ಬರಡು ಕಣ್ಗಳಿದ್ದರೇನು ಮನದ ಕಣ್ಣ ತೆರೆಯದ ಪ.
ತರಳಗೊಲಿದ ವರದರಾಜದೊರೆಯ ನಿಜವನರಿಯದ ಅ.ಪ.
ನಾರದಾದಿ ಮೌನಿವರರು ಸಾರಿಬಂದು ಸೇವಿಸಿ
ಸಾರಸಾಕ್ಷನ ಮನವನೊಲಿಸಿ
ಸಾರಭೂತರೆನಿಸಿದರು ಮನದ ಕಣ್ಣ ತೆರೆಯದಿಂತು 1
ತರಳಗೊಲಿದು ಕಂಬದಿಂದ ಬಂದು
ಹಿರಣ್ಯನುರವ ಬಗೆದು ಕರುಳಮಾಲೆ
ಧರಿಸಿ ಮೆರೆವ ನರಹರಿಯ ಕಾಣದ 2
ಈ ಕಳಂಕವೆಲ್ಲ ತೊಳೆದು
ಶ್ರೀಕಟಾಕ್ಷಕೆ ಪಾತ್ರನಾಗಲು 3
ಶರಧಿಶಯನ ಪರಮಪಾವನೆ
ಶರಣರಕ್ಷಕನೀತನ ವರದ ಶೇಷಶೈಲಧಾಮನ
ವರದಿ ಪಡೆವೆ ಮನದಕಣ್ಗಳಂ 4