ಒಟ್ಟು 13 ಕಡೆಗಳಲ್ಲಿ , 3 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೇಶನ ಪದದ್ವಂದ್ವಕಮಲ ಭಜಿಪ ಶ್ರೀ ಗುರುವರ ಭೂಪ ಪ. ಬಂದೆನು ನಿಮ್ಮ ಪದ ಸಂದರುಶನಕೀಗ ನೀಗಿರಿ ಭವರೋಗ ಅ.ಪ. ಬಂದವರಯೋಗ್ಯತೆ ಅರಿತಂಕಿತವೀವ | ಕರುಣಾಳುವೆ ದೇವ ನೊಂದೆನೀಗ ಈ ಅಜ್ಞಭವದಿ ಬಿದ್ದು | ಎಂದಿಗೆ ನಾ ಗೆದ್ದು ಇಂದಿರೇಶನ ಹೃತ್ಕಮಲದಲಿ ಕಾಂಬೆ | ಗುರುವೆ ತೋರೆಂಬೆ ಬಂದ ಬಂದ ಕಷ್ಟ ಹಿಂದು ಮಾಡಿ ಪೊರೆದು | ಕೃಪೆಗೈಯ್ಯಲಿ ಬೇಕಿಂದು 1 ಮುಖ ಕಮಲದಿ ಹೊರಡುವ ವಾಕ್ಸರಣಿಗಳು | ಗಂಗಾ ಪ್ರವಾಹಂಗಳು ಅಕಳಂಕದ ತತ್ವಾರ್ಥದಿ ನಾ ಮುಳುಗಿ | ದುರಿತದ ಭವನೀಗಿ ಸುಖ ಸಾರೂಪ್ಯದ ಮುಕುತಿ ಮಾರ್ಗ ಕಂಡೆ | ಭವ ತುಂಡೆ ಭಕುತಿ ಭಾಗ್ಯವ ನಿತ್ಯದಿ ಕರುಣಿಪುದು | ಸುಜ್ಞಾನವ ನೀಡುವುದು 2 ಇಳೆಯೊಳಿಲ್ಲ ಈ ಚರ್ಯೆ ತೋರುವವರು | ಉದ್ಧರಿಪರಿನ್ಯಾರು ಪರಿ ಕರುಣಿಪುದು | ನ್ಯಾಯವೆ ನೂಕುವುದು ಪೊಳಲೊಡೆಯನ ಪರಿಪರಿ ಮಹಿಮಾದಿಗಳ | ರೂಪ ಜಾಲಗಳ ತಿಳಿದಾನಂದಪಡುವ ಗುರುವರೇಣ್ಯ | ಪೊರೆಯ ಬೇಕೀಗೆನ್ನ 3 ಕರಿಗಿರಿ ನರಹರಿ ಪದಕಮಲಗಳನ್ನು | ಹೃದ್ವನಜದೊಳಿನ್ನು ಪರಿಪರಿ ಪೂಜಿಸಿ ಪರಮಾದರದಲ್ಲಿ | ಸಂಕರ್ಷಣನಲ್ಲಿ ಇರಿಸಿಹ ಮನವನು ನರರಿಗೆ ತೋರದಲೆ | ಚರಿಸುವ ಈ ಲೀಲೆ ಅರಿತು ಪೇಳೆ ಈ ಪಾಮರಳಿಗೆ ಅಳವೇ | ಆನಂದದಲಿರುವೆ 4 ತಂದೆ ಮುದ್ದು ಮೋಹನವಿಠಲ ದೇವ | ಹೃದ್ವನಜದಲಿ ಕಾವ ಸುಂದರ ಗೋಪಾಲಕೃಷ್ಣವಿಠ್ಠಲ ನಿಮ್ಮೊಳು | ರಮಿಸುವ ನಿತ್ಯದೊಳು ಮಂದಬುದ್ಧಿಗೆ ಇಂತು ಮತಿಯನಿತ್ತು | ಸಲಹಲಿ ಬೇಕಿಂತು ತಂದೆ ಧರೆಯೊಳು ಮತ್ತೊಬ್ಬರ ಕಾಣೆ | ಕಾಪಾಡಬೇಕೆನ್ನಾಣೆ 5
--------------
