ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಾದರೂ ಬುದ್ಧಿ ಬಾರದು ಜನಕೆ ಕಣ್ಣಾರೆ ಕಂಡರು ಮರವುದು ಮನಕೆ ಪ. ಉದರದಲ್ಲಿ ರಚಿಸುವರ್ಯಾರು ರೂಪಾ- ತದಧೀನವಾಗಿ ಬರುವದೆಂದು ತಾಪ ಮದ ಮೋಹಾದಿಗಳೆಂತು ಮಸುಕುವದೆಂತರಿ- ತಿದ ನೋಡಿದರೆ ಕರ್ತ ತೋರುವ ಭೂಪ 1 ಕಾರಣ ಸಾಮಥ್ರ್ಯಯಿದ್ದರು ಕಾರ್ಯ ತೋರದು ಕೆಲರಿಗೆ ತನ್ನಂತಾಗುವದು ವಾರಿಧಿ ಶಯನನ ವಶವಾದರಿಂದಹಂ- ಕಾರದಿಂದಲಿ ತನ್ನಿಂದಹದೆಂಬ ಮೋಹದಿ 2 ರಕ್ಷಕರಿಲ್ಲದ ಶಿಶು ಬದುಕುವುದು ಲಕ್ಷ ಜನರ ಯತ್ನದಲಿ ಮತ್ತೊಂದಿರದು ಲಕ್ಷ್ಮೀರಮಣ ವೆಂಕಟೇಶನ ಗತಿಯೆಂದಾ- ಪೇಕ್ಷಿಸದಿರೆ ಕುಕ್ಷಿಯೊಳಗಿಟ್ಟು ಸಲಹುವಾ 3
--------------
ತುಪಾಕಿ ವೆಂಕಟರಮಣಾಚಾರ್ಯ