ತೆರಳಿದರೋ ತಂದೆ ಮುದ್ದು ಮೋಹನರೂಮರಳಿ ಬಾರವ ಪುರಿ ನರಹರಿ ಪೂರಕೇ ಪ
ತರಳತನಾರಭ್ಯ ದ್ವಾದಶ ವತ್ಸರಪರಿಸರಾಗಮ ಪಠಿಸಿ ನಿಪುಣನೆನಿಸೀ |ಇರಲು ಬಂದರು ಮುದ್ದು ಮೋಹನ್ನದಾಸರುಕರಿಗಿರಿ ನರಹರಿ ರಥವ ಉತ್ಸವಕೇ 1
ಕರಿಗಿರಿ ಸನಿಯದ ನರಸಿಪುರದೊಳಿದ್ದವರಸುಬ್ಬರಾಯಾಖ್ಯ ಭರದಿಂದ ಬರುತಾ |ಗುರು ಮುದ್ದು ಮೋಹನರ ಪದಪಾಂಸು ಶಿರದಲ್ಲಿಧರಿಸಿ ಬಿನ್ನವಿಸಿದರುಪದೇಶ ಕೊಂಡಿರೆಂದೂ 2
ಪರಿಕಿಸಲೋಸುಗ ಅರುಣ ಉದಯ ಮುನ್ನಕರಿಗಿರಿ ಪುರಬಿಟ್ಟು ತೆರಳಲು ಅವರೂ |ಭರದಿ ಅಡ್ಡೈಸುತ ಗುರುಪಾದದಲಿ ಬಿದ್ದುವರ ಉಪದೇಶವ ಕೈಗೊಂಡ ಧೀರಾ 3
ಶುಭ ಅಂಕಿತವಾ |ತಂದೆ ಮುದ್ದು ಮೋಹನ್ನ ವಿಠ್ಠಲನೆಂದುಛಂದೋಗಮ್ಯನೆ ದಿವ್ಯ ನಾಮವನಿತ್ತರು 4
ದಾಸ ದೀಕ್ಷೆಯ ಪೊತ್ತು ದಾಸ ಕೂಟವ ನೆರಸಿಶೇಷಗಿರೀಶನೆ ಸರ್ವೇಶನೆನುತಾಎಸೆವ ಅಂಕಿತ ಮಂತ್ರ ಉಪದೇಶಗೈಯ್ಯುತ್ತದಾಸರ ಕ್ಲೇಶವ ಹರಿಸೀದ ಗುರುವೇ 5
ವರಚೈತ್ರ ಪಂಚಮಿ ವರುಷವು ವಿಕ್ರಮಶರಣರ ಪೊರೆಯಲು ಕರಿಗಿರಿಯಲ್ಲೀ |ಗುರು ಮುಖ್ಯ ಪ್ರಾಣ ಪ್ರತೀಕವ ನಿಲಿಸುತಆರು ಮೂರನೆ ದಿನ ಹರಿಯ ಸೇರುವೆ ನೆನುತಾ 6
ನರಲೀಲೆ ಕೊನೆಗೈದು ಪರಮ ಪುರುಷಹರಿಶಿರಿಯರಸಗೆ ಪ್ರೀತೆ ಪಾತ್ರನೆನಿಪಾನೂ |ವರ ಗುರು ಗೋವಿಂದ ವಿಠಲನ ಚರಣವಸ್ಮರಿಸಿ ಹಿಗ್ಗುತ ಪೊರಟ ನೀರಿಕ್ಷಿಸುತಾ7