ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೌನಮೇಂ ಪ್ರಾಣೇಶ ಎನ್ನೊಳೀಪರಿರೋಷ ಇನ್ನೇತಕೀ ದ್ವೇಷ ಜೀವಿತೇಶ ಅನ್ಯಾಯಮೇಂಗೈದೆ ನಿನ್ನನಾನೇನೆಂದೆ ನಿನ್ನ ಚರೈಯನೊರೆದೆ ನಿನ್ನ ಮುಂದೆ ಇಷ್ಟು ಮಾತ್ರದಿಯೆನ್ನ ದಿಟ್ಟಿಸದೆ ನೀಂಘನ್ನ ಸಿಟ್ಟಿನಿಂ ಕುಳ್ಳಿಹುದೆ ದಿಟ್ಟತನದೆ ಕರುಣಾಳು ನೀಕೇಳು ತರುಣಿ ನಾ ನಿನ್ನವಳು ಪರರ ಭಾವಿಸಲೊಲ್ಲೆ ನೀನೆ ಬಲ್ಲೆ ಇನ್ನಾದೊಡೀ ಪಂಥವುಳಿದು ದಯದಿ ಕಣ್ತೆರೆದು ನೋಡಿನ್ನು ಮನ್ನಿಸೆನ್ನ ನಿನ್ನುಳಿದು ಕಾಣೆನಾನನ್ಯರನ್ನು ಘನ್ನ ಶೇಷಾದ್ರೀಶನಹುದು ನೀನು
--------------
ನಂಜನಗೂಡು ತಿರುಮಲಾಂಬಾ
ರಮಣಿ ಮಂಜುಳವಾಣಿ ಕಮನೀಯ ಸುಶ್ರೋಣಿ ವಿಮಲ ಪಲ್ಲವಪಾಣಿ ಫಣಿಪವೇಣಿ ಮೀನಾಕ್ಷಿ ಯೀ ಚಿಂತೆ ನಿನಾಂತುದೇಂಕಾಂತೆ ಮೌನಮೇಂ ಮತಿವಂತೆ ಬಿರುಸದೆನಿತೆ ಕುಹಕರುಕ್ತಿಯ ಕೇಳಿ ಕಡುಕೋಪವನು ತಾಳಿ ಬಹುವಿಧದಿ ಬಳಲಿಸುವೆ ವಿಹಿತವೇನೆ ಹೆಬ್ಬುಲಿಯ ತೆರದಿಂದ ಬೊಬ್ಬಿರಿದು ಮತಿಯುಳಿದು ಅಬ್ಬರಿಸಿ ಕೂಗುವರೆ ಅಬ್ಜನೇತ್ರೆ ಕೈಪಿಡಿದ ರಮಣನೊಳು ಮುನಿಸೆ ತರುಣಿ ತಾಪಶಮನವ ಮಾಡು ನೋಡು ರಮಣಿ ಓಪನೆಂದೊಲಿದಾಡು ಕರವನೀಡು ಭೂಪಶೇಷಾದ್ರೀಶನತ್ತ ನೋಡು
--------------
ನಂಜನಗೂಡು ತಿರುಮಲಾಂಬಾ