ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ಶ್ರೀಹರಿ ಮಲಗೊ ಜೋಗುಳ ಪಾಡಿ ಪಾಡಿ ತೂಗುವೆ ಮುದದಿಪ ಯೋಗಿಗಳರಸನೆ ಸಾಗರಶಯನನೆ ಭಾಗವತರಪ್ರಿಯ ಬಾಗಿ ಸ್ತುತಿಪರೊ ನಿನ್ನ ಅ.ಪ ಹರ ಬ್ರಹ್ಮಾದಿಗಳು ಕೂಡಿ ನಿನ್ನನು ಪರಿಪರಿ ವಿಧದಲಿ ಕೊಂಡಾಡಿ ಸುರರು ಗಂಧರ್ವರು ವರಋಷಿಗಳು ಕೂಡಿ ಪರಮ ಸಂಭ್ರಮದಿಂದ ಹರಿ ನಿನ್ನ ಸ್ತುತಿಪರು 1 ಗೋಕುಲದ ನಾರಿಯರು ಗೋವಿಂದ ನಿನಗೆ ಬೇಕಾದ ಪಾಲ್ಮೊಸರು ಜೋಕೆಯಿಂದಲಿ ಹೊಸ ಬೆಣ್ಣೆ ತಂದಿಹೆವೆಂದು ಅ- ನೇಕ ಬಗೆಯಲಿ ಸ್ತುತಿ ಮಾಡಿ ಬೇಡುತಲಿರುವರು 2 ದಿಟ್ಟ ಗೋಪಾಲ ಕಯ್ಯೊಳಗೊಂದು ಪುಟ್ಟ ಬಚ್ಚೆಯ ಪಿಡಿದು ಅಚ್ಚುತ ನಿನಗೀವೆವೆಂದು ಬಾಗಿಲೋಳ್ ನಿಂದು ಪುಟ್ಟ ಮಕ್ಕಳು ಬಾಯಿಬಿಟ್ಟು ಪ್ರಾರ್ಥಿಸುವರು 3 ಇನಕೋಟಿ ಪ್ರಭೆ ನಾಚಿಪ ಮುಖ ಕಮಲದ ದನುಜದಲ್ಲಣ ನಿನ್ನನು ಸನಕಾದಿಗಳು ಸ್ತುತಿಮಾಡಿ ಮೈ ಮರೆತರೊ ವನಿತೆಯರೋಕುಳಿಗಳನಾಡಿ ನರ್ತಿಸುವರೊ 4 ನಿದ್ರೆ ಮಾಡಿದರೆ ನೀನು ಈ ಜಗವೆಲ್ಲ ಉದ್ಧಾರವಾಗುವುದೇನು ನಿದ್ರೆ ಸಾಕೇಳೆಂದು ದುರ್ಗಾದೇವಿಯರು ಸ್ತುತಿಸೆ ಮುದ್ದು ಕೃಷ್ಣನೆ ಭಕ್ತರುದ್ಧಾರಕರ್ತನೆ5 ಹಯ ಮುಖ ಹರಿ ಮತ್ಸ್ಯನೆ ಕೂರ್ಮನೆ ವರಹ ಹಯಗ್ರೀವ ನರಸಿಂಹನೆ ಜಯವಟು ಭೃಗು ರಾಮಕೃಷ್ಣ ಬುದ್ಧನÉ ಕಲ್ಕಿ ಜಯ ನಾನಾ ರೂಪನÉ ಜಯವೆಂದು ಪೊಗಳ್ವರೊ6 ನವನೀತ ಚೋರನೆಂದು ನಾರಿಯರೆಲ್ಲ ನವವಿಧ ನುಡಿ ನುಡಿವರೊ ಭುವನ ಮೋಹನಸ್ವಾಮಿ ಸುಮನಸ ವಂದ್ಯನೆಕವಿ ಜನರಪ್ರಿಯ ಶ್ರೀ ಕಮಲನಾಭ ವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ
ವೃಷಭಾರೂಡಗೆ ರವಿಶಶಿ ನಯನಗೆ ವೃಷಭಪಾವನತ್ರಿಯಂಬಕಗೆ || ವೃಷಭಸ್ವರೂಪದಿ ಮೆರೆವ ಆಕಾರದೇವಗೆ | ವೃಷಭ ಕನ್ನಿಕೆಯರಾರುತಿ ಎತ್ತಿರೆ ವೃಷಭಾಶಿವಗೆ ಸಂಗಮಗ ಜಗದೀಶ ಮಹೇಶ-ಗಾರುತಿಯನೆತ್ತಿರೆ ವೃಷಭ ಶಿವಗೆ ಸಂಗಮಗೆ 1 ಭಾನು ಕೋಟಿ ದಿವ್ಯ ತೇಜ ಪ್ರಕಾಶಗೆ ಆನಂದಮಯಗೆ ಚಿನ್ಮಯಗೆ | ಮಾನಸದಿಂದಲಿಮೆರೆವೆನ್ನ ದೇವಗೆ ಮಾನ ಕನ್ನಿಕೆಯರಾರುತಿ ಎತ್ತಿರೆ |ವೃಷಭ ಶಿವಗೆ ಸಂಗಮಗೆ 2 ಭಾಗೀರಥಿ ಪ್ರಿಯಗೆ ಭಾಲನೇತ್ರಗೆ ಶ್ರೀ ಗೌರಿಯ ಮನೋಹರಗೆ | ನಾಗಭೂಷಣನಾರಾಯಣ ಪ್ರಿಯಗೆ ನಾಗ ಕನ್ನಿಕೆಯರಾರುತಿ ಎತ್ತಿರೆ 3 ದೇವರ ದೇವಗೆ ದೇವ ಜಗದೀಶಗೆ | ದೇವಸನ್ಮೋಹನಸ್ವಾಮಿಗೆ | ದೇವ ಸಿಂಧಾಪುರದ ಶ್ರೀ ವಿಶ್ವನಾಥಗೆದೇವ ಕನ್ನಿಕೆಯರಾರುತಿ ಎತ್ತಿರೆ 4
--------------
ಭೀಮಾಶಂಕರ