ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೃಷ್ಟೀಶ ಕೃಪೆದೋರಿದ ಬಾಲನಮಾನನಷ್ಟವ ಜಾರಿಸಿದ ಪ ನ್ಯಾಯಕೆ ಪೋಪಕಾಲದಿ ಪುಟ್ಟಯಾಖ್ಯನ ಸ್ವಪ್ನದಲಿ ತಾಂ- ಬಿಟ್ಟು ಬನ್ನಿರಿಯೆನುತಪೇಳ್ದಾ ಅ.ಪ ಎಲ್ಲಾರ ನಿನ್ನೊಳಗೆ ಸೇರಿಸಿ ಮುಂದೆ- ಉಲ್ಲಾಸಕೊಡುವೆ ನಿನಗೆ ಕಲ್ಲಿನಂದದಿ ಮೌನಧರಿಸುತ- ಖುಲ್ಲಮನುಜರ ಸಂಗವರ್ಜಿಸಿ ನಿಲ್ಲಿಸು ಮನವನೆನುತಲಿ 1 ಗುರುತು ಕಾಣುವದೆಂದಿಗೆ ಪರಮ ತಿರುಮಂತ್ರಾರ್ಥ ಅಷ್ಟಾ- ಕ್ಷರಿಯ ಜಪತಪಧ್ಯಾನಮಾಡುವ ದೊರಯದೆಂದಿಗು ಕೀರ್ತಿ ಎನುತಲಿ 2 ಮತಧರ್ಮಜ್ಞಾನಿಗಳು ಪೇಳಿರುವಂತ ಮತಶಾಸ್ತ್ರವೀಕ್ಷಿಸದೆ ಸತತದೂಷಣೆಗೈದು ಸುಜನರ - ಕ್ಷಿತಿಯ ಭೋಗವನಂಬಿ ಗರ್ವದಿ ಹಿತವತಪ್ಪಿಸಿ ಕರವಪಿಡಿಯುತ 3 ಸ್ಥಿರವಲ್ಲಕಾಯವೆಂದು ಸಾತ್ವಿಕಶೃತಿಯೊ- ಳಿರುವ ಸತ್ಯ ನೋಡೆಂದು ನಿರುತಬೋಧಿಸಿ ಜನನಮರಣವ ತರಿದು ಎನ್ನನೆ ಯಜಿಸು ಯೆನುತಲಿ- ಹರಸಿ ಮೋಕ್ಷವನಿತ್ತ ಆರ್ಯನು 4 ಬಿಟ್ಟು ಸತಿಸುತರೆಲ್ಲರ ಎನ್ನೊಳುಮನವ ನಿಟ್ಟುನಂಬಿದಭಕ್ತರ ಬಿಟ್ಟುಕೊಡೆನಾನೆಂದು ಹೃದಯಾ- ಧಿಷ್ಟಿತನು ತಾನಾಗಿ ಅಭಯವ ಇಷ್ಟಶ್ರೀಗುರುರಂಗನೀಕ್ಷಿಸಿ 5
--------------
ರಂಗದಾಸರು