ಒಟ್ಟು 7 ಕಡೆಗಳಲ್ಲಿ , 1 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಕುಲವಾದರೇನು ಶ್ರೀ ವಾಸು-ದೇವನೆಂದವನೆ ಧನ್ಯಾ ಪ ವಿಪ್ರ ಮಾ-ದಿಗಗಿಂತ ನಿಕೃಷ್ಟನೋ 1 ಊಧ್ರ್ವ ಪುಂಡ್ರಗಳ ಧರಿಸೀ ಶಿರದಲ್ಲಿಪದ್ಮಾಕ್ಷಿ ತುಲಸಿ ಮಾಲೆ ಹಾಕಿಮಧ್ವ ವಲ್ಲಭನೆನ್ನದಾ ಆ ವಿಪ್ರಶುದ್ಧ ಚಾಂಡಾಲನೆನ್ನೋ 2 ಪಂಚ ಮುದ್ರೆಗಳ ಧರಿಸೀ ಲೋಕ ಪ್ರ-ಪಂಚಕ್ಕೆ ದಾಸನೆನಿಸೀಪಂಚ ಭೇದವು ತಿಳಿಯದಾ ಆ ವಿಪ್ರಪಂಚ ಮಹಾ ಪಾತಕಿಯೋ3 ನಾರದಾನೆಂಬವನನೂ ಕುಲದಲ್ಲಿಆರೆಂದು ತಿಳಿಯೊ ನೀನು ನಮ್ಮನಾರಾಯಣನ ಸ್ಮರಿಸಲು ನೀಚ್ಯೋನಿಮೀರಿ ಸುರಮುನಿಯಾದನೋ 4 ವಿದುರ ವಾಲ್ಮೀಕರ ನೋಡು ಅವರ ತುದಿಮೊದಲು ನೀ ತಿಳಿದು ನೋಡು ನಮ್ಮಮದನನಯ್ಯನ ಭಜಿಸಲು ಅವರೆಲ್ಲಸದಮಲಾರಾದುದರಿಯಾ 5 ಜಾತಿ ಕಾರಣವಲ್ಲವೋ ಶ್ರೀ ಹರಿಗೆಭೂತಿ ಕಾರಣವಲ್ಲವೋ ||ಸ್ವಾತಂತ್ರ್ಯವನ್ನು ಮರೆದು ಶ್ರೀ ಹರಿಯಪ್ರೀತ್ಯಾಗಲೆನ್ನಬೇಕೋ 6 ಅನ್ಯ ಕರ್ತೃತ್ವ ಮರೆದು ಶ್ರೀ ಹರಿಗೆನಿನ್ನ ನಿನ್ನವನೆಂದಡೇತನ್ನ ದಾಸ್ಯವನೆ ಇತ್ತು ನಮ್ಮ ಮೋ-ಹನ್ನ ವಿಠ್ಠಲ ಸಲಹುವಾ 7
--------------
ಮೋಹನದಾಸರು
ನಿನ್ನ ಪಾದವ ನಂಬಿ ಅನ್ಯರಾಶ್ರಯವ್ಯಾಕೆಚನ್ನ ಗುರು ವಿಜಯರಾಯ ಪ ಇನ್ನೇನು ಯಿನ್ನೇನು ಯೆನ್ನ ಕುಲಕೋಟಿ ಪಾ-ವನ್ನವಾದುದು ನಿಶ್ಚಯಾ ಜೀಯ ಅ.ಪ. ಪಂಚ ಮಹ ಪಾತಕರೊಳಗೆ ಮೂರನೆ ಕಕ್ಷಿಕಾಂಚನ ದ್ರೋಹಿ ನಾನು ಯೆನ-ಮುಂಚೆ ಬಂದಾಗ ಕೈ ಬಿಡದೆ ಪ್ರಾ-ಪಂಚವನೆ ಬಿಡುಯೆಂದು ನುಡಿದೆ ಯೆನ್ನಸಂಚಿತಾಗಮವೆಲ್ಲ ತೊಡದೆ ಯೆನ್ನ ||ಕಂಚು ಕಟ್ಬುಳಿ ಕಲ್ಲೊತ್ತಿನ ಮೇಣ್ ಕಾಶಿಗೆ ||ಪಂಛೇರು ಮಾಡಿ ನಡದೆ ಬಿಡದೆ 1 ವ್ಯಾಸರಾಯರ ಗುಹೆಯೊಳಗೆ ನವ ಸಂ-ನ್ಯಾಸಿಗಳ ಸಮಕ್ಷಮದಲಿ ಯೆನ್ನದಾಸನಾಗೆನುತ ನೀ ಪೇಳ್ದೆ ಯೆನ್ನವಾಸಿ ಪಂಥಗಳೆಲ್ಲ ತಾಳ್ದೆವೊಲಿದುದೋಷಾಂಕುರಗಳೆಲ್ಲ ಸೀಳ್ದೆ ಸ್ವಾಮಿ ||ಶ್ರೀಶ ಸರ್ವೋತ್ತಮನೆಂದು ನೀ ಪೇಳಿ ಸಂ-ತೋಷದಿಂದೆನ್ನ ಪೊರದೆ ಬಿಡದೆ 2 ನಿತ್ಯ ಮೆರೆವೆ ಯೆನ್ನ ||ಪೂಜಾ ಫಲವೆಂದು ಆವಾಗೆ ನಿನ್ನ ಪದರಾಜೀವ ಧ್ಯಾನಿಸುವೆ ಸ್ವಾಮಿ 3 ಪುಶಿಯು ಜಗವೆಲ್ಲ ದೈವವು ತಾನೆನುತಅಸಮ ವೇದ ಪೌರುಷ ಯೆಂಬಂಥಭಸುಮಧಾರಿಯನೆ ಕರದೆ ಅವನಅಸುರ ಭಾವವನೆಲ್ಲ ಮುರಿದೆ ನಮ್ಮಬಿಸಜಾಕ್ಷ ಪರನೆಂದು ಪೊರೆದೆ ಸ್ವಾಮಿ ||ಎಸೆವ ದ್ವಾದಶನಾಮ ಪಂಚಮುದ್ರಿಯನಿಡಿಸಿನಸುನಗುತಲವನ ಪೊರದೆ ಬಿಡದೆ 4 ವಾಕು |ಅನ್ಯಥಾ ಮಾಡುವುದು ಸಲ್ಲ ಮೋ-ಹನ್ನ ವಿಠ್ಠಲ ಯಿದನು ಬಲ್ಲ ಮುನ್ನಾಪನ್ನಗಶಯನ ಪ್ರಸನ್ನನಾದದಕೆ ಯಿದುಎನ್ನ ಮನೋರಥ ಸಿದ್ಧಿಯೊ ಸ್ವಾಮಿ 5
--------------
ಮೋಹನದಾಸರು
ಬಾಗಿಲು ತೆರೆಯುವ ಹಾಡು ನಾರಿ ಶಿರೋಮಣಿ ವಾರಿಜ ಮುಖಿಯೆ ಗಂಭೀರಳೆ ಬಾಗಿಲು ತೆರೆಯೇ |ಗಂಭೀರಳೆ ಬಾಗಿಲ ತೆರೆಯೇ ಪ ಆರು ನಿನ್ನಯ ಪೆಸರೆನಗೆ ಪೇಳದಲೆ ದ್ವಾರವ ತೆಗೆಯೆನು ನಾನು |ನಾ ದ್ವಾರವ ತೆಗೆಯೆನು ನಾನು ಅ.ಪ. ನೀರೊಳು ಸಂಚರಿಸಿ ಕ್ರೂರ ತಮನ ಕೊಂದಧೀರ ಮತ್ಸ್ಯನು ಕಾಣೆ ನಾರೀ | ನಾಧೀರ ಮತ್ಸ್ಯನು ಕಾಣೆ ನಾರೀ ||ಧೀರ ಮತ್ಸ್ಯನು ನೀನಾದರೊಳಿತು ದೊಡ್ಡವಾರಿಧಿಯೊಳಗಿರು ಹೋಗಯ್ಯ | ದೊಡ್ಡವಾರಿಧಿಯೊಳಗಿರು ಹೋಗಯ್ಯ 1 ಶರಧಿ ಕೂರ್ಮ ಕೂರ್ಮ ಕಾಣೆ ||ಗಿರಿಯ ತಾಳಿದ ಕೂರ್ಮನಾದರೊಳಿತು | ದೊಡ್ಡಮಡುವಿನೊಳಗೆ ಇರು ಹೋಗಯ್ಯ | ದೊಡ್ಡಮಡುವಿನೊಳಗೆ ಇರು ಹೋಗಯ್ಯ2 ಧರೆಯ ಕದ್ದಸುರನ ದಾಡಿಯಿಂದಲಿ ಸೀಳ್ದವರಹ ಕಾಣೆಲೆ ವಾರಿಜಾಕ್ಷಿ | ನಾವರಹ ಕಾಣೆಲೆ ವಾರಿಜಾಕ್ಷೀ ||ವರಹ ನೀನಾದರೊಳಿತು ನಡೆ ನಡೆ | ದೊಡ್ಡವನಾಂತ್ರದೊಳಗಿರು ಹೋಗಯ್ಯ || ದೊಡ್ಡವನಾಂತರದೊಳಗಿರು ಹೋಗಯ್ಯ 3 ಮೃಗ ಮೃಗ ಮೃಗ ನೀನಾದರೊಳಿತು ದೊಡ್ಡಗಿರಿ ಶಿಖರದೊಳಗಿರು ಹೋಗಯ್ಯ | ದೊಡ್ಡಗಿರಿ ಶಿಖರದೊಳಗಿರು ಹೋಗಯ್ಯ 4 ಭೂಮಿ ಈರಡಿ ಮಾಡಿ ಬಲಿಯ ಪಾತಾಳಕಿಟ್ಟವಾಮನ ಕಾಣೇ ವಾರಿಜಾಕ್ಷೀ | ನಾವಾಮನ ಕಾಣೇ ವಾರಿಜಾಕ್ಷೀ ||ವಾಮನ ನೀನಾದರೊಳಿತು ನಿನ್ನಪ್ರೇಮ ಬಂದಲ್ಲಿರು ಹೋಗಯ್ಯ | ನಿನ್ನಪ್ರೇಮ ಬಂದಲ್ಲಿರು ಹೋಗಯ್ಯ 5 ತಂದೆ ಆಜ್ಞೆಯ ಪೊತ್ತು ತಾಯಿ ಸೋದರನ್ನಕೊಂದವ ನಾನೇ ಕೋಮಲಾಂಗೀ | ನಾಕೊಂದವ ನಾನೇ ಕೋಮಲಾಂಗೀ ||ಕೊಂದವ ನೀನಾದರೊಳಿತು ಮುನಿವೃಂದದಲ್ಲಿ ಇರು ಹೋಗಯ್ಯಾ | ಮುನಿವೃಂದಾದಲ್ಲಿ ಇರು ಹೋಗಯ್ಯ 6 ಲಂಡ ರಾವಣನ ಶಿರವ ಚಂಡಾಡಿ ಸೀತೆ ತಂದ | ಪ್ರ-ಚಂಡ ವಿಕ್ರಮ ರಾಮ ಕಾಣೇ | ನಾ ಪ್ರ-ಚಂಡ ವಿಕ್ರಮ ರಾಮ ಕಾಣೇ ||ಪ್ರಚಂಡ ವಿಕ್ರಮನಾದರೊಳಿತು ಕೋತಿಹಿಂಡುಗಳೊಳಗಿರು ಹೋಗಯ್ಯ | ಕೋತಿಹಿಂಡುಗಳೊಳಗಿರು ಹೋಗಯ್ಯ 7 ಮಧುರಾಪುರದಿ ಪುಟ್ಟಿ ಮಾವ ಕಂಸನ ಕೊಂದಚದುರ ಕಾಣೆಲೆ ಶಾಮಲಾಂಗೀ | ನಾಚದುರ ಕಾಣಲೆ ಶಾಮಲಾಂಗೀ ||ಚದುರ ನೀನಾದರೊಳಿತು ನಡೆ ನಡೆ ಗೋಪೇ-ರಧರ ಚುಂಬಿಸುತಿರು ಹೋಗಯ್ಯ | ಗೋಪೇ-ರಧರ ಚುಂಬಿಸುತಿರು ಹೋಗಯ್ಯ 8 ಶುದ್ಧ ಖಳನು ಆಗಿ ವ್ರತವನಳಿದು ಬಂದಬೌದ್ಧ ಕಾಣಲೇ ಮಂದಗಮನೇ | ನಾಬೌದ್ಧ ಕಾಣಲೇ ಮಂದಗಮನೇ ||ಬೌದ್ಧನು ನೀನಾದರೊಳಿತು ನಡೆ ನಡೆ ನಿನ್ನಬುದ್ಧಿ ಬಂದಲ್ಲಿರು ಹೋಗಯ್ಯ | ನಿನ್ನಬುದ್ಧಿ ಬಂದಲ್ಲಿರು ಹೋಗಯ್ಯ 9 ತುರಗವನೇರಿ ಕಲಿಯ ಕಡಿದು ಶಾಂತನ ಸಹೋ-ದರಗೆ ರಾಜ್ಯವನಿತ್ತೆ ಕಾಣೇ | ಸಹೋ-ದರಗೆ ರಾಜ್ಯವನಿತ್ತೆ ಕಾಣೇ ||ಪರಮ ಪುರುಷನಹುದೋ ರಾಹುತರಿರುವಸ್ಥಳದಲ್ಲಿರು