ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಹೇಳಲಿ ನಿನಗಿನ್ನೂ ಗುರು ಧ್ಯಾನದ ಸುಖವನ್ನು ಪ ಚಿತ್ತದ ತಾಪವು ನೀಗಿ ಮಾಯಾವೃತ್ತಿಯ ಗುಣಗಳು ಪೋಗಿ | ಎತ್ತೆತ್ತ ನೋಡಲು ಅತ್ತತ್ತ ಪರಿಪೂರ್ಣ ಸಚ್ಚಿದಾನಂದ ಘನ ನಿಜವಾಗಿಹ 1 ದ್ವೈತಾದ್ವೈತಗಳೆಲ್ಲ ಪೋಗಿ ಶುದ್ಧ ಚೈತನ್ಯವೇ ತಾನಾಗಿ | ಮಾತು ಕಳೆದು ಮೌನವೆಂಬ ಏಕಾಂತದಿ | ಕೂತು ಲಕ್ಷಿಸುವ ಲಕ್ಷಣನೆ ತಾನಾಗಿಹ2 ಮನದ ಕಲ್ಪನೆಯನ್ನು ಮರೆದು ಹಮ್ಮು ತನುವಿನಮಮತೆಯ ಜರಿದು | ಅನುದಿನದಲಿ ಗುರು ರಾಮ ಪದಾಂಬುಜ ತಾನೆಂದು ಕಾಂಬುವ ಘನ ನಿಜವಾಗಿಹ 3
--------------
ಭೀಮಾಶಂಕರ
ಕರುಣದಿ ಭವಾರ್ಣವದಿಂದಾ ದಾಟಿಸುವುದು ಜೀಯಾ ಪ ಯೋನಿ ಮುಖದಿ | ಘಾಶಿಯಾದೆನೋ ವಿಷಯಾಭಿಲಾಷದಿ | ಸೋಸಿದೆನೋ ದು:ಖ ತಾಪವ ಮಾರದೀ | ಮಾಯಾ ಮೋಹದಿ 1 ಧ್ಯಾನ ಮೌನವೆಂಬ ಸಾಧನವನು | ಈ ನಿಯಮ ಯಮ ಯೋಗವನು | ಙÁ್ಞನ ಭಕುತಿ ವೈರಾಗ್ಯವನು | ಏನು ಇಂತರಿಯದ ಮಹಾಪತಿತÀನು 2 ಮುನ್ನ ಮಾಡಿದೆಲ್ಲ ಪರಾಧ ಕ್ಷಮಿಸಿ | ಇನ್ನು ಅಭಯಕರ ಸಿರಸಲಿರಿಸಿ | ಎನ್ನ ಹೃದಯಾಲಂದಃ ಕಾರಹರಿಸಿ | ಸನ್ನುತ ಮಹಿಪತಿ ಎನ್ನ ಭಕ್ತನೆನಿಸಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕ್ಷೇತ್ರ ದರ್ಶನ ಉಡುಪಿಯ ಯಾತ್ರೆಯ ಮಾಡಿ - ಉಡುಪಿಯಾ ಪ ಉಡುಪಿಯ ಯಾತ್ರೆಯನ್ನೆ ಮಾಡಿ | ಭಕ್ತಿಮುಡುಪಿತ್ತು ಪ್ರಮೋದ ಬೇಡಿ | ಆಹನಡುದೇಹ ದೋಳೀಹ | ನಡುನಾಡಿ ಕಮಲದಿಒಡೆಯ ಶ್ರೀ ಕೃಷ್ಣನ್ನ | ಧೃಡ ಭಕ್ತಿಯಿಂ ಭಜಿಸಿ ಅ.