ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ | ಅಂತರಾತ್ಮಕ ಪೇಳು ಎನಗೊಂದು ಹದನಾ ಪ ವೇದಶಾಸ್ತ್ರವನು ಅರಿಯೆ | ಪುರಾಣ ಪುಣ್ಯಕಥೆ | ಓದಲಿನ್ನರಿಯೆನೊ ಎಂದೆಂದಿಗೂ | ಭೇದ ಭೇದವನರಿಯೆ | ಬಾಗಿ ನಮಿಸುವದನರಿಯೇ | ಆದರಣಿ ಅರಿಯೆ ಆರಾಧಿನಿಯನರಿಯೆ1 ಜ್ಞಾನ ಭಕುತಿಯನರಿಯೆ | ಗಮನ ತೀರ್ಥವನರಿಯೆ | ಧ್ಯಾನವನು ಅರಿಯೆ ದಾಕ್ಷಿಣ್ಯವನು ಅರಿಯೆ | ಮೌನವನು ಅರಿಯೆ ಮಹತಪಸ್ಸು ಮೊದಲೆ ಅರಿಯೆ | ಗಾನವನು ಅರಿಯೆ ಗತಿಮತಿಗಳನು ನಾನರಿಯೆ 2 ಬುದ್ಧಿ ಪೂರ್ವಕವರಿಯೆ | ಯಾತರ ಸೇವಿ ಅರಿಯೆ ಏನು ಅರಿಯೆ | ದಾತಾರ ಜಗದೇಕ | ನಿನ್ನ ನಾಮವನುಣಿಸಿಕಾಯೊ 3
--------------
ವಿಜಯದಾಸ
ನೊಂದು ಬಳಲಿದೆ ದೇವ ಇಂದಿರೇಶ ಸರ್ವೇಶ ಶ್ರೀಶ ತಂದೆ ರಕ್ಷಿಸಿ ಸಲಹೊ ಶ್ರೀನಿವಾಸ ಪ ಕಂದರ್ಪಜನಕ ಕಾರುಣ್ಯವಾರಿಧಿ ದೇವ ಕಂಸಾರಿ ಶೌರಿ ಅ.ಪ ಸ್ನಾನಜಪತಪವ ನೇಮಗಳ ಬಿಟ್ಟೆ ಮೌನವನು ಬಿಟ್ಟೆ ದಾನಧರ್ಮವ ಕೊಡದೆ ಕೈಬಿಟ್ಟೆ ಶ್ರೀನಿವಾಸನ ಪೂಜೆನೇಮ ನಿಷ್ಠೆ ಮಾಡದಲೆ ಬಿಟ್ಟೆ ಶ್ವಾನ ಸೂಕರನಂತೆ ಹೊರೆದೆ ಹೊಟ್ಟೆ ಏನ ಪೇಳಲಿ ಪರರ ದ್ರವ್ಯಪಹರಿಸುತಿಹ ಹೀನ ಜನರ ಸಂಗಮಾಡಿ ಬಳಲಿ ಬರಿದೆ 1 ಹಿಂದಿನ ಪಾಪ ದುಷ್ಕರ್ಮ ಫಲವೋ ಇದು ನಿನ್ನ ಒಲವೊ ಸುಂದರಾಂಗನೆ ರಕ್ಷಿಸೆನ್ನ ಸಲಹೊ ಭವ ಕರೆ ಕರೆಯೋ ಭವಬಂಧ ಸೆರೆಯೊ ಇಂದಿರಾರಮಣ ಬಿಡಿಸೆನ್ನ ಪೊರೆಯೊ ಹಿಂದೆ ಮುಂದೆನಗೆ ಗತಿ ನೀನೆಂದು ನಂಬಿದೆ ದೇವ ಮಂದರೋದ್ಧಾರಿ ಮುಚುಕುಂದ ವರದನೆ ಸ್ವಾಮಿ 2 ಬಿಡುತಿಹೆನು ಬಾಯ ಸುಮನಸರವೊಡೆಯ ಬಿಡು ನಿನ್ನ ಮಾಯ ಕಮಲಸಂಭವ ಜನಕ ಬಿಡದೆ ಕಯ್ಯ ಪೊರೆಯುವದು ಶ್ರೇಯ ಕಮಲಾಕ್ಷ ನಮಿಸಿ ಮುಗಿಯುವೆನು ಕಯ್ಯ ಕಮಲ ಪತ್ರಾಕ್ಷ ಸುಜನರ ಕಲ್ಪತರುವೆ ಹೃ- ತ್ಕಮಲದಿ ಪೊಳೆವ ಶ್ರೀ ಕಮಲನಾಭ ವಿಠ್ಠಲ 3
--------------
ನಿಡಗುರುಕಿ ಜೀವೂಬಾಯಿ
ವಸ್ತು ತಾ ಬೇರೆ ಅದೆ | ನಿಜವಸ್ತು ಅರಿತವ ಬಲ್ಲಾ ಪ ಮಣಿ ಎಣಿಸುವದಲ್ಲ ||ಹೊನ್ನು ಹೆಣ್ಣಿಗೆ ಮೆಚ್ಚಿ ಬಣ್ಣದ ಮಾತಾಡಿ |ಚೆನ್ನಿಗ ತನದಿಂದ ತಿರುಗುವದಲ್ಲ 1 ಮಾನ ಮನ್ನಣೆಗಾಗಿ ಜ್ಞಾನದ ಮಾತುಗಳಾಡಿ |ಧ್ಯಾನ ಮೌನವನು ತೋರುವರು |ಮನ್ನಣೆಯಾಗದಿರೆ ಛಾನಸತನದಿಂದ ಜನರ ದೂರುವರಲ್ಲ 2 ಮನವ ಸ್ವಸ್ಥವ ಮಾಡದೆಅನೇಕ ವ್ಯಥೆ ಕೂಡಿ ಕನಕದಾಶೆಗಾಗಿ ಕೆಡಬೇಡ |ಬಲ್ಲ ರಾಯರ ಪ್ರಭು ರುಕ್ಮಭೂಷಣ ಕೂಡಿಕ್ಷುಲ್ಲಕ ತನವ ಬಿಟ್ಟು ಸುಖಿಸಿರಯ್ಯ 3
--------------
ರುಕ್ಮಾಂಗದರು
ಸಕಲ ಕಾಲದಿ ಮಾಡಿದ ಕರ್ಮವು | ಭಕುತಿಯಿಂದಲಿ ಬಂದರ್ಪಿತವೆನ್ನಿ ಉಡುಪಿಯಲಿ ಪ ಯಾತ್ರೆಗಳ ಮಾಡಲಿ ತೀರ್ಥಗಳ ಮೀಯಲಿ | ಸ್ತೋತ್ರಗಳ ಮಾಡಲಿ ಕೊಂಡಾಡಲಿ || ನೇತ್ರದಲಿ ನೋಡಿ ಕರಮುಗಿದು ನಮಸ್ಕರಿಸಲಿ | ಹೋತ್ರವನು ಮಾಡಿ ಹಿತವಾಗಿ ನುಡಿಯಲಿ 1 ದಾನವನು ಮಾಡಲಿ ದಾಕ್ಷಿಣ್ಯವಾಗಲಿ | ಮೌನವನು ಮಾಡಲಿ ಮಾತಾಡಲಿ || ಕಾನನವ ಸೇರಲಿ ಕಂಡಲ್ಲಿ ತಿರುಗಲಿ | ಏನೇನು ಚರಿತೆಗಳ ಮಾಡುತಿರಲಿ 2 ಪುಣ್ಯವಾದರು ಲೇಸೆ ಪಾಪವಾದರು ಹರಿ | ಮನ್ನಿಸಿ ತಾನೀಗ ತೆಗೆದುಕೊಂಡು || ತನ್ನ ಸಮೀಪದಿ ಇಟ್ಟುಕೊಂಡು ಅವನ |ಘನ್ನ ಮೂರುತಿ ವಿಜಯವಿಠ್ಠಲ ಪೊರೆವ 3