ಅಂಬಾಬಾಯಿ
ಉಗಾಭೋಗ ಏಕೋನಾರಾಯಣಾಸೀತೆಂಬ ಶ್ರುತಿ ಪ್ರತಿಪಾದ್ಯನಾಗಿ ಮಾಕಮಲಾಸನ ಮೊದಲಾದವರಲ್ಲಿನಿಂತು ಸಾಕಿಸಲಹಿ ಸಂಹಾರ ಮಾಡುತ್ತ ಜೀವರಾಶಿಯೊಳಗೆನ್ನ ಸ್ವೀಕಾರ ಮಾಡದೆ ನೂಕಿ ಬಿಸಾಟು ಈಕುಂಭಿಣಿ ಮಧ್ಯದಲ್ಲಿ ಕಾಕುಮನುಜಾರಿಗಿಂತ ಕನಿಷ್ಠನ್ನಮಾಡಿ ಸಾಕಲಾರದೆ ಕೈಬಿಡುವಾರೇನೊ ನಾಕಜಜನಕ ಮುದ್ದುಮೋಹನವಿಠಲ ಲೌಕೀಕ ಮಾರ್ಗ ಬಿಡಿಸಿ ಹೃತ್ಕರ್ಣಿಕೆಯಲ್ಲಿ ಪೊಳೆಯೋ
--------------
ಮುದ್ದುಮೋಹನವಿಠಲದಾಸರು
ಉಗಾಭೋಗ ಬಡವನಾದವನ ಭವಮಡುವಿನೊಳಗೆನೂಕಿ ಮಿಡುಕಿಸೀನೋಡುವುದು ಥರವೇನೋ ಒಡಲಿಗೋಸುಗ ನಿನ್ನ ಬೇಡ ಬಂದವನಲ್ಲ ದೃಢಭಕ್ತಿ ಜ್ಞಾನಕೊಟ್ಟು ರಕ್ಷಿಸೋಧೊರಿಯೆ ಕಡಲಶಯನ ನಮ್ಮ ಮುದ್ದುಮೋಹನವಿಠಲ ಗಾಢರತಿಯ ಪಾಲಿಸು ಸುಲಭದಿಂದಾ
--------------
ಮುದ್ದುಮೋಹನವಿಠಲದಾಸರು
ಪರಮ ಕರುಣಾಳುಗಳು ಈ ಗುರುಗಳು ಶ್ರೀ ವರತಂದೆ ಮುದ್ದುಮೋಹನವಿಠಲಾಖ್ಯರು ಪ. ಶಾಂತರು ದಾಂತರು ಸಂತೋಷ ಸುಖಿಗಳು ಅಂತರಂಗದಿ ಹರಿಯ ಧ್ಯಾನಿಸುವರು ಕಂತುಜನಕನ ಧ್ಯಾನ ಸತ್ಪಾಂಥರಿಗೆ ಬೀರುತಲಿ ಎಂತೆಂತೊ ಸುಜನರಿಂ ಸ್ತುತಿಸಿಕೊಳುತಿಹರು 1 ನಿರಪೇಕ್ಷೆಯಿಂದಲಿ ಪರರಿಗುಪಕಾರವನು ತೆರವಿಲ್ಲದೆಲೆ ಸತತ ಮಾಡುತಿಹರು ಅರಿಯೆನಿವರಾ ಮಹಿಮೆ ಪರದೇಶಿ ನಾನಿನ್ನು ಕರುಣೆಯಿಂದೆನಗೆ ಹರಿ ಅಂಕಿತವನಿತ್ತರು 2 ಸುಪ್ರೀತರಾಗಿನ್ನು ಈ ಶರೀರದ ಒಳಗೆ ಶ್ರೀಪತೀ ತೈಜಸನ ವ್ಯಾಪಾರದಿ ಶ್ರೀ ಪರಮ ಗುರುಗಳೆಂದ್ಹರಿಯ ನಿರ್ಮಾಲ್ಯವನು ಕೃಪಾತಿಶಯದಿ ಕೊಡಿಸಿ ಎನ್ನನುದ್ಧರಿಸಿದರು3 ಎಲ್ಲರೂ ದÉೀವಾಂಶರೆನ್ನುವುದು ಕೇಳುತಲಿ ನಿಲ್ಲದೇ ಮನಸು ಬಹು ತಲ್ಲಣಿಸುತಿರಲು ಪಲ್ಲವಿಸಿ ಎನ್ನ ಮನ ಮಂದಿರದಿ ಅನುಗಾಲ ಪುಲ್ಲಾಕ್ಷನನು ತೋರಿ ಉಲ್ಲಾಸಕೊಡುತಿಹರು 4 ಶ್ರೇಷ್ಠಗುರುಗಳು ಇವರು ಸೃಷ್ಟಿಯೊಳಗೆನಗಿನ್ನು ಎಷ್ಟು ಯೋಚಿಸೆ ಮನವು ಮಹಿಮೆಯರಿಯೆ ವೃಷ್ಟಿವಂಶಜ ರುಕ್ಮಿಣೀರಮಣ ಗೋಪಾಲ- ಕೃಷ್ಣವಿಠಲನ ಬಹು ದಿಟ್ಟಾಗಿ ತೋರುವರು 5