ಪ. ಆನಂದ ತೀರಥ ಸರಸಿ | ಯೊಳುಮೀನನಾಗಿ ಬಹು ಈಸಿ | ಹರಿಧ್ಯಾನದಿ ಸ್ನಾನ ಪೊರೈಸಿ | ಮತ್ತೆಮೌನವೆಂಬಾಸನ ಹಾಸಿ | ಆಹಮೂಧ್ರ್ನಿ ಲಲಾಟದೋಳ್ | ಗೋಣು ಮಧ್ಯೋದರಸ್ಥಾನಾದಿಯಲಿ ಹರಿ | ಧ್ಯಾನ ನಾಮವ ಹಚ್ಚಿ 1 ಮಧ್ವ ಕಿಂಕರನೆಂಬೊ ದೊಂದು | ಹರಿವಿದ್ವೇಷಿಗಳ ಬಡಿವೊದೆಂದು | ಮತ್ತೆಸದ್ವೈಷ್ಣವರ ಸೇರ್ವೋದೊಂದು | ಇನ್ನುಬುದ್ಧಿಪೂರ್ವಕ ಹರಿ ಪರನೆಂದು | ಆಹಶ್ರದ್ಧಾಳು ವೆಂದೆನಿಪ | ಮುದ್ದು ಮುದ್ರೆಗಳೈದುತಿದ್ದಿ ವಿಸ್ತರಿಸೂತ | ಕೃದ್ದೋಲ್ಕಾದಿಯನೆನೆ 2 ಸಂಧ್ಯಾ ಮೂಡಿಹುದು ನೀ ನೋಡು | ಕಾಲಮುದ್ಹಿಂದಾಗದಲೆ ನೀ ಮಾಡು | ಯಾವದೊಂದು ಮಂತ್ರಾರ್ಥವ ನೋಡು | ಇನ್ನುಸಂಧ್ಯಾ ನಾಮಕನ ಕೊಂಡಾಡು | ಆಹಛಂದದಿ ನಿನ ಜ್ಞಾನ | ಮುಂದು ಮುಕ್ಕಿಲು ಒಪ್ಪಮಂದೇಹ ದೈತ್ಯರ | ಮಂದಿಯ ಕೊಲ್ಲುತ 3 ಕಂಟಕ ಕಳೆದು ಶರೀರ | ಮಧ್ಯಮಂಟಪ ಚಿಂತಿಸೊ ಧೀರ | ಅದಕೆಎಂಟರ್ಧ ಮತ್ತೊಂದು ದ್ವಾರ | ಕಾಯ್ವಭಂಟ ಮಾರುತನ ವ್ಯಾಪಾರ | ಆಹಎಂಟ್‍ಟಾರು ನಾಲ್ಕು ಸ್ತಂಭ ಮಧ್ಯದಿ ಲಕ್ಷ್ಮಿಮಂಟಪ ಚಿಂತಿಸಿ ಒಂಟಿಯಾಗೊ ಮನದಿ 4 ಕೆಳ ಮುಖಾಬ್ಜವನೇ ನೀ ನೋಡೀ | ಮಂತ್ರಮೂಲದಿಂದ ಮೇಲು ಮಾಡಿ | ಅಲ್ಲಿಇಳೆಯಾಣ್ಮನನ ಚಿಂತೆ ಮಾಡಿ | ಸರ್ವಅಲಂಕಾರ ದಿಂದೊಡಗೂಡೀ | ಆಹನೆಲೆಸೀಹ ಕೃಷ್ಣನ್ನ | ಒಲಿಸೆ ಭಕ್ತಿಯಿಂದಸ್ಥಳ ತನ್ನ ಅರಮನೆ | ಯೊಳು ಕೊಟ್ಟು ಸಲಹುವ 5 ನಿತ್ಯ ಸ್ತವನ | ಆಹಇಂಬಿಟ್ಟು ಸ್ತೋತ್ರದಿ | ಉಂಬುಡುವೋ ಸರ್ವಬಿಂಬನೋಳರ್ಪಿಸಿ | ಸಂಭ್ರಮದಲ್ಲಿರು 6 ಮಧ್ವ ಸರೋವರ ಸ್ನಾನ | ಭಕ್ತಿಶುದ್ಧದಿ ಶ್ರೀಕೃಷ್ಣಧ್ಯಾನ | ಮಾಡೆಹೃದ್ಯನು ಹೃದ್ಯದಿಷ್ಠಾನ | ದಲ್ಲಿಸಿದ್ಧಿಸೂವನು ಗುಣ ಪೂರ್ಣ | ಆಹಮುದ್ದು ಕೃಷ್ಣನು ಗುರು | ಗೋವಿಂದ ವಿಠಲನುಶ್ರದ್ಧೆ ಸತ್ವಕ್ಕೊಲಿವ | ಸಿದ್ಧ ಕನಕನ ನೋಡಿ 7 ತೀರ್ಥ ಕ್ಷೇತ್ರ ಮಾಲಾ 1952 ರಲ್ಲಿ ಇಡೀ ಭರತ ವರ್ಷದಲ್ಲಿ ಪ್ರದಕ್ಷಿಣಾಕಾರವಾಗಿ ಹೊರಟು ಆಸೇತು ಹಿಮಾಚಲ ಪರ್ಯಂತವಿರುವ ಅನಂತ ತೀರ್ಥ ಕ್ಷೇತ್ರಗಳಲ್ಲಿ ಈ ಅಲ್ಪಾಧಿಷ್ಠಾನದ ಯೋಗ್ಯತಾಪ್ರಕಾರ ಬಿಂಬನು ಮಾಡಿ ಮಾಡಿಸಿದ ಯಾತ್ರಾ ಪ್ರಕರಣವೂ, ಮತ್ತೆ, 1954 ರಲ್ಲಿ ಉಡುಪಿ ಇತ್ಯಾದಿ ಪಶ್ಚಿಮ ಕ್ಷೇತಗಳ ಮತ್ತು 1957 ರಲ್ಲಿ ಮಲಖೇಡದಲ್ಲಿ ಬೃಹತೀ ಸಹಸ್ರವಾದಾಗ ಆಕಡೆ ಹೋದಾಗ ನೋಡಿದ ಅನೇಕ ಕ್ಷೇತ್ರಗಳ ಮತ್ತು 1961 ರಲ್ಲಿ ಸ್ವಾದಿ, ದ್ವಾರಕ, ಪುಷ್ಕರ, ಬದರಿ (ದ್ವಿತೀಯಾವರ್ತಿ) ಹೋಗಿ ಬಂದಾಗ ನೋಡಿದ ಯಾತ್ರಾ ಪ್ರಕರಣಗಳ ಜ್ಞಾಪಕಾರ್ಥವಾಗಿ ಈ ತೀರ್ಥಕ್ಷೇತ್ರಮಾಲಾ ಅಸ್ಮದ್ಗುರ್ವಂತರ್ಗತ ಬಿಂಬ ಮೂರುತಿ ಪ್ರೇರಿಸಿದಂತೆ ಬರೆಯಲ್ಪಡುತ್ತೆ :-
--------------
ಗುರುಗೋವಿಂದವಿಠಲರು
ಯೋಗಿಯ ಲಕ್ಷಣವಿದೆಯೋಗಿಯ ಲಕ್ಷಣ ತಿಳಿಯದಡೆ ಇವನಿಂತು ಬಲ್ಲಪಮೌನವೆಂಬುದು ಬಹಳ ಏನೇನೆಂದರು ಕೇಳಕಾನನವೊಂದೇ ಊರು ಒಂದೇ ತಾನೆಂಬುದು ಢಾಳಹೀನವಾದವ ಕೇಳ ತಾನು ಈ ಪರಿಯಲಿಹಯೋಗಿ1ಮಾತಾಡೆ ಮಾತಿಲ್ಲ ಯಾತರ ಗೊಡವೆಯಿಲ್ಲಭೂತ ಹೊಡೆದಂತೆ ಸುಮ್ಮನಿಹನುಭೀತಿಯ ತಾನಿಲ್ಲ ಈ ತೆರದಲಿ ತಾನಿರುತಿಹಯೋಗಿ2ಎದ್ದರೆ ಎದ್ದಿಹ ಬಿದ್ದರೆ ಬಿದ್ದಿಹನಿದ್ದೆಯು ಯಾವಾಗಲು ಕಟ್ಟಿಹುದುಬುದ್ಧಿಯ ಮಾತಿಲ್ಲ ಬುದ್ಧಿಯವರ್ಜಿಸಿಹಇದ್ದು ಈ ತೆರದಿ ತಾನಿದ್ದು ಇರುತಿಹಯೋಗಿ3ಶರೀರದ ಸ್ಮರಣೆಯಿಲ್ಲ ಶ್ರೇಷ್ಠ ಭಾವಗಳಿಲ್ಲಪೋರರ ಕಂಡರೆ ಪೋರರಂತೆಮಾರನ ಬಾಧೆಯಿಲ್ಲ ಮಹಾಕೋಪಗಳಿಲ್ಲಧೀರತನದಲಿಂತು ಇರುತಿಹಯೋಗಿ4ಹೊರಗಿಂತು ತೋರಿಹನು ಹೃದಯದ ಪರಿಯನ್ನುಅರಿವೆನೆಂದರೆ ಅರಿಗಳವಲ್ಲವೋಇರುಳು ಹಗಲು ಚಿದಾನಂದ ಮೂರುತಿಯನುಸ್ಥಿರವೀಗ ತಾನಂದುನಿತ್ಯಬೆರತಿಹನು5
--------------
ಚಿದಾನಂದ ಅವಧೂತರು
ಹುಚ್ಚು ಮಾಡಿದ ಎನ್ನ ಗುರುವುಈ ಹುಚ್ಚನರಿವೊಡೆ ಸಚ್ಚರಿತರಿಗರಿವುಪಆಶ್ರಮ ಧರ್ಮವು ಹೋಯ್ತುನಿರಾಶ್ರಮವೆಂಬುದು ನಿಜವಾಯ್ತುಕುಶ್ರಮಗಳು ನಾಶವಾಯ್ತುಜೀವಭ್ರಮೆಯೆಂಬುದು ಖಿಲವಾಯ್ತು1ಸ್ನಾನವು ಮನದಿಚ್ಛೆಯಾಯ್ತು ಸಂಧ್ಯಾದಿಜಪವೆಲ್ಲ ಮರತೇಹೋಯ್ತುಮೌನವೆಂಬುದು ಬಹಳವಾಯ್ತು ಗುರುತಾನೆಎಂದೆಂಬ ಧ್ಯಾನವುಪೂರ್ಣವಾಯ್ತು2ಕುಲಗಳೆಂಬುವು ಕಾಣದಾಯ್ತುಕುಲಛಲಗಳು ಮರತೇಹೋಯ್ತುಹೊಲೆ ಶುದ್ಧಗಳು ಬರಡುನುಡಿಯಾಯ್ತುನಿಶ್ಚಲನಿಜಾನಂದವೆಂಬುದೇ ಸತ್ಯವಾಯ್ತು3ಭೇದಾಭೇದವು ಮಾಯವಾಯ್ತುಹಾಳುವಾದಗಳು ಕೇಳದಂತಾಯ್ತುಸಾಧುಸಂಗವ ಬಿಡದಂತಾಯ್ತುಸುವಾದವಮಾಡಿ ಸುಖಿಸುವಂತಾಯ್ತು4ದಯೆ ನಿರ್ದಯೆಗಳ ತೊರೆದಾಯ್ತುಭಯ ನಿರ್ಭಯಗಳು ಅದೃಶ್ಯವಾಯ್ತುಜಯಾಪಜಯಗಳು ಕಾಣದಾಯ್ತು ಸ್ವಕ್ಷೇಮಪರಕ್ಷೇಮಗಳ ವಿಚಾರ ಹೋಯ್ತು5ಕೋಪ ತಾಪವು ಶಮವಾಯ್ತುತಾಪತ್ರಯದಬಿತ್ತು ಮೊಳೆಯದಾಯ್ತುಯೋಗ ವಿದ್ಯೆಯ ಹರಿತವಾಯ್ತುನಿರ್ವಾಣವಾಗಿ ಎಲ್ಲ ಇಂತಾಯ್ತು6ಇಂತಹ ಹುಚ್ಚನು ಎನಗೆ ಕವಿಯಿಸಿನಿರಂತರ ಚಿಂತೆಯ ನೆನ್ನ ಪಾಲಿಗಿರಿಸಿಅಂತರಂಗದಿ ತಾನೆ ನೆಲೆಸಿ ಚಿಂತಾಯಕಚಿದಾನಂದ ತಾ ಬೆರೆಸಿ7
--------------
ಚಿದಾನಂದ ಅವಧೂತರು