--------------
ವಿಜಯದಾಸ
ಏಕೆ ದೇಹವನು ದಂಡಿಸುವೆ ವೃಥಾ - ಬಿಡ - |ದೇಕ ಚಿತ್ತದಿ ಲಕ್ಷ್ಮೀಕಾಂತಹರಿಎನ್ನದೆಪ.ಸ್ನಾನವನು ಮಾಡಿ ಧ್ಯಾನಿಸುವೆನೆನುತಲತಿ - |ಮೌನವನು ಪಿಡಿದು ಬಕಪಕ್ಷಿಯಂತೆ |ಹೀನ ಬುಧ್ಧಿಗಳ ಯೋಚಿಸಿ ಕುಳಿತು ಫಲವೇನು ||ದಾನವಾಂತಕನ ನಾಮಕೆ ಮೌನವುಂಟೆ ? 1ಜಪವ ಮಾಡುವೆನೆನುತ ಕಪಟಬುದ್ಧಿಯ ಬಿಡದೆ |ಗುಪಿತದಿಂದಲಿ ನೀನು ಕುಳಿತು ಫಲವೇನು ||ಅಪರಿಮಿತಮಹಿಮ ಶ್ರೀ ನಾರಾಯಣನೆಂದರೆ ||ಸಫಲವಲ್ಲದೆ ಬೇರೆ ಗತಿಯುಂಟೆ ಮರುಳೆ 2ಅಂದಜಾಮಿಳಗೆ ಸ್ಮರಣೆಯ ಮಾತ್ರದಲಿ ಮುಕುತಿ |ಹಿಂದೆ ಶ್ರೀಹರಿಯು ತಾ ಕೊಡಲಿಲ್ಲವೇ ? |ಸಂದೇಹವೇಕೆ ನೀನೊಂದು ಕ್ಷಣವಗಲದೆ |ತಂದೆ ಶ್ರೀ ಪುರಂದರವಿಠಲ ನೆನೆಮನವೆ 3
--------------
ಪುರಂದರದಾಸರು
ಏನಮಾಡಿದರೆನ್ನ ಭವಹಿಂಗದು |ದಾನವಾಂತಕ ನಿನ್ನ ದಯವಾಗದನಕ ಪಅರುಣೋದಯಲೆದ್ದು ಅತಿಸ್ನಾನಗಳ ಮಾಡಿ |ಬೆರಳನೆಣಿಸುತ ಸ್ಮರಿಸಿ ನಿಜವರಿಯದೆ ||ಶರಣು ಸಾಷ್ಟಾಂಗವನು ಹಾಕಿದೆನು ಶತಸಹಸ್ರ |ಹರಿನಿನ್ನ ಕರುಣಾ ಕಟಾಕ್ಷವಿರದನಕ1ಶೃತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ |ಅತಿ ಶೀಲಗಳನೆಲ್ಲ ಮಾಡಿ ದಣಿದೆ ||ಗತಿಯ ಪಡೆಯುವೆನೆಂದು ಗಯೆ ಕಾಶಿಯ ಮಾಡಿದೆನು |ರತಿಪತಿಯ ಪಿತ ನಿನ್ನ ದಯವಾಗದನಕ 2ದಾನವನು ಮಾಡಿದೆನು ಮೌನವನು ತಾಳಿದೆನು |ಙ್ಞÕನ ಪುರುಷಾರ್ಥಕ್ಕೆ ಮನವೀಯದೆ ||ಶ್ರೀನಾಥ ದಯಪೂರ್ಣ ಪುರಂದರವಿಠಲನ |ಧ್ಯಾನಿಸುವರೊಡನಾಡಿ ನೆಲೆಗೊಳ್ಳದನಕ 3
--------------
ಪುರಂದರದಾಸರು