ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ ನಂಬಿದೆ ಜನಕೆ ಪಾರುಗಾಣಿಪ ಪರಮ ಕರುಣಿ ಶ್ರೀ ಧೀರೇಂದ್ರವರ್ಯಾ ಪ ನಿತ್ಯ ಅನವರತ ಭಕ್ತಿಯನೆ ಇತ್ತೆನ್ನ ಕಾಯೆಯ್ಯ ಕರುಣಾನಿಧೆ ಅ.ಪ. ವಸುಧೀಂದ್ರ ಕರಕಮಲ ಸಂಜಾತ ವಸುಧೆಯೊಳು ವಾಸವಾಗಿಹ ಭಕ್ತ ಜನಕೆಲ್ಲಾ ವಾಸವಾನುಜ ಶ್ರೀ ವಾಸುದೇವನ ಸರ್ವಜಗಕೆಲ್ಲಾಪಾಯನೆಂಬಾ ವಾಸುದೇವನ ಮತವ ಬೋಧಿಸುತೆ ಸಾತಾರಾ ಪುನಯಾದಿ ನಗರದ ವಾದಿಗಳನೆಲ್ಲಾ ವಾದದಿಂದಲಿ ಗೆದ್ದು ಬಹುಮಾನವನೆ ಪಡೆದು ಮಹಿಯೊಳಗೆ ಬಹು ಖ್ಯಾತಿ ಪಡೆದ ಮಹಾಮಹಿಮ 1 ಭೂರಮಣ ಶ್ರೀಕಾಂತ ಬಹುಕೋಪದಿಂದಲಿ ಕೋದಂಡಪಾಣಿಯಾಗಿ ಭವಜನಕೆ ಮೋಹವನೆ ಬೀರುವಾ ಸಮಯದಲಿ ಬಹು ಭ್ರಾಂತಿಗೊಂಡು ಇರಲು ಭಾರತೀಶನ ದಯದಿ ಭಾಗೀರಥಿಯ ಕೂಡಿ ಬಹುಭಕ್ತಿಯಿಂದ ಒಲಿಸಿ ಭೂಮಿಜೆಯ ಕಳ್ಳನನೆ ಸಂಹರಿಪ ಕಾರ್ಯದಲಿ ಬಹುಸೇವೆಗೈದಂಥ ಪುಣ್ಯಶಾಲಿ 2 ಶ್ರೀರಮಣನಾಜ್ಞೆಯಲಿ ಭಜಿಪ ಭಕ್ತರಿಗೆಲ್ಲ ಬೇಡಿದಿಷ್ಟಾರ್ಥಗಳ ಸಲಿಸುತ್ತಲೀ ಶ್ರೀಕೃಷ್ಣಭಕ್ತರಿಗೆ ಕೃಷ್ಣವಾಗಿಹ ಮನವ ಉತ್ಕøಷ್ಟಗೈಯ್ಯುತ್ತಲೇ ಶ್ರೀಸುರಪನಾಯಕೆ ಸರಿಮಿಗಿಲು ಎಂದೆನಿಪ ಬಹುಭಾಗ್ಯವನ್ನೆ ಪಡೆದು ಶ್ರೀಗುರುತಂದೆವರದ-ಗೋಪಾಲ ಅಸಿ ಬಿಟ್ಟು ಬಿಡದಲೆ ಭಕ್ತಿಯಿಂ ಭಜಿಪ ಗುರುವರ್ಯ 3
--------------
ಸಿರಿಗುರುತಂದೆವರದವಿಠಲರು
ಯಾಕೆಮ್ಮನಗಲಿ ಪರಲೋಕ ಸೇರಿದೆ ಗುರು ಐಕೂರು ನರಸಿಂಹಾರ್ಯ ಪ ಲೌಕಿಕವ ಬಿಟ್ಟು ಸುವಿವೇಕ ನಡೆವ ವಾಕು ಪೇಳ್ವರ ಕಾಣೆ ಲೋಕದೊಳು ನಿನ್ಹೊರತು ಅ.