ಶ್ರೀನಿವಾಸ ಪಾಹಿಮಾಂ ಸದಾ-ಶ್ರಿತಜನಮೋದ
ಮೌನಿಜನಜಾತಕಾಂಬೋದ ಪ
ಭಾನುಕೋಟಿ ತೇಜ
ಸಾಮಗಾನ ಲೋಲ ಶ್ರೀಮುಕುಂದ ಅ.ಪ
ವಾರಿಜಾಸನಾರ್ಚಿತ ಪ್ರಭೋ-ವಂದಾರುಜನ
ಪಾರಿಜಾತ ಧೃತಕೌಸ್ತುಭ
ಶಾರದೇಂದೀವರನೇತ್ರ ಶ್ಯಾಮಳನೀರದ ಗಾತ್ರ
ಸಾರ ಸನ್ಮಣಿ ಕೇಯೂರ ಹಾರ-ಭೂಷಿಸುಪವಿತ್ರ 1
ಸರ್ವಲೊಕಪಾಲಕೇಶ್ವರ-ಸೇವಿತಸುಪರ್ವಗಣಸದ್ಗುಣಾಕರ
ಗರ್ವಿತದೈತ್ಯಾಂಧಃಸೂರ್ಯ-ಪರ್ವತಾಧಿರಾಜಧೈರ್ಯ 2
ಸೃಷ್ಟಿರಕ್ಷಣಾಂತಕಾರಕ-ಸರ್ವಾತ್ಮಕ-ಶಿಷ್ಟದೇವ ದ್ವಿಜರಕ್ಷಕ
ಅಷ್ಟಸಿದ್ಧಿಪ್ರದಾ ಸರ್ವೋತ್ಕøಷ್ಟ ಕಷ್ಟನಿವಾರಣ
ಅಷ್ಟಮೂರ್ತಿ ಪ್ರಿಯ ಸರ್ವಾಭೀಷ್ಟದ ಗೋಪಾಲಕೃಷ್ಣ 3
ಧಾರಿತ ಮಂದರ
ಪಾಕವೈರಿಮಣಿನೀಲ ಪಾವನ ಸುಗುಣ ಶೀಲ
ಶೋಕಮೋಹಸುವಿವೇಕ ನಿತ್ಯೋದಾರ ಶೂರ 4
ಮಾರಜನಕ ಮಂಗಳಾಕಾರ ಮಾರಶತಕೋಟಿ ಸುಂದರ
ಸಾರವಸ್ತುಚಯಪರಿ ಪೂರವ್ಯಾಘ್ರಾದ್ರಿ ವಿಹಾರಧೀರ ವರದ ವಿಠಲ ಸುರಾಸುರಾರ್ಚಿತಾಂಘ್ರಿಕಮಲ 5