಮನ್ನಿಸಿ ತಪ ಮಾಡಿ ಅ- ದಧಿ ಬೆಣ್ಣೆಗಳನು ಕದ್ದು ಹೆಣ್ಣುಗಳನೆ ಕೆಡಿಸ್ಹಯವನ್ನೇರಿ ಮೆರೆವನೆ 2 ನಾರುತ್ತ ಮೈಯ ನೀರೊಳಗಿರುವ ಮಂ- ದಾರವನ್ಹೊರುವ ಕ್ವಾರೆ (ಕೋರೆ?)ಯಲಿ ಧರೆಯ ಮ್ಯಾಲಕೆ ತರುವ ಕರಿ (ಕರೆಯೆ?) ಕಂಬದಿ ಬರುವ ಘೋರ ತ್ರಿವಿಕ್ರಮನಾಗಿ ತೋರುವ ತಾಯಿಯ ಶಿರ ತರಿವ ನಾರ್ವಸ್ತ್ರಬಿಗಿದುಟ್ಟ ಭೀಮೇಶಕೃಷ್ಣನೆ ಭಂಗ ಮಾಡಿ ತುರುಗವೇರಿ3
--------------
ಹರಪನಹಳ್ಳಿಭೀಮವ್ವ
ಎಲ್ಲೊ ಎಲ್ಲೊ ಎನ್ನ ಸಾಲವೆತ್ತದೊ | ನಿಲ್ಲೊ ನಿಲ್ಲೊ ನಿನ್ನ ಕಂಡ ಮ್ಯಾಲಕೆ ಬಿಡೆ ಪ ಮೀನ ನಡೆದ ಹೆಜ್ಜೆಗಳು ಕಾಣದಂತೆ ಪೋಗಿ ನಡಗಿದೆ | ಬೆಟ್ಟದಡಿಯ ಅಂದು ಒಡನೆ ಮಣ್ಣುಕಚ್ಚಿ ಬಾಯಿದೆರದು ಆ | ರ್ಭಟಿಸಿದರೆ ನಿನ್ನ ಪೋಗಗೊಡುವೆವೇನೊ 1 ಬಲು ಉದ್ದ ಬೆಳೆದರೆ ನ್ಯಾಯದಿ ಸೋಲಿಸಿ | ಹೆಗ್ಗಲಿದಾ ಗಿಡದ ಬೇರು ಕಡಿಸುವೆನೊ | ಕಲಕಾಲಾ ಉಪವಾಸ ಮಾಡಲು ನಮಗೇನು | ಕಳವು ಹಾದರದಲ್ಲಿ ನಿಸ್ಸೀಮ ಪುರುಷನೇ 2 ಮಾಣಿಯ ತೋರಿಸಿದರೆ ನಿನಗಾರುರಂಜೋರೋ | ಪಾಣಿಯೊಳಗೆ ಖಡ್ಗ ಇದ್ದರಂಜೆ | ಕಾಣಿ ಪಾದಿದ್ದರೆ ಹಿಂದೆ ಸುಮ್ಮನಿದ್ದೆ | ಇಂದು 3
--------------
ವಿಜಯದಾಸ
ಹನುಮಂತದೇವರ ಸ್ತೋತ್ರ ಬಿಡುವೇನೇನಯ್ಯಾ ಹನುಮ ನಿನ್ನಬಿಡುವೇನೇನಯ್ಯಾ ಪ ಬಿಡುವೆನೇನೋ ಹನುಮ ನಿನ್ನಅಡಿಗಳಿಗೆ ಶಿರವ ಕಟ್ಟಿ (ಎರಗುವೆ ನಾನು)ದೃಢ ಭಕ್ತಿ ಸುಜ್ಞಾನವನ್ನುತಡಮಾಡದಲೆ ಕೊಡುವೋ ತನಕ ಅ.ಪ ಹಸ್ತವ ಮ್ಯಾಲಕೆ ಎತ್ತಿದರೇನುಹಾರಗಾಲ ಹಾಕಿದರೇನುಭೃತ್ಯನು ನಿನ್ನವನು ನಾನುಹಸ್ತಿ ವರದನ ತೋರೋ ತನಕ 1 ಹಲ್ಲು ಮುಡಿಯ ಕಟ್ಟಿದರೇನು ಗುಲ್ಲು ಮಾಡಿದರಂಜುವನಲ್ಲಫುಲ್ಲನಾಭ ಲಕುಮೀಲೋಲನಇಲ್ಲಿಗೆ ತಂದು ತೋರುವ ತನಕ 2 ಡೊಂಕು ಮೋರೆ ಬಾಲವ ತಿದ್ದಿಹುಂಕರಿಸಿದರೆ ಅಂಜುವನಲ್ಲಕಿಂಕರನು ನಿನ್ನವನೋ ನಾನುವೆಂಕಟವಿಠಲನ ತೋರುವ ತನಕ 3
--------------
ವೆಂಕಟೇಶವಿಟ್ಠಲ