ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೇಷಾಚಲನಿಲಯನಾಗಿರುತ ಭಕುತರ ಪೋಷಿಸುತಿಹನ್ಯಾರೆ ಪೇಳಮ್ಮಯ್ಯ ಪ ದೋಷರಾಸಿಗಳನು ನಾಶ ಮಾಡುತಲಿ ಶೇಷಸುರಸೇವ್ಯ ಶ್ರೀನಿವಾಸ ಕಾಣಮ್ಮ ಅ.ಪ. ಕಲಿಯುಗದೊಳು ಪ್ರಜ್ವಲಿಸುತಿರುವೀ ಗಿರಿ- ಗಿಳಿದು ಬಂದನ್ಯಾಕೆ ಪೇಳಮ್ಮಯ್ಯ ನಲಿಯುತ ಸ್ತುತಿಪ ಜನರ ಕಲುಷವ ಕಳೆಯಲು ಒಲಿದು ಬಂದ ದಯದಿಂದಲಿ ಕೇಳಮ್ಮ 1 ಸ್ವಾಮಿ ಪುಷ್ಕರಿಣಿ ತೀರದಿ ನಗುತ ನಿಂದಿಹ ಕೋಮಲಾಂಗನವನ್ಯಾರೇ ಪೇಳಮ್ಮಯ್ಯ ಕಾಮಿನಿ ಪದುಮಾವತಿ ತಾ ಮೋಹಿಸುತಲಿ ಪ್ರೇಮದಿ ವರಿಸಿದ ಭೂಮಿಪ ಕಾಣಮ್ಮ 2 ಬಂಗಾರ ನವರತ್ನ ಮಂಡಿತನಾಗಿ ವಿ ಹಂಗವೇರ್ದನ್ಯಾರೇ ಪೇಳಮ್ಮಯ್ಯಾ ಗಂಗಾಜನಕ ಪಾಂಡುರಂಗನೆನಿಪ ಆ ರಂಗೇಶವಿಠಲನೆ ಇವ ಕಾಣಮ್ಮ 3
--------------
ರಂಗೇಶವಿಠಲದಾಸರು