ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಸನ್ಹಿಂಗದವನ ಬಲುಮಡಿ ಮೀಸಲ್ಯಾಕೆ ಆಸೆಬಿಡದವನ ಹರಿದಾಸತ್ವವ್ಯಾಕೆ ಪ ಚಿತ್ತಶುದ್ಧಯಿಲ್ಲದವನ ತತ್ವ ಉಪದೇಶವ್ಯಾಕೆ ಕುತ್ತಿಗೆಯ ಕೊಯ್ವವನ ಭಕ್ತಿಭಾವ್ಯಾಕೆ ಹೆತ್ತವರ ಬಯ್ವವನ ಸತ್ಯರೊಡನಾಟವ್ಯಾಕೆ ಉತ್ತಮರ ಹಳಿವವನ ನಿತ್ಯನೇಮವ್ಯಾಕೆ 1 ಭೇದಕಡಿಯದವನ ಪರಸಾಧನೆಯು ಯಾತಕ್ಕೆ ವಾದಬಿಡದವನ ಸುವೇದ ಓದ್ಯಾಕೆ ಕ್ರೋಧದೊಳುರುಳುವನ ಸಾಧುತ್ವ ಯಾತಕ್ಕೆ ಜಾದುಗಾರನ ಸುಬೋಧವದು ಯಾಕೆ 2 ನಾನೆಂಬುದಳಿಯವ ಜ್ಞಾನಭೋದ್ಯಾಮೃತವ್ಯಾಕೆ ಹೀನಗುಣ ಬಿಡದವನ ಮೌನತ್ವವ್ಯಾಕೆ ದೀನರನು ಬಾಧಿಪರ ದಾನಧರ್ಮವು ಯಾಕೆ ನಾನಾ ಬಯಕ್ಯುಳ್ಳವನ ಧ್ಯಾನವು ಯಾಕೆ 3 ಕುಟಿಲತ್ವ ಸುಡದವನ ಜಟೆ ಕೌಪೀನ್ಯಾತಕೆ ಸಟೆಬೊಗಳಿ ಬದುಕುವನ ಪಟ್ಟೆನಾಮವ್ಯಾಕೆ ದಿಟವರಿಯದಧಮನ ನಿಟಿಲದಲಿ ಭಸಿತ್ಯಾಕೆ ದಿಟ್ಟೆಯರಿಗೆ ಸೋಲುವನ ಹಠಯೋಗವ್ಯಾಕೆ 4 ಯತಿಗಳನು ನಿಂದಿಪನ ಸ್ಮøತಿಶಾಸ್ತ್ರ ಯಾತಕ್ಕೆ ಸತಿಗಳುಕಿ ನಡೆಯುವನ ಅತಿಜಾಣ್ಮೆ ಯಾಕೆ ಸತತ ಖಲು ಕುಹಕನಲಿ ಅತಿಸ್ನೇಹ ಯಾತಕೆ ಕ್ಷಿತಿಯೊಳ್ ಶ್ರೀರಾಮನ ನುತಿಸದವನ್ಯಾಕೆ 5
--------------
ರಾಮದಾಸರು