ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನಗೆ ಅಂಜುವನಲ್ಲ ನೀರಜಾಕ್ಷ ಪ ಮನವಚನ ಕಾಯದಿಂ ನಿನ್ನವರಿಗಂಜುವೆನುಅ ರಾಗದಿಂದಲಿ ಇಂದ್ರದ್ಯುಮ್ನ ಭೂಪಾಲಕನು ಯೋಗ ಮಾರ್ಗದಿ ನಿನ್ನ ಭಜಿಸುತಿರಲು ಯೋಗ ಕುಂಭೋದ್ಭವನು ಬಂದು ಶಾಪವೆ ಕೊಡಲು ಆಗ ಮೌನದಲವನನೊಪ್ಪಿಸಿದ ಬಗೆ ಬಲ್ಲೆ 1 ಗುಣವಂತರೀರ್ವರು ಜಯವಿಜಯರು ನಿನ್ನ ಅನುಗಾಲ ಬಾಗಿಲನು ಕಾಯುತಿರಲು ಸನಕಾದಿಗಳು ಬಂದು ಶಪಿಸಲಾಕ್ಷಣದಲ್ಲಿ ಸನುಮತದಲವರ ನೀನೊಪ್ಪಿಸಿದ ಬಗೆಬಲ್ಲೆ 2 ನೃಗರಾಯ ಪುಣ್ಯ ಬರಬೇಕೆನುತ ವಿಪ್ರರಿಗೆ ನಿಗಮೋಕ್ತಿಯಿಂದ ಗೋದಾನ ಕೊಡಲು ಜಗಳ ಪುಟ್ಟಿತು ನೋಡು ಅನ್ಯೋನ್ಯರೊಡಗೂಡಿ ಮಿಗೆ ಶಾಪ ಕೊಡಲವನನೊಪ್ಪಿಸಿದ ಬಗೆ ಬಲ್ಲೆ 3 ಉಣಲಿತ್ತರೆ ಉಂಡು ಪೋಗಲೊಲ್ಲದೆ ಒಂದು ತೃಣದಲ್ಲಿ ಗೋವನ್ನೆ ರಚಿಸಿ ನಿಲಿಸಿ ಮುನಿಪ ಗೌತಮನಿಗೆ ಗೋಹತ್ಯವನು ಹೊರಿಸಿ ಕ್ಷಣದೊಳಗೆ ಅವನ ನೀನೊಪ್ಪಿಸಿದ ಬಗೆ ಬಲ್ಲೆ 4 ಅನಪರಾಧಿಗಳಿಗೆ ಇನಿತಾಯಿತೋ ದೇವ ಎನಗೆ ತನಗೆಂಬುವರಿಗಾವ ಗತಿಯೊ ಮಣಿದು ಬೇಡಿಕೊಂಬೆ ವಿಜಯವಿಠ್ಠಲರೇಯ ನಿನಗಿಂತ ಭಕುತಿ ನಿನ್ನವರಲ್ಲಿ ಕೊಡು ಎನಗೆ 5
--------------
ವಿಜಯದಾಸ