--------------
ಅಂಬಾಬಾಯಿ
ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿ ಕರುಣಾಕರನ ಪಾದಸ್ಮರಣೆಯನೆ ಕೊಟ್ಟು ಪ ಅಮರೇಶ ವಂದ್ಯಳೆ ಕಮಲಾಲಯೆ ನೀಬಂದು ಶ್ರಮವಿಲ್ಲದೆಯನ್ನೆಯ ಮಮತೆಯನು ಬಿಡಿಸು 1 ವಸುದೇವಸುತನ ರಾಣಿ ಅಸುರ ಸಂಹಾರಳೇ ನಿನ್ನ ವಶವಾದ ಮೇಲೆ ಅಂಭ್ರಣಿಯೆ ನಸುನಗುತ ಈಗ 2 ಮಂದರೋದ್ಧಾರಎನ್ನ ಸಂದುಸಂದಲಿ ಕಾರ್ಯವ ನಿಂದುಮಾಡಿಸುವಂಥದನ್ನು ಚಂದದೀಬೋಧವಕೊಟ್ಟು 3 ಮಂಗಳಾಂಗಿಯೆ ನಿನ್ನ ಮುಂಗಾಣದೆಸೊರಗಿದೆ ಅಂಗಜಪಿತನ ಜಾಯೇ ಭಂಗಪಡಿಸದೆಬೇಗಾ 4 ಪದ್ಮಸಂಭವನಮಾತೆ ಮುದ್ದುಮೋಹನವಿಠಲ ಪದ ಪದ್ಮಗಳನೀನೊಲಿದು ಹೃತ್ಪದ್ಮದಲಿ ಕಾಣಿಸುತ 5
--------------
ಮುದ್ದುಮೋಹನವಿಠಲದಾಸರು
ಪಾರ್ವತೀಪತಿಯೆ ಎನ್ನಪಾಲಿಸುವುದು ಪ ದೂರು ನೋಡದೇ ಗುರುವ ಸಾರುವುದು ಸತತಾ ಅ.ಪ ಭಜಕರ ಸರ್ವಕಾವನ ನಿಜದಾಸರೊಳ್ಕೂಡಿಸಿ ಭಜನೆಯ ಮಾಡಿಸೋಬೇಗ ಭುಜಗಭೂಷಣನೆನೀನು 1 ನಂದಿ ವಾಹನನೆ ಎನ್ನಾ ಮಂದಮತಿಗಳ ಹರಿಸಿ ಕಂದುಗೊರಳನೆ ನೀನು ಆನಂದದಿಂದಲಿ ಕಾಯೋ 2 ಇಂದು ಗರ್ವವ ಬಿಡಿಸಿ ಕಾರಣಕರ್ತಹರಿಯೆ ಶ್ರೀರಮಣನ ತೋರೋ 3 ಭೂತನಾಥನೆ ನೀನು ಮಾತನು ಲಾಲಿಸುವುದು ದಾತಾನೆ ಸಲಹೊ ಎನ್ನಾ ಪಾತಕವನು ಹರಿಸಿ 4 ಶುದ್ಧಭಕುತಿಯನೆ ಕೊಟ್ಟುಸದ್ವೈಷ್ಣವರ ಪ್ರೀಯನೆ ಮಧ್ವಾಂತರ್ಗನಾದ ಮುದ್ದುಮೋಹನವಿಠಲನ ತೋರು 5
--------------
ಮುದ್ದುಮೋಹನವಿಠಲದಾಸರು
