ದಯವಾಗು ದೀನ ಬಂಧು ನಿಜ ಭಕ್ತ
ಭಯ ಹರ ಸ್ಮಯ ಮುಖೇಂದು
ಸಿಂಧು ನಿನ್ನಡಿಯ
ಬಯಸುವೆನು ಭಕ್ತನೆಂದು ಪ.
ಶ್ರೀ ಭೂಮಿಯರಸ ನೀನು ದಯವಾಗೆ
ಭಾಗವತರುದಯವಹುದು
ಯೋಗ ಭೋಗಗಳೆಂಬುದು ಮಿತಿರಹಿತ-
ವಾಗಿ ತಾನೇರಿ ಬಹುದು 1
ತಾಪಾಗ್ನಿ ಶಮನಕಾರಿಯೆ ನಿ:ಶೇಷ
ಭೂಪಾಲ ಮೌಳಿಸಿರಿಯೆ
ಶ್ರೀಪತಿಯೆ ನಿನ್ನ ಮರೆಯೆ ಎನ್ನಲ್ಲಿ
ಕೋಪಿಸದೆ ಸಲಹು ದೊರೆಯೆ 2
ಪೂರ್ವ ಗಿರಿನಾಥ ನಿನ್ನ ಸಂಸ್ಮರಣೆ
ಸರ್ವ ದುರಿತೌಘವನ್ನ
ಪರ್ವತ ಶೃಂಗವನ್ನು ನಿಶಿತ ಶತ-
ಪರ್ವದೊಲ್ ತರಿವರನ್ನ 3