ಪಾದ ನನ್ನದಯ್ಯಾ ಚನ್ನಕೇಶವ ಪ
ಲಕ್ಷ್ಮೀಕಾಂತ ಜಾಜಿಪುರೀಶ ನೀನೆ ಕಾಯಬೇಕಯ್ಯಾ ಅ.ಪ
ಮನೆಯಾಸೆ ಬಲು ಬಾಧಿಸುತಿದೆ
ತನು ಮಡದಿಮಕ್ಕಳ ಮೋಹವೆಂದಿದೆ
ಮನದ ಚಪಲತೆ ಸಾಧಿಸು ತಂದೆ
ಇನಿತಾಸೆ ಬಿಡಿಸು ಬುದ್ಧನಂತೆ 1
ನಿನ್ನನೆ ನೆನೆವಂತೆ ಮಾಡು ಕೇಶವನೆ
ಜನ್ಮವಿದು ಸಾಕು ಕರೆಯೋ ಮಾಧವನೆ
ನಿನ್ನ ಪಾದದಲಿಟ್ಟು ಪಾಲಿಸು ಮಧುಸೂದ
ನನೆ ಜಾಜಿಪುರಿಯ ಕೇಶವ ಶೆಲ್ವಪಿಳ್ಳೆ 2