ಹೋಗಯ್ಯ | ನೀರಾಹುತರಿರುವ ಸ್ಥಳದಲ್ಲಿರು ಹೋಗಯ್ಯ 10 ಕನ್ಯಾಮಣಿಯೆ ಕೋಮಲೆಯೇ ಗುಣಪೂರ್ಣ ಮೋ-ಹನ್ನ ವಿಠಲ ರಾಯ ಕಾಣೆ | ನಾ ಮೋ-ಹನ್ನ ವಿಠಲ ರಾಯ ಕಾಣೆ ||ಎನ್ನ ಅಪರಾಧ ಕ್ಷಮಿಸಬೇಕು ಎನುತಲಿಚೆನ್ನಾಗಿ ಪಾದಕ್ಕೆರಗಿದಳು ದೇವಿ 11
--------------
ಮೋಹನದಾಸರು
ಬೇಡವೋ ಬ್ರಾಹ್ಮಣ ದ್ರೋಹ ಬೇಡವೋ ಪ ಮಾಡಬೇಡವೋ ನಿನಗೆ | ಕೇಡು ತಪ್ಪದು ಕೊನೆಗೆನಾಡೊಳಗಪಕೀರ್ತಿ | ಗೀಡಾಗಿ ನೀ ಕೆಡ ಅ.ಪ. ಭಾರ ನೀನು - ಅಂಥಅತ್ಯಂತವಲ್ಲವಿದೇನು - ನಿನ್ನ ||ಚಿತ್ತ ದೃಢ ಮಾಡು ಉತ್ತಮ ವಿಪ್ರರವೃತ್ತಿಯ ಸೆಳದು ಉನ್ಮತ್ತನಾಗಿ ಕೆಡ 1 ಸೂಸುವ ನದಿಯೊಳು ಬಿದ್ದು - ಇನ್ನುಈಸಲಾರದೆ ಮುಳುಗೆದ್ದು - ಅಂಜಿ ||ಈಸು ಬುರುಡೆ ಬಿಟ್ಟು ಬೀಸೋ ಕಲ್ಲನೆ ಕಟ್ಟಿಈಸುವ ತೆರನಂತೆ ಭೂಸುರ ದ್ರವ್ಯವು 2 ನೃಗರಾಯನೆಂಬ ಭೂಪತಿಯು - ವಿಪ್ರ-ರಿಗೆ ಗೋದಾನವನಿತ್ತ ಬಗೆಯ ಕೇಳಿ ||ಅಗಲಿ ತಮ್ಮೊಳು ತಾವೆ ಜಗಳ ಪುಟ್ಟಿ ಆ ನೃ-ಪಗೆ ತೊಣ್ಣೆಯಾಗೆಂದ್ಹಗರಣವನೆ ಕೇಳು 3 ರಾವಣನೆಂಬುವ ದುಷ್ಟ - ಅವ-ದೇವತೆಗಳ ಸೆರೆಯಿಟ್ಟ ||ದೇವನರಸಿ ಸೀತಾದೇವಿಯ ನೆಪದಿಂದರಾವಣನ ಕೊಂದು ದೇವತೆಗಳ ಕಾಯ್ದನೊ 4 ಇನ್ನೆಷ್ಟು ಹೇಳಲೊ ಸಾಕ್ಷಿ - ಬ್ರಾಹ್ಮ -ರನ್ನವ ತೆಗೆದರೆ ಶಿಕ್ಷಿ ಮೋ-ಹನ್ನ ವಿಠ್ಠಲರಾಯ ತನ್ನಯ ಭಜಕರಬೆನ್ನ ಬಿಡದಲೆ ಕಾಯ್ವ ಇನ್ನಾದರು ಕೆಡ 5
--------------
ಮೋಹನದಾಸರು
ಲೋಕನೀತಿಯ ಹಾಡುಗಳು ಶ್ರೀನಾಥನ ನಾಮಾಮೃತ ರುಚಿಯೆಲ್ಲ ಪರಮ ಭಕುತಗಲ್ಲದೆ ಪ ಹೀನ ಮನುಜರು ಕೇಳಿ ಹಿರ್ರನೆ ಹಿಗ್ಗಿ ಆನಂದಪಡಬಲ್ಲರೆ ಅ.ಪ. ಕ್ಷೀರ ವಾರಿಯ ಕೂಟ ಮರಾಳ ತಿಳಿವಂತೆನೀರು ಕೋಳಿಯು ಬಲ್ಲುದೆಸಾರಮೇಯನ ಬಾಲ ನಳಿಗೆಯೊಳಿಟ್ಟರೆನೇರವಾಗಬಲ್ಲದೆದಾರು ಪ್ರತಿಮೆಗೆ ಸೀರೆಯನುಡಿಸಲುನಾರಿಯಾಗಬಲ್ಲುದೆಭಾರತಿಪತಿ ಪಾದವರಿಯದ ಮನುಜನುನಾರಾಯಣನ ಬಲ್ಲನೆ1 ಉದರಕ್ಕೆ ಗ್ರಾಸವ ನಡೆಸದ ಮನುಜನುಮದುವೆ ಮಾಡಲು ಬಲ್ಲನೆಸದನಕ್ಕೆ ಜನ ಬರೆ ಕದನವ ತೆಗೆವವಬುಧರು ಎಂಬುದ ಬಲ್ಲನೆವಿಧಿಯಂತೆ ಮಸೆದು ಮತ್ಸರಿಸುವವ ನಮಗೆಹದುಳ ಹಾರೈಸುವನೆಮದವೆಗ್ಗಳಿಸಿ ಮೆರೆವ ಮನುಜ ಹರಿಪದಗಳರ್ಚಿಸಬಲ್ಲನೆ 2 ಕನ್ನಡಿಯೊಳು ರೂಪು ಹೊಳೆದಂತೆ ಹಂಚಿನೊಳ್‍ಇನ್ನು ಕಾಣಿಸಬಲ್ಲುದೆಕಣ್ಣಿಲ್ಲದವನಿಗೆ ಚಿನ್ನವ ತೋರಲುಬಣ್ಣ ಹೇಳಲು ಬಲ್ಲನೆಹೆಣ್ಣಿನ ಮೇಲಿನ ವ್ಯಾಮೋಹ ಬಿಡದವಸಂನ್ಯಾಸಿಯಾಗುವನೆಅನ್ಯ ದೈವಂಗಳ ಭಜಿಸುವ ನರಗೆ ಮೋ-ಹನ್ನ ವಿಠ್ಠಲ ಒಲಿವನೇ 3
--------------
ಮೋಹನದಾಸರು
ಶ್ರೀನಿವಾಸ ಗುರು ಗುಣಾಧೀಶ | ಪಾಲಿಸೊ ಭಕ್ತರ ತೋಷ ನಾ ನಿನ್ನ ದಾಸ ಪ ಏನಾದರು ಎನ್ನ ಹೀನತೆ ಎಣಿಸದೇಸಾನುರಾಗದಿ ನಿನ್ನ ಅಧೀನದೊಳಗಿರುವುದು ಅ.ಪ. ನಿತ್ಯ 1 ಅಗ್ನಿಹೋತ್ರವ ನಡೆಸುವ ತೆರದಿ | ಆಗ್ಯನ್ನನು ಮುದದಿಸುಜ್ಞಾನಿ ನೀನೇ ಕರಗಳ ಪಿಡಿದೀ | ಅಜ್ಞಾನವ ಬಿಡಿಸೀವಿಘ್ನವಗೊಳಿಸದೆ ಸರ್ವಜ್ಞ ಪಾದದೀಮಗ್ನನ ಮಾಡು ಪ್ರಾಜ್ಞ ಶಿರೋಮಣಿ2 ನಿನ್ನ ನಂಬಿದ ಪಾಮರ ನಾನು | ಪಾವನ್ನ ನೀನುಎನ್ನ ಗುಣ ದೋಷಗಳನ್ನು | ಮನ್ನಿಸುವಾದೇನು ಅನ್ನಂತ ಪಾಪಿ ನಾನು ನೀನಾದರೊ ದಯವನ್ನು ಮಾಡುನಿನ್ನ ಪೊಂದಿದೆ ಮಹಾನುಭಾವ 3 ಪಾತಕಿ ನಾನಾದರೂ ನಿನ್ನಚರಣಕ್ಕೆ ಸುತ್ತಿದ ಬಿರಿದು ಬಿಡುವುದುಂಟೇ4 ಅನ್ಯರಿಗಾನು ಎರಗುವನಲ್ಲ | ನೀ ಬಲ್ಲಿ ಎಲ್ಲಮನ್ನಿಸಿ ದಯದಿ ಎನ್ನಯ ಸೊಲ್ಲ ಶಿರಿ ಲ-ಕ್ಷ್ಮೀ ನಲ್ಲ ಎನ್ನ ಪಿಡಿಯೊ ಮೋ-ಹನ್ನ ವಿಠಲನ್ನ ತೋರಿ ಪಾವನನೆನಿಸುವುದು 5
--------------
ಮೋಹನದಾಸರು