ಪ ಅತಿಮಂದರಾದೆಮಗೆ | ಶ್ರುತಿ ಶಾಸ್ತ್ರ ಪುರಾಣ ಕಥೆ ದಾಸ ಕವಿತೆ ಸತತ ಪೇಳಿ ಮತಿವಂತರೆನಿಸಿ ಸ್ಪÀತ್ವಥ ಪಡಿಸಿ ಮುಂದೆ ಸ ದ್ಗತಿ ಕಾಣಿಸದೆ ಜಗದಿ ಹತಭಾಗ್ಯರನು ಮಾಡಿ 1 ಸಾಧುವರ್ಯನೆ ನಿಮ್ಮ ಪಾದವೇ ಗತಿ ಎಂದು ಸಾದರದಿ ನಿರುತ ನೆರೆನಂಬಿದಂಥ ಸೋದರಿಯರು ಪಂಚ ಭೇದ | ತರತಮಜ್ಞಾನ ಬೋಧಿಸುವರಿಲ್ಲೆಂದು ಖೇದದಿಂದಿರುತಿಹರು 2 ಸೂರಿವರ ನಿನ್ನಗಲಿದಾರಭ್ಯ ಧರೆಯೊಳಗೆ ನೀರಿಂದ ದೂರಾದ ಮೀನಿನಂತೆ ಘೋರ ದುಃಖದಿ ಮುಳುಗಿ ಪಾರುಗಾಣದೆ ದಿಕ್ಕು ತೋರದಾಗಿಹುದೀಗ ಬಾರೋ ಮನಮಂದಿರದಿ 3 ತನುವು ತ್ಯಜಿಸಿದರೇನು | ಅನಿಮಿಷಾಂಶನೆ ನಮ್ಮ ಕನಸು ಮನನಿನೊಳಗೆ ಸುಳಿದಾಡುತ ಕೊನೆಯಲ್ಲಿ ಹರಿನಾಮ | ಅನುಗ್ರಹಿಸುವೆವು ಎಂಬ ಘನ ಅಭಯ ನೀಡೆಂದು ಮಣಿದು ಪ್ರಾರ್ಥಿಪೆನಯ್ಯ 4 ಪುಣ್ಯಪುರುಷನೆ ನಮಗೆ ಇನ್ನಾವ ಬಯಕಿಲ್ಲ ಜನ್ಮ ಜನ್ಮಕೆ ನಿನ್ನ ಚರಣಾಬ್ಜವ ಚನ್ನಾಗಿ ಸೇವಿಸುವ ಘನ್ನ ಸುಖಗರಿಯೆಂದು ನಿತ್ಯ 5 ನಿನ್ನಿಂದ ಸತ್‍ಶ್ರವಣ | ನಿನ್ನಿಂದ ಅಘಹರಣ ನಿನ್ನಿಂದ ಶ್ರೀವಾಯು ಹರಿಯಕರುಣ ನಿನ್ನಿಂದ ಉಪದೇಶ \ ನಿನ್ನಿಂದ ಭವನಾಶ ನಿನ್ನಿಂದ ಬಿಂಬ ದರ್ಶನವು ನಮಗಿನ್ನು 6 ಪಾಮರರ ಅಪರಾಧ ನೀ ಮನಕೆ ತಾರದಲೆ ಹೇಮ ಕಾಮಿನಿ ಭೂಮಿ ಈಮೂರರ ವ್ಯಾಮೋಹವನೆ ಬಿಡಿಸಿ | ಶಾಮಸುಂದರ ಭಕ್ತ ಸ್ತೋಮ ಸಂಗದೊಳಿಟ್ಟು ಪ್ರೇಮದಲಿ ಪಿಡಿಕೈಯ್ಯ 7
--------------
ಶಾಮಸುಂದರ ವಿಠಲ
ಶ್ರೀನಾಥ ಸಲಹೊ ಸತತ ನಿನ್ನ ಪದ ಧ್ಯಾನಾನಂದವಿತ್ತು ಪ ತಂದೆ ನಿನ್ನನುಗ್ರಹದಿ | ಜಗದೊಳಗೆ ಬಂದೆ ಭೂಸುರ ಜನ್ಮದಿ ಪೊಂದಿ ತ್ವತ್ವದ ಭಜಿಸದೆ ಭವದೊಳಗೆ ಬೆಂದು ಬೆಂಡಾದೆನು ನಾ1 ಪಗೆಯಾರುಖಳರು ಎನ್ನ | ಪಾಶದಲಿ ಬಿಗಿದು ಬಂಧಿನಿ ಎಳೆಯುತ || ಬಗೆ ಬಗೆಯ ಮಂಗನಂತೆ ಕುಣಿಸ್ಯಾಡಿ ಹಗರಣವ ಮಾಡುತಿಹರೋ 2 ಪರಸ್ವತಿಯರ ರೂಪನೋಡಿ | ಮರಳಾಗಿ ಬೆರೆತವಳ ಕ್ರೀಡಿಸುತಲಿ ಪರಗತಿಯ ಚಿಂತೆ ಬಿಟ್ಟು | ಪರಮಾತ್ಮ ನರಕಕ್ಕೆ ಗುರಿಯಾದೆನೋ 3 ಧನದಾಪೇಕ್ಷೆಯಿಂದ | ಧನಿಕರ ಮನೆಗ್ಹೋಗಿ ಲಜ್ಜೆ ತ್ಯಜಿಸಿ ಘನದಾತರೆಂದವರನು | ಬಲು ತುತಿಸಿ ದಿನಗಳೆದೆ ಶುನಕನಂತೆ 4 ಹರಿನಿನ್ನವಾಸರದಿ | ಉಪವಾಸ ಇರುಳು ಜಾಗರವ ಜರಿದು ಬರಿದೆ ಕಾಲವ ಕಳೆದೆನೋ ರವಿಸುತಗೆ | ಅರುಹಲು ಬಾಯಿಲ್ಲವೋ 5 ಪವಮಾನ ಕೃತಸುಶಾಸ್ತ್ರ | ಪ್ರವಚನವ ಕಿವಿಗೊಟ್ಟು ಕೇಳಲಿಲ್ಲ ಅವನಿ ದ್ವಿಜರ ಪಾದವ ಸೇವಿಸದೆ ಭಾರ ನಾನಾದೆನೊ 6 ಬಾಯೆಂದು ಕೂಗಿ ಕರೆವೆ | ಸರ್ವೇಶ ಓಯೆಂದು ಬೇಗ ಬಾರೋ || ಮಾಯಾ ಮೋಹವನೆ ಬಿಡಿಸೋ | ನಿನ್ನಂಘ್ರಿ ತೋಯಜಧ್ಯಾನವನಿತ್ತು 7 ಶಿಲೆಯಾದ ಸಲಹಿದ ತೆರದಿಲಿ ತುಳಿದು ಸಲಹಿದ ತೆರದಲಿ ಇಳಿಸುರನ ಮಹತ್ಪಾಪ ಕಳೆದವಗೆ ಸಲೆಮುಕ್ತಿ ಸಲಿಸಿದಂತೆ 8 ಇಂದಿನಾರಭ್ಯವಾಗಿ | ಎನ್ನಿಂದ ನಿಂದ್ಯಕರ್ಮವ ನಡೆಸದೆ ಮಂದರೋದ್ಮರನೆ ನಿನ್ನ |ಸದ್ಭಕ್ತ ವೃಂದದೊಳು ಕೂಡಿಸಯ್ಯ 9 ಅಪರಾಧ ಕ್ಷಮಿಸುವಲ್ಲಿ | ನಿನ್ನಂಥ ಕೃಪಣವತ್ಸಲ ಕಾಣೆ ಕೃಪೆಯಿಂದ ಕರಪಿಡಿಯೊ ಕರಿವರದ ಕೌಸ್ತುಭ ಕೃಷ್ಣ 10 ನಿನ್ನ ನಾಮದ ಭೂಸುರ ಕುಲಹೀನ ಕನ್ಯೆಯಳ ಸಂಗ ಮಾಡಿ ನಿನ್ನ ಪರ್ವತ ಮೆಟ್ಟಿಲು ಅವಗೊಲಿದು ನಿನ್ನಾಪ್ತನೆನಿಸಿದಂತೆ 11 ನಿನ್ನೊಲುಮೆ ಪಾತ್ರರಾದ ಗುರು ಜಗನ್ನಾಥಾಖ್ಯ ದಾಸಾರ್ಯರ ಸನ್ನಿಧಾನದಲಿ ಇಪ್ಪ | ಇವನೆಂದು ಮನ್ನಿಸೊ ಮಹಮಹಿನೆ 12 ದುರಿತ ರಾಶಿ | ಪೇಳಲ್ಕೆ ಭೂಮಿಧರಗಳವಲ್ಲವೋ ಪ್ರೇಮದಿಂದಲಿ ಪಾಲಿಸೋಮಮಸ್ವಾಮಿ ಶಾಮಸುಂದರ ದಯಾಳು 13
--------------
ಶಾಮಸುಂದರ ವಿಠಲ