ಎಷ್ಟು ಭಜಿಸಿದರು ಸಾಕಷ್ಟು ನನಗಾಗದೊ ಪ
ಮೂರ್ತಿ ಅಂಗಜಪಿತ ಮೋಹನಾಂಗಚೆಂಗೊಳಲನು ನುಡಿಸುತಲಿರುವಭಂಗಿಯಲಿ ನಿನ್ನ ರೂಪಕಂಗಳಿಂದ ನೋಡಿ ನೋಡುತ 1
ಪೂರ್ಣ ಗುಣ ನಿರ್ದೋಷನೆಸುವರ್ಣಗರ್ಭ ನಿನ್ನ ಲೀಲೆವರ್ಣಿಸುತಿಹ ಕೀರ್ತನೆಯನುಕರ್ಣದಿಂದ ಕೇಳಿ ಕೇಳುತ 2
ನಿತ್ಯ ಮನಕೆ ಮುದವತಪ್ಪ ನಿನ್ನ ನಾಮ ಸುಧೆಯಚಪ್ಪರಿಸುತ ನಾಲಗೆಯಲಿಒಪ್ಪಿ ಸವಿದು ಸವಿಯುತಿರಲು 3
ಅಮಮ ನಿನ್ನ ತನುವಿನಿಂದಘಮಘಮಿಸುತ ಬರುವ ಗಂಧಅಮಿತ ಮುದವ ಮೂಗಿಗಿಡಲುರಮಿಸಿ ಮೂಸಿ ನೋಡುತಿರಲು 4
ಪಾವನತರ ನಿನ್ನಡಿಯಲಿಸೇವೆಗೊಳ್ಳು ನಿರುತದಲಿಕಾವುದಯ್ಯ ಶ್ರೀ ಗದುಗಿನದೇವ ವೀರನಾರಯಣ 5