ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ ಪ
ಗೊಲ್ಲ ಬಾಲಕರನು ನಿಲ್ಲಿಸಿ ಪೆಗಲೇರಿಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ 1
ಕಸ್ತೂರಿ ತಿಲಕವ ಶಿಸ್ತಾಗಿ ಪಣೆಯೊಳಿಟ್ಟುಮಸ್ತಕದಲಿ ಪರವಸ್ತು ತೋರಿದ ಕೃಷ್ಣ 2
ಮುಜ್ಜಗವನೆಲ್ಲ ಬೊಜ್ಜೆಯೊಳಗಿಟ್ಟುಗೆಜ್ಜೆಯ ಕಟ್ಟಿ ತಪ್ಹೆಜ್ಜೆಯನಿಕ್ಕುತ 3
ನಾರೇರು ಬಿಚ್ಚಿಟ್ಟ ಸೀರೆಗಳನೆ ವೊಯ್ದುಮ್ಯಾರೆ ಇಲ್ಲದೆ ಕರತೋರೆಂದ ಶ್ರೀಕೃಷ್ಣ 4
ಅಂಗನೆಯರ ವ್ರತಭಂಗವ ಮಾಡಿದರಂಗವಿಠಲ ಭವಭಂಗವÀ ಪರಿಹರಿಸೋ 5