ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನನುದ್ಧರಿಸಲಾಗದೆ ಚೆನ್ನರಾಯ ಪ. ಎನ್ನನುದ್ಧರಿಸಲಾಗದೆ ಚೆನ್ನರಾಯ ಬಿನ್ನೈಸುವೆಇನ್ನು ಬೇರೆ ಗತಿಯ ಕಾಣೆ ನಿನ್ನ ಚರಣಕಮಲದಾಣೆ ಅ.ಪ. ನಿಗಮ ಉಸುರುತಿರಲು ನಿನ್ನಚರಣವನ್ನು ಶಿರದೊಳಾಂತೆ ಎನ್ನ ಮೇಲಣಕರುಣವಿಲ್ಲದದೇನುಕಾರಣ ಸಲಹಬೇಕುಸುರರ ಮಸ್ತಕದ ಸುಭೂಷಣ 1 ಹಿಂದೆ ನಾನನಾಥನಾಗಿ ಒಂದೆರಡ[ಲ್ಲಾ]ನೇಕ ಜನ್ಮದಿಬಂದು ನರಕಯಾತನೆಯಲ್ಲಿ ನೊಂದು ಬೆಂದು ಬಾಯಬಿಡುತಬಂದೆ ನಿನ್ನ ಪೆಸರುಗೊಂಡೆನೊ ಸನಾಥನಾಗಿಮುಂದೆ ನಾಮಸುಧೆಯನುಂಡೆನೊ ನೀ ಕೃಪಾಳುಎಂದು ನುಡಿವರನ್ನು ಕಂಡೆನೊ 2 ಹಲವು ಮಾತನಾಡಲೇನು ಒಲಿವುದಿನ್ನು ಹರಿಯೆ ನಿನ್ನಸಲಿಗೆಯೊಳೀ ಬಿನ್ನಪವನು ಸಲಿಸುತಿಹೆನು ಮುಂದಕಿನ್ನುಜಲುಮ ಬಾರದಂತೆ ವರವನು ಇತ್ತು ಎನ್ನಸಲಹೊ ದೊರೆಯೆ ನಿನ್ನ ಕರೆಯೆನೊ ಮುಂದೆ ಮುಕುತಿ-ಲಲನೆಯೊಡನೆ ಸುಖದಲಿರುವೆನು 3 ದೇಶವರಿಯೆ ನಾನು ನಿನ್ನ ದಾಸನೆಂದು ಡಂಗುರವನು ಹೊ-ಯಿಸಿ ತಿರುಗುತಿರÀಲು ಮೋಹಪಾಶವೆನ್ನ ಸುತ್ತಿಕೊಂಡುಘಾಸಿ ಮಾಡುತಿರಲು ಬಿಡಿಸದೆ ಇರುವ ಪಂಥವಾಸಿಯೇನು ಇನ್ನು ಅಲೆಸದೆ ಸಲಹೊ ಸ-ರ್ವೇಶ ನಂಬಿದವನ ಕೆಡಿಸದೆ 4 ಎನ್ನ ದುರ್ಗುಣವನ್ನು ಮರೆದು ನಿನ್ನ ಸದ್ಗುಣದಿ ಪೊರೆದುಮನ್ನಿಸಿದರೆ ಲೋಕದೊಳಗೆ ಧನ್ಯನಹೆನು ಜನಮವೆತ್ತಿಉನ್ನತಾಹುದು ನಿನ್ನ ಕೀರುತಿ ನಾಶವಾಹುದುಎನ್ನ ಭವದ ಬಹಳ ಧಾವತಿ ಸಲಹೊಚೆನ್ನ ಹಯವದನಮೂರುತಿ 5
--------------
ವಾದಿರಾಜ
ಪಾಹಿ ಮೋಹನ ವಿಠಲ ಪರಮಕರುಣಾಜಲಧಿ ಮಹದಾದಿ ದೇವ ವಂದ್ಯ | ಮೋಹಪಾಶವ ಬಿಡಿಸಿ ನಂಬಿದವನಿಗೆ ಒಲಿದು ರಹಸ್ಯಮತಿ ಕೊಡುವುದು ಸ್ವಾಮಿ ಪ ನೀನಿತ್ತ ಮಾತುಗಳು ಪೊಳ್ಳಾಗಬಲ್ಲವೆ ಅನಂತ ಜನುಮವಾಗೆ ಆನೊಬ್ಬನೆನ್ನದಿರು ಕೀರ್ತಿಸುವ ನರನೆಂದು ಜ್ಞಾನಿಗಳಿಗರಿವಾಗಿದೆ ಏನಯ್ಯ ನಿನ್ನಂಘ್ರಿ ಭಜಿಸದಲೆ ಇರುತಿಪ್ಪ ಮಾನವನ ಕ್ಲೇಶಕೆಣಿಯೆ ಆನಂದ ನಂದನನೆ ತೃಣವ ಪಿಡಿದು ರುತುನ ವನು ಮಾಡಿ ತೋರುವ ಸ್ವಾಮಿ 1 ನಿನ್ನಧೀನ ಕರ್ಮಸ್ವಭಾವ ಮೊದಲಾಗಿ ಅನ್ಯಥಾ ಯಲ್ಲಿ ಕಾಣೆ ಮನ್ನಿಪುದು ಮುದದಿಂದ ಮುಂದನೆನ್ನದೆ ಎನ್ನ ಬಿನ್ನಪವ ಬರಿದೆನಿಸದೆ ಅನ್ಯನಿವನಲ್ಲವೊ ಎನ್ನನ್ನೆ ಪೊಂದಿದ ನಿನ್ನ ದಾಸನ ದಾಸನು ಉನ್ನಂತ ಗುಣವಿತ್ತು ಉರುಕಾಲ ಒಲಿದು ಪ್ರ ಸನ್ನನಾಗೋ ಪಾವನ್ನರನ್ನ 2 ನರರಿಗೆ ಸಾಧನ ಸತ್ಕೀರ್ತನೆ ಎಂದು ಪರಮೇಷ್ಠಿ ಒರೆದನಿದಕೊ ಪರಿಪರಿ ಬಗೆಯಿಂದ ಕರ್ಮಗಳ ಮಾಡಿದರೆ ದುರಿತ ಬೆಮ್ಮೊಗವಾಗವು ಪಿರಿದಾಗಿ ಬೇಡಿದೆನೊ ವಿಜಯವಿಠ್ಠಲ ನಿನ್ನ ಶರಣರೊಳಗಿಟ್ಟು ಕಾಪಾಡು ಸ್ಥಿರವಾಗಿ ಅಂಕಿತವ ಪ್ರೇರಿಸಿ ಕೊಡಿಸಿದ್ದು ಧರೆಯೊಳಗೆ ಪರಿಪೂರ್ಣವಾಗಿ ಇರಲಿ ಸ್ವಾಮಿ3
--------------
ವಿಜಯದಾಸ