ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನೆ ಬಂದಿತಮ್ಮಾ ಮರಿ ಆನೆ ಬಂದಿತಮ್ಮಾ ಪ ವೆಂಕಟರಮಣನೆಂಬಾನೆ ಅ.ಪ. ಸಿರಿಯಿಲ್ಲದರಿಲಾರೆನೆಂದಾತುರದಲಿ ಧರೆಗಿಳಿದಾನೇ ವಲ್ಮೀಕ ದೊಳು ಅಡಗ್ಯಾನೇ1 ಯೋಚನೆ ಮಾಡ್ಯಾನೇ2 ಬೇಟೆನಾಡಲು ಹೊರಟ್ಯಾನೆ ದಿಟ್ಟಕುದುರೆಯನೇರ್ಯಾನೇ ಒಂದನು ಕಂಡ್ಯಾನೇ 3 ಪದ್ಮಾವತಿಯಳ ಕಂಡಾನೇ4 ಹಿಂದೆ ಸರಿದಾನೇ 5 ಬಕುಳೆ ಮಾತೆಯ ಕರೆದಾನೇ ಸಕಲವೃತ್ತಾಂತವ ತಿಳಿಸ್ಯಾನೇ ಬೇಗದಿ ಹೋಗಿ ಬಾರೆಂದಾನೇ ಮೌನದಿಂದಲಿ ಮಲಗ್ಯಾನೇ6 ಮಾತೆ ಬರುವುದ ಕಂಡಾನೇ | ಮುದ್ದದಿಂದಲಿ ಎದ್ದುಕುಳಿತಾನೇ ಮಂದಹಾಸದಿಂದ ನಲಿದಾನೇ7 ಬಂಧುಗಳೆಲ್ಲರ ಕರಿಸ್ಯಾನೇ ಮುಂದೆ ಮಾಡಿಕೊಂಡು ನಡೆಸ್ಯಾನೇ ಮದು ಮಗನಾಗಿ ನಿಂತಾನೆ | ಪದುಮಾವತಿ ಕೈ ಪಿಡಿದಾನೇ 8 ಜಯ ಜಯವೆಂದರು ಸುರಬ್ರಹ್ಮಾದಿಗಳು ವಾಣಿ-ಪಾರ್ವತಿಯರು ಜಯ ಜಯ ವೆಂದರುಗಗನದಿ ಅಮರರು ಮದುಮಳ ಮೇಲೆ ಪೂಮಳೆಗರೆದರು 9 ಪನ್ನಗ ಶಯನಗೆ ಮಂಗಳವೆನ್ನಿರೆ ಪರಮ ಕಲ್ಯಾಣಗೆ ಮಂಗಳವೆನ್ನಿರೆ ಶ್ರೀ ವೇಂಕಟ ವಿಠಲಗೆ ಮಂಗಳಾ ಜಯಮಂಗಳಾ10
--------------
ರಾಧಾಬಾಯಿ
ಏನು ಮಾಯವೊ ಹರಿಯೆ ಶ್ರೀನಿವಾಸನೆ ನಿನ್ನ ಧ್ಯಾನಿಸುವವರನು ಪೊರೆವೆ ಸಾನುರಾಗದಲಿ ಪ ಜ್ಞಾನಿಗಳು ಹಗಲಿರುಳು ಮೌನದಿಂದಲಿ ಭಜಿಸಿ ದಾನವಾಂತಕ ನಿನ್ನ ಧ್ಯಾನ ಮಾಡುವರು ಅ.ಪ ಬಡತನದಿ ಬಹು ವ್ಯಥೆಯ ಪಡುತ ಸತಿಸುತರಿರಲು ನುಡಿಯೆ ಭಯ ಭಕ್ತಿಯಲಿ ಒಡೆಯರಿಲ್ಲೆಮಗೆ ಮೃಡಸಖನು ಇಹನೆನಲು ಹಿಡಿಯವಲಿಯ ಕೊಡಲು ಕೆಡದ ಸೌಭಾಗ್ಯವನು ಒಡನೆ ನೀಡಿದೆಯೊ 1 ಅಂದು ದುಶ್ಖಾಸನ ನೃಪನಂದನೆಯ ಬಾಧಿಸುತ ನಿಂದು ಸೀರೆಯ ಸೆಳೆಯೆನೊಂದು ದುಃಖಿಸುತ ಇಂದಿರಾಪತಿ ಕೃಷ್ಣ ಇಂದೆನಗೆ ನೀನೆ ಗತಿ ಎಂದೊಡಕ್ಷಯವಿತ್ತು ಅಂದು ಸಲಹಿದೆಯೊ 2 ಮಡುವಿನಲಿ ಗಜರಾಜ ಪಿಡಿದ ಮಕರಿಗೆ ಸಿಲುಕಿ ಮಡದಿ ಮಕ್ಕಳನಗಲಿ ಕಡೆಗೆ ಸೊಂಡಿಲಲಿ ಪಿಡಿದ ಕುಸುಮವನು ಜಗದೊಡೆಯಗರ್ಪಿತವೆನಲು ದಡದಡನೆ ಬಂದೆಯೊ ಮಡದಿಗ್ಹೇಳದಲೆ 3 ಅಂದು ದೂರ್ವಾಸಮುನಿ ಬಂದು ಶಿಷ್ಯರ ಸಹಿತ ಇಂದೆಮಗೆ ಹಸಿವೆನಲು ನೊಂದು ಶ್ರೀಹರಿಯೆ ತಂದೆ ನೀ ಸಲಹೆನಲು ಬಂದೆ ಬಹಳ್ಹಸಿವೆಯಲಿ ಒಂದು ಪತ್ರದ ಶಾಖ ಉಂಡು ಸಲಹಿದೆಯೊ 4 ಹಿಂದಜಾಮಿಳ ತನ್ನ ಬಂಧುಬಳಗವ ತ್ಯಜಿಸಿ ಅಂದು ಇಹಸುಖದಿ ಆನಂದ ಪಡುತಿರಲು ಬಂದರಾಗ ಯಮಭಟರು ನಿಂದು ಬಾಧಿಸುತಿರಲು ಕಂದನಾರಗನೆನಲು ಅಂದು ಸಲಹಿದೆಯೊ 5 ಚಿಕ್ಕವನು ಪ್ರಹ್ಲಾದ ಮಕ್ಕಳಾಟದ ಧ್ರುವನು ರಕ್ಕಸಾಂತಕನ ಮೊರೆ ಇಕ್ಕಿ ಪ್ರಾರ್ಥಿಸಲು ತಕ್ಕವರಗಳನಿತ್ತು ತಕ್ಕೈಸಿ ಅಣುಗನನು ಮಿಕ್ಕಭಕುತರ ಪೊರೆದೆ ಲಕ್ಕುಮಿಯ ರಮಣ 6 ಈ ಪರಿಯಲಿ ಬಹುಭಕುತರಾಪತ್ತುಗಳ ಹರಿಸಿ ಶ್ರೀಪತಿಯ ರಕ್ಷಿಸಿದಿ ಆಪನ್ನಜನರ ಗೋಪತಿ ಕೃಷ್ಣ ಜಗದ್ವ್ಯಾಪಕನೆ ನೀ ಸಲಹಿ ತಾಪಸರ ಒಡೆಯ ಹೃದ್ವ್ಯಾಕುಲವ ಕಳೆವೆ 7 ಕಾಳಿ ಮಡುವನೆ ಧುಮುಕಿ ಕಾಳಿಂಗನ್ಹೆಡೆ ತುಳಿದೆ ಕಾಳದೇವಿಯರಮಣ ಕಾಲಿಗೆರುಗುವೆನು ಕಾಳಯುಕ್ತಿನಾಮ ಸಂವತ್ಸರದಿ ಸುಜನರಿಗೆ ಭಾಳ ಸುಖಹರುಷಗಳ ಲೀಲೆ ತೋರಿಸುವ 8 ಭ್ರಮಿಸಿ ಇಹ ಸುಖದಿ ಮನ ಶ್ರಮ ಪಡುತಲಿರೆ ದೇವ ರಮೆಯ ರಮಣನೆ ಪೊರೆಯೊ ಮಮತೆಯನು ಬಿಡದೆ ಕಮಲಸಂಭವಜನಕ ಕಮಲನಾಭ ವಿಠ್ಠಲ ಸುಮನಸರ ಒಡೆಯ ಹೃತ್ಕಮಲದಲಿ ಪೊಳೆವ 9
