ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳೊ ಬಾಲನೆ ವೇಳೆ ಮೀರುತಿಹುದು ಪ ಕೇಳುತಿಹರು ಯದುಮೌಳಿಯೆಲ್ಲಿ ಎಂದು ಅ.ಪ ಎದ್ದು ಬಾರೆಲೋ ಮುದ್ದು ಬಾಲಕೃಷ್ಣ ಪದ್ಧತಿಯಲಿ ಕ್ಷೀರ ಸಿದ್ಧವಾಗಿಹುದು 1 ಜಾಣ ನಿನ್ನಯ ವೇಣುನಾದ ಕೇಳೆ ಏಣನಯನೆಯರು ಕಾಣ ಬಯಸುತಿಹರು 2 ಯಮುನಾ ತೀರದಿ ಸುಮಲತೆಗಳಲ್ಲಿ ಕಮಲನಯನ ನಿನ್ನ ರಮಿಸ ಬಯಸುತಿಹರು 3 ಮೌನಿಜನರು ತಮ್ಮ ಸ್ನಾನ ಮುಗಿಸಿ ನಿನ್ನ ಜ್ಞಾನ ಪೊಂದೆ ಗುಣಗಾನ ಮಾಡುತಿಹರು 4 ನಿನ್ನ ಪ್ರಿಯ ಜನರನ್ನು ಕಾಯಿಸಲು ಇನ್ನು ತರವೇನೋ ಪ್ರಸನ್ನವದನನಾಗಿ 5
--------------
ವಿದ್ಯಾಪ್ರಸನ್ನತೀರ್ಥರು
ಧೀರೇಂದ್ರ ಧೀರೇಂದ್ರ ಪ. ಧೀರ ಮೂಲರಾಮನ ಪದಕಮಲವ ತೋರು ಮನದಿ ನೀ ಕುಣೀಕುಣಿದಾಡುವೆ ಅ.ಪ. ವರದಾ ತೀರದಿ ವರಗಳ ಕೊಡುತಲಿ ಮರುತಮತಾಂಬುಧಿ ಚಂದಿರನೆನಿಸಿದ 1 ಕುಷ್ಟಾದಿ ಬಹು ದುಷ್ಟ ಗ್ರಹಗಳ ಕುಟ್ಯೋಡಿಸುತ ಅಭೀಷ್ಟವಗರೆಯುವ 2 ಮುನಿ ಮೌಳಿಯೆ ನಿನ್ನನು ಸ್ತುತಿಗೈಯುತ ಘನ ಭಕ್ತಿಯೊಳಾಂ ಕುಣಿಕುಣಿದಾಡುವೆ 3 ಅರ್ಥಿಯಿಂದ ನಾ ನರ್ತನಗೈಯುವೆ ಸುತ್ತಿ ಸುತ್ತಿ ದಾಸತ್ವದ ನೇಮದಿ 4 ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲಪ್ರಿಯ ಕೃಷ್ಣನ ಚರಣವ ಥಟ್ಟನೆ ತೋರಿಸೋ 5
--------------
ಅಂಬಾಬಾಯಿ
ನಂಬು ನಂಬು ನಾರಾಯಣನ ಈಮಿಕ್ಕ ದೈವಗಳು ಕಾಯಬಲ್ಲವೆ ಪ. ಅಂಬರದಿ ಧ್ರುವನ್ನ ನೋಡು ಈ ಭಕ್ತಿಮೌಳಿಯೆಂಬೊ ಪ್ರಹ್ಲಾದನ್ನ ನೋಡುಕುಂಭಿಣಿಯೊಳು ವಿಭೀಷಣಗೆ ಶ್ರೀರಾಮ ಕೊಟ್ಟತುಂಬಿದ ಭಾಗ್ಯವ ನೋಡಯ್ಯ 1 ಹಿರಣ್ಯಾಕ್ಷನೆಂಬೊ ದೈತ್ಯನ ಆ ಸಿರಿಯೆಲ್ಲಕರಗಿ ಹೋದದ್ದು ನೋಡಯ್ಯದುರುಳರಾವಣ ಏನಾದ ಆ ದುಃಖವನ್ನುಪಾರಂಪರ್ಯದಿಂದ ಕೇಳಯ್ಯ 2 ನ್ಯಾಯಕ್ಕಾಗಿ ಮನೆಗೆ ಬಂದ ಶ್ರೀಕೃಷ್ಣನ[ಕಟ್ಟೆಂದ] ಖಳನೇನಾದಹಯವದನನ್ನ ನಂಬಿದ ನಮ್ಮ ಧರ್ಮ-ರಾಯನ ಭಾಗ್ಯ ನೋಡಯ್ಯ3
--------------
ವಾದಿರಾಜ
ಶ್ರೀಮತ್ ತಂದೆವರದಗೋಪಾಲದಾಸ ರಾಯಾವೃಂದದಿಂದಲಿ ನಿಮಗೊಂದಿಸುವೆನೋ ಜೀಯಾ ಪ. ಇಂದಿನವರೆಗೆ ನಾನಿಂದ್ಯ ಜನರೊಳು ಕೂಡಿನಿಂದ್ಯ ಮಾಡುತ ಪರರ ಡಂಭತನದಲಿ ಮೆರೆದೆನೊಕಂದನಾ ಕುಂದುಗಳ ಒಂದನೆಣಿಸದೆ ಗುರುವೇಮಂದಜನ ರಾಶಿಯೊಳು ಬೆಂದುಹೋಗುವುದನು ಕಂಡುಅಂದದಲಿ ನೀ ಹಿಡಿದೆಳೆತಂದೂ 1 ಮುಂದೆ ಪೇಳುವೆ ಕೇಳೋಚಂದ್ರಮೌಳಿಯೆ ನಿನ್ನ ಪ್ರೀತಿಪಾತ್ರನಾದಸುಂದರಾಂಗನ ಮುಖದೀ ನೀನಿಂದು ಅಘವೃಂದಗಳ ಹೊಡೆದೋಡಿಸೀಮಿಂಚಿನಿಂದಕ್ಷ ರ, ಯ, ಮ ಎಂಬಕ್ಷರಗಳ ಕಲ್ಪಿಸಿಎಂದಿಗೂ ಮರೆಯದಂಥ ತಂದೆವರದವಿಠಲನೆಂಬಅಂಕಿತದಿಂದ ಬಂಧನವ ಮಾಡಿ ಭಾವ ಸಂವತ್ಸರಫಾಲ್ಗುಣ ಶುದ್ಧ ತ್ರಯೋದಶಿಚಂದ್ರವಾರ ಅರುಣೋದಯ ಕಾಲದೀಕಡೆಕೋಳ ಶ್ರೀ ವೆಂಕಟೇಶನ ಸನ್ನಿಧಾನದಿಅನುಗ್ರಹಿಸಿದೆಯೋ ಮಹಾರಾಯಾಮಂದಮತಿ ನಾ ನಿಮ್ಮ ಮಹಿಮೆಯನು ಪೇಳಲೆನ್ನಳವೆತವಪಾದಾರವಿಂದದಿ ಅನವರದ ಜ್ಞಾನ ಭಕುತಿವೈರಾಗ್ಯವನಿತ್ತು ರಕ್ಷಿಸಬೇಕೋತಂದೆವರದವಿಠಲದೂತಾ ಮನೋ ನಿಯಾಮಕ ದೊರೆಯೇ
--------------
ಸಿರಿಗುರುತಂದೆವರದವಿಠಲರು