ಮಂಗಳಂ ಸುಗುಣಾಭಿರಾಮಗೆ ಮಂಗಳಂ ಶ್ರೀರಾಮಗೆ ಪ
ಮಂಗಳಂ ಲೋಕಾಭಿರಾಮಗೆ ಮಂಗಳಂ ಗುಣಧಾಮಗೆ ಅ.ಪ.
ದಶರಥನ ಸುತನಾಗಿ ಮುನಿವರ ಕುಶಿಕಯಜ್ಞವ ಪಾಲಿಸಿ
ಶಶಿಮುಖಿಯ ಸೀತೆಯನು ಒಲಿಸಿದ ದಿಶಿಸುಭಾಸುರ ನಾಮಗೆ 1
ತಂದೆಯಾಜÉ್ಞಯ ಪೊಂದುತಾಗಲೆ ಬಂದು ವನದಲಿ ನೆಲಸಿದ
ಛಂದದಿಂದಲಿ ಕಂದಭರತನಿಗಂದು ಪಾದುಕೆ ಇತ್ತಗೆ 2
ದಂಡಕಾವನದಲ್ಲಿ ನೆಲಸುತ ಖಂಡಿಸುತ ರಾಕ್ಷಸರನು
ಭಂಡರಾವಣ ಹರಿಸೆ ಸೀತೆಯ ಚಂಡ ಹನುಮನ ಕಂಡಗೆ 3
ವೀರ ವಾಲಿಯ ಕೊಂದು ರಾಜ್ಯವ ಸೂರ್ಯಸುತನಿಗೆ ಪಾಲಿಸಿ
ವಾರಿಜಾಕ್ಷಿಯ ಪುಡುಕಲೋಸುಗ ವೀರರನು ಕಳುಹಿಸಿದಗೆ 4
ಮಾರುತಾತ್ಮಜನಿಂದ ಸೀತಾ ನೀರಜಾಕ್ಷಿಯ ವಾರ್ತೆಯಂ
ಸಾರಿ ಮದನು ಪೊಂದಿ ದಯದಿಂ ವೀರ ಕಪಿವರಗೊಲಿದಗೆ 5
ಧೀರರಾವಣನನ್ನು ಕೊಂದು ನಾರಿ ಸೀತೆಯನೊಲಿಸುತ
ಸಾರಿ ಸಾಕೇತವನು ಮುದದಿಂ ವೀರ ಪಟ್ಟವನಾಳ್ದಗೆ 6
ಜಾನಕೀ ಲಕ್ಷ್ಮೀ ಸಮೇತಗೆ ಮೌನಿವರಗಣ ಸೇವ್ಯಗೆ
ಮಾನವಾಂಬುಧಿ ಪೂರ್ಣ ಚಂದ್ರಗೆ ಧೇನುಪುರ ಶ್ರೀರಾಮಗೆ 7