--------------
ನಿಡಗುರುಕಿ ಜೀವೂಬಾಯಿ
ನೀನೆ ಕೃಪಾಳು ಶ್ರೀ ಚನ್ನಕೇಶವನೇ ಜ್ಞಾನಿಗಳನ್ನು ಕಾವ ಸನಕವಂದಿತನೆ ಪ ಶರಣರ ಪೊರೆಯುವ ಪ್ರಣವ ಸ್ವರೂಪನೆ ಸ್ಮರಿಸುವ ದಾಸರ ಮರೆಯ ಬೇಡಯ್ಯ ಅ.ಪ. ದೀನರ ಸಲಹುವ ಭಕ್ರವತ್ಸಲನೇ ಮಾನಿನಿ ದ್ರೌಪದಿ ಮಾನ ಕಾಯ್ದವನೇ ಮೌನದಿಂದಲಿ ನಿಂನ ಧ್ಯಾನ ತತ್ವರನಾದೇ ಪನ್ನಗಶಯನನೇ ಸಲಹೊ ಕರುಣದಲೀ1 ಸನ್ನುತ ಹರಿ ನಿಂನ ಕೀರ್ತನೆ ಪಾಡುವೆ ಜಾನ್ಹಕಿ ರಮಣ ಶ್ರೀ ಕಾಕುತ್ಸ್ಥರಾಮಾ ಹೀನನ ಮಾತನ್ನು ನಲಿಯುತ್ತ ಕೇಳಿ ನೀ ಸಾನುರಾಗದಿ ಕಾಯಾ ಧೇನು ಪಾಲಕನೇ2 ಪಂಕಜನೇತ್ರ ಶ್ರೀ ಪರಮ ಪಾವನನೇ ಲಂಕೇಶನಿಗೆ ಯಮನಾದ ಶ್ರೀಧರನೇ ಶಂಕೆಯಿಲ್ಲದೆ ಕಾಯೊ ದೂರ್ವಾಪುರೇಶನೆ ಅಮಿತ ಸದ್ಗುಣಿಯೇ 3
--------------
ಕರ್ಕಿ ಕೇಶವದಾಸ
ಮುನಿಯುವರೇ ಕೃಷ್ಣಾ ಮುನಿಯುವರೆ ಪ ದಣಿಸಲಾಗದೊ ನಿನ್ನ ನೆನೆವ ಭಕುತರೊಳು ಅ.ಪ ಮುನಿಗಳು ಮನದೊಳು ಕ್ಷಣಬಿಡದಲೆ ನಿನ್ನ ದಣಿಸಿ ಕುಣಿಸುವರೊ ಮೌನದಿಂದಲಿ ನಾ ಮಣಿದು ಬೇಡುವೆ ಬರಿದೆ ಹಣಿದು ಬಿಸುಡುವರೆ ಕೆಣಕಿದವರ ನೀ ಕ್ಷಣದಿ ಕಾಪಾಡಿದೆ 1 ಬಲಿಯ ಯಾಚಿಸಿ ಭಕ್ತಿಬಲೆಗೆ ನೀ ಸಿಲುಕಿದೆ ಶಿಲೆಯನೊತ್ತಿ ಸುಶೀಲೆಯ ಪೊರೆದೆ ಜಲಧಿಶಯನಾ ನೀ ರಥಕೆ ಸಾರಥಿಯಾದೆ ಛಲವೇತಕೆನ್ನೊಳು ನೀನೆ ಗತಿ ಎಂದರೆ2 ಎಂಜಲಾಸೆಗೆ ಸೋತು ಶಬರಿಯ ಪೊರೆದೆ ಸಂಜೆ ಹಗಲೆನ್ನದೆ ಎಂಜಲ ಬಳಿದೆ ಅಂಜದೆ ಅಜಾಮಿಳಗೊಲಿದೆಯೋದೇವ ಅಂಜೆನೊ ಎಂದಿಗೂ ಕುಂಜರವರದಾ 3 ಶಪಥಮಾಡಿ ನಿನ್ನ ಪಂಥವ ಕೆಡಿಸಲು ಕುಪಿತನಾಗಲಿಲ್ಲ ಕುರುಪಿತಾಮಹನೊಳು ಆಪ್ತನಿಮಿತ್ತಬಾಂಧವನೆಂದು ನಿನ್ನ ಪ್ರಾಪ್ತಿಯ ಬೇಡಲು ಬಂದುದಕೆ ಈಗ 4 ಪರಿ ಅಂಕಿತ ಪೇಳದೆ ಬಿಂಕತನದಲಿ ಕಾಲವ ಕಳೆದೆ ಶಂಕರನುತ ಶ್ರೀ ವೇಂಕಟೇಶ ನಿನ್ನ ಕಿಂಕರನೆನಿಸೆನ್ನ ಸಂಕಟ ಹರಿಸೂ5
