ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮತಿತಪ್ಪಿ ನಡೆದೆಯಲ್ಲ ಶ್ರೀಲಕುಮೀ ಪತಿಯನು ನೆನೆಯಲಿಲ್ಲ ಹಿತವಾದ ಪಥವು ಸಂತತ ತೋರದೆ ನೀನು ಖತಿಗೊಂಡು ವೆಂಕಟಪತಿಯನು ನೆನೆಯದೆ ಪ ಕೃತ ತ್ರೇತ ದ್ವಾಪರ ಕಲಿಯುಗ ಚತುರ್ವಿಧ ಜೊತೆಯಾಗಿ ಪೋಗಲು ಸಾವಿರ ಬಾರಿಯು ಚತುರಾಸ್ಯ ಬ್ರಹ್ಮಗೆ ಹಗಲೊಂದು ಸಲುವುದು ಗತಿಯ ಕಾಣೆನು ಶ್ರುತಿಯ ಅಯುತ ಕಾಲದೊಳು 1 ಹಿಂದಣ ಭವದೊಳಗೆ ಬಂದ ಭವದೊಳಗೆ ಸಂ - ಬಂಧವಾಗಿಹ ಸತಿಯರೆಷ್ಟು ಮಂದಿಯೋ ಕಾಣೆ ಕಂದರನು ಪಡೆದುದಕೆ ಲೆಕ್ಕ ಸಂಖ್ಯೆಗಳಿಲ್ಲ ತಿಂದ ಅನ್ನವು ಮೇರುವಿಗಿಂತ ಇಮ್ಮಡಿಯು 2 ಕಾಯ ಬಿಡಿಸಿಕೊಂಬುದು ಜೀವ ಅಡಿಗಡಿಗೆ ಹುಟ್ಟುತ್ತ ಸಾವಾಗಯೆನ್ನುವನು ಕಾಲ ಮನದಿ ಬೇಸರಗೊಳಲು ಜಡತೆಕಿಕ್ಕದೆ ಮುಂದೆ ಕಡೆ ಹಾಯು ಮನವೆ 3 ಬಲೆಯ ಕಾಣದೆ ಪಕ್ಷಿ ಮೇವಿನಾಸೆಗೆ ಪೋಗಿ ತಲೆ ಸಿಕ್ಕಿ ಪ್ರಾಣವನು ಕಳಕೊಂಬ ತೆರನಂತೆ ಕುಲವೃಕ್ಷದೊಳಗಿರ್ದ ಫಲದ ಮಮತೆಗಳಿಂದ ಜಲಜನಾಭನ ಬಿಟ್ಟು ಹೊಲಬುದಪ್ಪಿತಲ 4 ಸ್ನಾನಕ್ಕೆ ಚಳಿ ಹುಟ್ಟಿ ಧ್ಯಾನಕ್ಕೆ ಮರವೆಯು ಮೌನಕ್ಕೆ ಕೋಪದ ಬೀಜವಂಕುರಿಸಿತು ದಾನಕ್ಕೆ ಲೋಭವು ಮಾನಕ್ಕೆ ಪಿಸುಣರು ಏನ ಮಾಡಿದರಿವರು ಬಿಡರಲ್ಲೊ ಮನವೆ 5 ಸಂಗಡದಿ ಬರುತಿಪ್ಪ ಶುಭಗಳನು ಕಡೆಗಿಟ್ಟು ಅಂಗಸುಖವ ತಾಳ್ದು ಗೊಂಗುಡಿಯ ಹೊದ್ದು ಕಂಗಳಿಗೆ ಚೆಲುವಾದ ಅಂಗನಾಮೋಹದಿ ಶ್ರೀ- ರಂಗನ ನಾಮದ ಅಂಗಿಯ ಸಡಲಿಸಿದೆ 6 ಹರಿಧ್ಯಾನ ಹರಿಪೂಜೆ ಹರಿನಾಮ ಕೀರ್ತನೆಯು ಹರಿಭಕ್ತಿ ನರ್ತನೆಯು ಹರಿಯ ಸೇವೆಗಳು ಎರವುದೋರದೆ ನೀನು ವರಾಹತಿಮ್ಮಪ್ಪನನು ಸ್ಥಿರವಾಗಿ ನಿಲುವಂತೆ ಕರಕೊಳ್ಳೊ ಮನವೆ 7
