ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟೇಶ ಎನ್ನ ಮುಂದೆ ನಿಂತಿದಂತಿದೆ ಪ ದೆಸೆಗೆ ಪ್ರಜ್ವಲಿಸುವ ಎಸೆವ ಕಿರೀಟ ನೊಸಲೊಳು ತಿದ್ದಿದ ನಾಮದ ಮಾಟ ಅಸಮ ನೇತ್ರಗಳಿಂದ ನೋಡುವ ನೋಟ ಬಿಸಜಭವನ ಪರಿಚರಿಯದ ಆಟ1 ತಿಲಪುಷ್ಟದಂದದಿ ಚಲುವನಾಸಗಳು ಬಿಳಿಯ ಮುಗುಳ್ನಗೆ ಸಾಲು ದಂತಗಳು ಗಳದಿ ಮೂರೇಖೆಯು ವೈಜಯಂತಿಗಳು ಹೊಳೆವ ಮೌಕ್ತಿಕದಂತೆ ಕಿರು ಬೆವರುಗಳು 2 ಕೌಸ್ತುಭ ಎಡಗೈಯ ಶಂಖ ಕಿರು ನೇಸರಂದದಿ ಚಕ್ರದ ಬಿಂಕ ಕರದೊಳು ಜಗವನು ತೋರುವ ವೆಂಕ ಮುರುಕ ಕಟಿಯೊಳು ಇರಿಸಿದ ನಿಃಶಂಕ 3 ತೋರ ಮುತ್ತಿನ ಸರ ಮಕರಕುಂಡಲವು ತೋರುವ ಭುಜಕೀರ್ತಿ ಚಕ್ರದ ಸರವು ಹಾರ ಹೀರಾವಳಿ ಬೆರಳುಂಗುರವು ಚಾರು ಭಾಪುರಿ ಘಂಟೆ ಸರಪಣಿಯಿರವು 4 ಕಿರುಡೊಳ್ಳಿಗೊಪ್ಪುವ ನಾಭಿಯ ಸಿರಿಯು ಸರಸಿಜಮಿತ್ರನ ತೇಜದ ಪರಿಯು ಮರುಗು ಮಲ್ಲಿಗೆ ಜಾಜಿ ಸಂಪಿಗೆ ಸರಿಯು ಪರಿಮಳಿಸುವ ಮೈಯ ಪುಳಕದ ಸಿರಿಯು 5 ಉಡಿಯ ಪೀತಾಂಬರ ಮೇಲುಡುದಾg À ಕಡಹದಂದದಿ ಚಲ್ವ ಕಾಲ್ಗಳ ತೋರ ಅಡಿಯಿಟ್ಟು ನಿಂದಿಹ ಬೆಡಗಿನ ವೀರ ಮಡದಿ ಮಹಾಲಕ್ಷ್ಮೀ ಪುಡುಮಿಯುದಾರ 6 ಸ್ವಾಮಿ ಪುಷ್ಕರಣಿಯ ತೀರ ನಿವಾಸ ಭೂಮಿ ವರಾಹತಿಮ್ಮಪ್ಪನ ದಾಸ ಪ್ರೇಮದಿ ರಚಿಸಿದನಿದರೊಳು ಪ್ರಾಸ ತಾಮಸವಿದ್ದರು ತಿದ್ದಲು ಲೇಸ 7
--------------
ವರಹತಿಮ್ಮಪ್ಪ