--------------
ಉರಗಾದ್ರಿವಾಸವಿಠಲದಾಸರು
ಮಂದಿಯಗೊಡವೆ ಇನ್ನೇನು ಮಗಳೆ |ಮುಂದೆ ನೋಡಿ ಹಂಜಿ ನೂಲವ್ವ............ ಪ.ಕಣ್ಣ ಮುಂದಿನ ಕಸವನು ತೆಗೆದು |ಸಣ್ಣಗೆ ನೀ ನೂಲವ್ವ............... ಅಪವಸುಧೆಯ ದೊಡ್ಡ ಮಣೆಯಮಾಡಿ |ಶಶಿರವಿಗಳೆರಡು ಕಂಬವ ಹೂಡಿ ||ಆ ಸಿರಿರಂಗರ ಎರಡು ಚಕ್ರವ ಮಾಡಿ |ದರ್ಶನವೆಂಬುವ ನುಲಿಯನು ಬಿಗಿದು 1ಪರಬ್ರಹ್ಮನಅಳವು ಮಾಡಿ |ಕುರುಡು ನಾಶಿಕ ಬೆನಕದಿ ತಿಕ್ಕಿ ||ಹರಿ ನೀನೆ ಎಂಬ ದಾರವಕಟ್ಟಿ |ವಿರತಿವಿಚಾರದ ಬೆಲ್ಲಗಳಿಕ್ಕಿ2ಜಾÕನವೆಂಬುವ ಕದರನ್ನಿಕ್ಕಿ |ಮಾನಮದವೆಂಬ ಹಂಜಿಯ ಹಿಡಿದು ||ಧ್ಯಾನವೆಂಬ ಎಳೆಯನು ತೆಗೆದು |ಮೌನದಿಂದಲಿ ನೂಲವ್ವ 3ಕಕ್ಕುಲಾತಿ ಕಾಂಕ್ಷೆಗಳೆಂಬ |ಸಿಕ್ಕುದೊಡಕುಗಳನೆ ಬಿಡಿಸಿ ||ಒಕ್ಕುಡಿತೆಯ ಮಾಡಿದ ಮನದಿ |ಕುಕ್ಕಡಿನೂಲು ಕೂಡಿ ಹಾಕಮ್ಮ 4ಇಪ್ಪತ್ತೊಂದು ಸಾವಿರದ ಮೇ -ಲಿಪ್ಪ ನೂರು ಎಳೆಯನು ಹೊಡೆದು ||ತಪ್ಪದೆ ಹುಂಜವಕಟ್ಟಿ ನೀನು |ಒಪ್ಪದಿ ಸೀಳು ಇಳುವಮ್ಮ 5ಸದ್ಯದಿ ನೀ ಜಾಡರಲ್ಲಿ |ಸಿದ್ಧಬದ್ಧ ಸೀಳುಗಳ ಹಾಕಿ ||ವಿದ್ಯೆಯೆಂಬುವ ಹಚ್ಚಡವನ್ನು |ಬುದ್ಧಿಯಿಂದಲಿ ನೇಯಿಸಮ್ಮ 6ಒಪ್ಪುವಾತ್ಮ ಪರಮಾತ್ಮನೆಂಬ |ಒಪ್ಪ ಎರಡು ಹೋಳುಗಳಹಚ್ಚಿ ||ತಪ್ಪದೆ ಪುರಂದರವಿಠಲನ ಪಾದಕೆ |ಒಪ್ಪಿಸಿ ಕಾಲವ ಕಳೆಯಮ್ಮ 7
--------------
ಪುರಂದರದಾಸರು