--------------
ವರಹತಿಮ್ಮಪ್ಪ
ಯೋಗಕ್ಕೆ ಸ್ಥಿತಿ ನಾಲ್ಕೇ ಒಡವೆಯೋಗಕ್ಕೆ ಈ ನಾಲ್ಕು ಇಲ್ಲದಿದ್ದರೆ ಅದು ಅಡವಿಪಸುಸುಖ ಬುದ್ಧಿಯ ತಾಳ್ದು ಎಲ್ಲ ವ್ಯವಹಾರ ತಾಳ್ದುಹಸಿವೆ ಎಂಬುದುನೀಗಿಮೌನಕ್ಕೆ ಮನಸಾಗಿಅಸನವಿಕ್ಕಿದರುಂಡು ಸಾತ್ವಿಕವ ಕೈಗೊಂಡುಉಸುರೆ ಪ್ರಥಮ ಸ್ಥಿತಿ ಇದುವೆ ಪಶುಸಿದ್ಧಿ1ಕರ್ಮಂಗಳನ ಸುಟ್ಟುವಿಧಿನಿಷೇಧಗಳ ಬಿಟ್ಟುನಿರ್ಮಳತ್ವವ ತಾಳಿ ಪಾಪ ಪುಣ್ಯವ ದೂಡಿದುರ್ಮತಿ ಸನ್ಮತಿಗಳಿಲ್ಲ ದೋಷ ಭೂಷಣವಿಲ್ಲಧರ್ಮವೆರಡನೆಯ ಸ್ಥಿತಿ ಇದುವೆ ಶಿಶುಸ್ಥಿತಿ2ಅಂತರವೆ ಸಹ್ಯವಾಗಿ ಬ್ರಾಂತ್ಯ ಅಸಹ್ಯವಾಗಿನಿಂತು ಕಣ್ಣು ಮುಚ್ಚಿ ಕುಳಿತು ಮೈಯ ಮರೆಯುತಸಂತತಾನಂದದ ಬೆಳಗ ತೋರುತಿರೆ ನಿತ್ಯಬೆಳಗುಇಂತಿದು ಮೂರನೆಯ ಸ್ಥಿತಿ ಇದುವೆ ತೂಕಡಿಸುವ ಸ್ಥಿತಿ3ಧ್ಯಾನವೆಂಬುದನೀಗಿಧಾರಣೆಯದು ಹೋಗಿಹೀನ ಮೈಲಿಗೆ ತೊಳೆದು ಆತ್ಮ ಜ್ಯೋತಿಯು ಹೊಳೆದುತಾನೆ ಮಲಗಿಹನು ರಾತ್ರೆ ದಿವಗಳ ಕಾಣಇದುವೆ ನಾಲ್ಕನೆಯ ಸ್ಥಿತಿ ಇದುವೆ ನಿದ್ರಾಸ್ಥಿತಿಯು4ಒಂದರಿಂದ ಒಂದರಂತೆ ಇವನು ಸಾಧಿಸಬೇಕುಒಂದಲ್ಲದಿರೆ ನಿರ್ವಿಕಲ್ಪಸಮಾಧಿತಾನಿಲ್ಲಸಂದುಗೊಂದಿನ ಹಾದಿಯಲ್ಲವಿಹಂಗಪಥಬಂಧ ಹರನು ಚಿದಾನಂದನೆ ತಾನಂಹನು5
--------------
ಚಿದಾನಂದ ಅವಧೂತರು