ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಟೆಯ ನಾಡಿದನೇ | ಶ್ರೀ ಗುರು | ಬೇಟೆಯ ನಾಡಿದನೇ | ಭವದ ಮ | ಮಹಾಟವಿಯೊಳಗಿದ್ದ ಮನವೆಂಬ ಮೃಗದಾ ಪ ಬೋಧ ಕೊಳಲವ | ಸ್ವಾನಂದದಲಿ ಸುಸ್ವರದಲಿ | ತಾನೂದಿ ನಾದವ ಕಿವಿಯೊಳೂಡಿಸಿ ಸು | ಮ್ಮಾನದೀ ನಿಲುವಂತೆ ಮರುಳು ಮಾಡಿದ ಗುರು 1 ಪರಿ ಸಾಧನದಿಂದಲಿ ನವವಿಧ | ಪರಿಯಾದ ಭಕ್ತಿಯ ಪಾಶವನು | ಕೊರಳಿಗೆ ಸಂದಿಸಿ ದೃಢದಿಂದ ಪುನರಪಿ | ಹರಿದಾಡದಂದದಿ ನೆಲೆಗೊಳಿಸಿ ಗುರು 2 ಭಯದಿಂದ ಬೆದರಿ ಭಜ್ಜರಿಕೆಯ ಹಿಡಿದಿರೆ | ಶ್ರಯ ಸುಖದಾಯಕ ನಿಜ ಕರದೀ | ದಯದಿಂದ ಅಭಯವನಿತ್ತು ಬೋಳೈಸಿ ನಿ| ರ್ಭಯ ಮಾಡಿ ಭ್ರಾಂತಿಯ ಚಿಂತಿ ಹರಿಸಿ ಗುರು3 ಸವಿ ಸವಿ ನಾಮಾಮೃತ ಆಹಾರವನಿಕ್ಕಿ | ಜವದಿಂದ ಹೃದಯ ಭೂ ವನದೊಳಗೆ | ತವಕದಿ ವಿಶ್ರಾಂತಿ ಸ್ಥಳದಲಿ ನಿಲ್ಲಿಸಿ | ಅವನಿಲಿ ಸತ್ವ ಚರನ ಬಳಿಯಲ್ಲಿಟ್ಟು ಗುರು4 ಜನವನ ವಿಜನದೊಳಗ ತಾನೇ ತಾನಾಗಿ | ಅನುಮಾನ ಕಳೆಸಿದಾ ಅಂಜುವನಾ | ಅನುದಿನ ಸುಖದೊಳಿಪ್ಪಂತೆ ಮಾಡಿ | ದನು ನಂದನ ನಿಜ ಸಹಕಾರಿ ಮಹಿಪತಿ ಘನಗುರು5
--------------
ಕಾಖಂಡಕಿ ಶ್ರೀ ಕೃಷ್ಣದಾಸರು