ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಮನದಲಿ ಶೋಕಿಸುತ್ತಿರುವೆ ಜಗ ದೇಕನಾಥನು ಸಾಕುತಿರುವನು ನೀ ತಿಳಿಯದಿರುವೆ ಪ ಲೋಕನಾಥನ ವಿವೇಕದಿ ಸ್ತುತಿಸದೆ ವ್ಯಾಕುಲದಿಂ ಮನ ಕಳವಳಗೊಳುತಲಿ ಅ.ಪ ಸೃಷ್ಟಿಕರ್ತನು ರಕ್ಷಿಸುತ್ತಿರುವ ದುರಿತಂಗಳ ರಾಸಿಯ ಬೆಟ್ಟಗಳ ತರಿದೊಟ್ಟು ತಿರುವ ಅದು ತಿಳಿಯದು ನೀ ಬಲು ಕಷ್ಟಗಳ ಪಡುತಿರ್ಪ ವಿಷಯಗಳ ನೋಡುತ ನಗುತಿರುವ ಇಷ್ಟು ಈತನ ಪ್ರಭಾವವು ತಿಳಿಯದೆ ಲಕ್ಷ್ಮಿರಮಣ ರಕ್ಷಿಸೆನ್ನುತ ಸ್ಮರಿಸದೆ 1 ನಾನು ನನ್ನದು ಎಂಬ ಅಭಿಮಾನ ಅದು ಪೋಗುವ ತನಕ ಜ್ಞಾನ ಮಾರ್ಗಕೆ ಇಲ್ಲ ಸಾಧನ- ವೆಂದರಿಯುತ ಮನದಲಿ ಧ್ಯಾನಿಸುತ್ತಿರು ಶ್ರೀನಿಧಿ ಗುಣಗಳನು ಹೀಗಿರುವುದೆ ಪ್ರಧಾನ ಧ್ಯಾನ ಗಾನ ಮೌನಾದಿ ವ್ರತಗಳನು ಶ್ರೀನಿಧಿಗರ್ಪಿಸಿ ಮನ ಹರುಷಿಸದಲೆ2 ತಂದೆ ಶ್ರೀ ವೆಂಕಟೇಶ ವಿಠ್ಠಲನು ಹರಿಭಕುತರ ಮೊರೆಯನು ಛಂದದಿಂದಲಿ ಕೇಳಿ ಪೋಷಿಪನು ಮುಕುಂದನಲಿ ಭಕುತಿ ಎಂದೆಂದಿಗೂ ತಪ್ಪದೆ ಉದ್ಧರಿಸುವನು ನಿಜವೆಂದರಿ ಇದನು ಮುಂದೆ ಕಮಲನಾಭ ವಿಠ್ಠಲ ಭಕುತರ ಸಂದಣಿ ಪೊರೆದು ಸಂತೈಸುತಲಿರೆ ವೃಥ 3
--------------
ನಿಡಗುರುಕಿ ಜೀವೂಬಾಯಿ
45ಅನುದಿನದಲಿ ಬಂದು ತನುವ ಸೂರೆಯಗೊಂಡು |ಎನಗೊಂದು ಮಾತ ಪೇಳೊ ಜೀವವೆ ! ಪಘನಕೋಪದಲಿ ಬಂದು ಯಮನವರಳೆದೊಯ್ವಾಗ |ನಿನಕೂಡಿನ್ನೇತರ ಮಾತೂ ಕಾಯವೆ! ಅ.ಪಬೆಲ್ಲದ ಹೇರಿನಂತೆ ಬೇಕಾದ ಬಂಧು - ಬಳಗ |ನಿಲ್ಲೊ ಮಾತನಾಡತೇನೆ ಜೀವವೆ ||ನಿಲ್ಲಗೊಡದೆ ಬಂದು ಯಮನವರೆಳೆದೊಯ್ವಾಗ |ಬೆಲ್ಲ ಬೇವಾಯಿತಲ್ಲೋ ಕಾಯವೆ ! 1ಸತ್ಕರೆ ಹೇರಿನಂತೆ ಸವಿದುಂಡು ಪಾಯಸವ |ದಿಕ್ಕೆಟ್ಟು ಹೋಗುತೀಯೋ ಜೀವವೆ ||ದಕ್ಕಗೊಡದೆ ಬಂದು ಯಮನವರೆಳೆದೊಯ್ವಾಗ |ಸಕ್ಕರೆ ವಿಷವಾಯ್ತೋ ಕಾಯವೆ ! 2ಅಂದಣದೈಶ್ವರ್ಯ ದಂಡಿಗೆ - ಪಲ್ಲಕ್ಕಿ |ಮಂದಗಮನೆಯರು ಜೀವವೆ ||ಮಂದಗಮನೆ ಯಾರೊ - ಮಡದಿ - ಮಕ್ಕಳು ಯಾರೋ -ಬಂದಂತೆ ಹೋಗ್ತೀನಿ ಕಾಯವೆ ! 3ಸೋರುವ ಮನೆಯಲಿ ಧ್ಯಾನ - ಮೌನಾದಿಗಳು |ಬೇರಿತ್ತು ನಿನ್ನ ಮನಸು ಜೀವವೆ ||ನೀರಮೇಲಣ ಗುಳ್ಳೆ ತೋರಿ ಹಾರಿದಂತೆ |ಯಾರಿಗೆ ಯಾರಿಲ್ಲ ಕಾಯವೆ ! 4ಹುಟ್ಟಿದ್ದು ಹೊಲೆಯೂರು ಬೆಳದದ್ದು ಮೊಲೆಯೂರು |ಇಟ್ಟದ್ದು ಈ ಊರು ಜೀವವೆ ||ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ |ಗಟ್ಟ ಪೂಜೆಯ ಮಾಡೊ ಕಾಯವೆ ! 5
--------------
ಪುರಂದರದಾಸರು