ವೃಂದಾವನ ದರುಶನವಾಯಿತು ಇಂದು ಪೋದವುಭವ ವೃಂದಗಳೆಲ್ಲ ಪ ಕುಂದು ಕೊರತೆಯಿಲ್ಲದ ಜ್ಞಾನಗಳೂ ಬಂದು ಘಟಿಸಿತು ಭಕುತಿ ವೈರಾಗ್ಯ ಇಂದಿನದಿನ ಆನಂದಪುಟ್ಟಿ ಹರಿ ದ್ವಂದ್ವ ಪದಗಳನು ತೋರಿಸುವಂಥ1 ಮಾಟಮಾದವು ಆಭರಣಗಳೂ ಸಾಟಿಯಿಲ್ಲದ ಪಷÀ್ಪಮಾಲವ ಧರಿಸಿದ ಕೋಟಿ ಸೂರ್ಯಪ್ರಭೆ ಸೋಲಿಸುವಂಥ2 ನೋಡಿದನಯನ ಅನ್ಯತ್ರನೋಡವೂ ಪಾಡಿದ ಜಿಹ್ವಾ ಅನ್ಯತ್ರಪಾಡವೂ ನಾಡಿನೊಳಿಂಥಾ ಶ್ರೀಪಾದ ರಾಜರಿಗೆ ಈಡುಗಾಣೆ ಮುದ್ದುಮೋಹನವಿಠಲ 3
--------------
ಮುದ್ದುಮೋಹನವಿಠಲದಾಸರು
ಶ್ರೀ ಗುರುವರರಾಯ ಪ. ಏನೆಂಬೆ ನಾ ನಿಮ್ಮ ಕರುಣಕ್ಕೆ ಎಣೆಗಾಣೆ ಶ್ರೀ ಗುರುವರರಾಯ ಅ.ಪ. ಭೂಸುರ ಜನ್ಮದಲಿ ದಾಸತ್ವದಿಂದ ಮೆರೆವೊ | ಶ್ರೀ ಗುರುವರರಾಯ ಫಣಿ ಶ್ರೀ ಗುರುವರರಾಯ 1 ಶ್ರೀ ತಂದೆ ಮುದ್ದುಮೋಹನವಿಠಲದಾಸ | ಶ್ರೀ ಗುರುವರರಾಯ ಪ್ರೀತಿಯಿಂದ ಹರಿಯ ಅಂಕಿತ ಕೊಡುವಂಥ | ಶ್ರೀ ಗುರುವರರಾಯ 2 ಶ್ರೀ ಗುರುವರರಾಯ ವಿಘ್ನಗಳನೆ ತರಿದು ಪ್ರಾಜ್ಞಾ ಮೂರುತಿಯ ತೋರೈ | ಶ್ರೀ ಗುರುವರರಾಯ 3 ಮಂದಜ್ಞರಿಗೆ ಜ್ಞಾನ ತಂದಿತ್ತು ರಕ್ಷಿಪ | ಶ್ರೀ ಗುರುವರರಾಯ ಬಂದೆನು ನಿಮ್ಮ ಪಾದದ್ವಂದ್ವವೇ ಗತಿಯೆಂದು | ಶ್ರೀ ಗುರುವರರಾಯ 4 ಭವ | ಶ್ರೀ ಗುರುವರರಾಯ ತರಳನ ಕಾಯ್ದ ನರಹರಿಯ ಭಜಿಸುವಂಥ | ಶ್ರೀ ಗುರುವರರಾಯ 5 ಅಪರಾಧವೆಣಿಸದೆ ಸುಪಥಮಾರ್ಗವ ತೋರೈ | ಶ್ರೀ ಗುರುವರರಾಯ ಗುಪಿತ ಮಹಿಮ ನಿನ್ನ ಜಗದೊಳರಿವರ್ಯಾರು | ಶ್ರೀ ಗುರುವರರಾಯ 6 ಅಗಣಿತ ಮಹಿಮೆಯ | ಶ್ರೀ ಗುರುವರರಾಯ ಸುರನರರಿಂದಲಿ ವಂದನೆಗೊಂಬುವ | ಶ್ರೀ ಗುರುವರರಾಯ 7 ಅಂತರಂಗದಿ ಆನಂದವನಿತ್ತ ಮಹಿಮ | ಶ್ರೀ ಗುರುವರರಾಯ ಶಾಂತಮೂರುತಿ ನಿಮ್ಮ ಶರಣೆಂದು ಭಜಿಸುವೆ | ಶ್ರೀ ಗುರುವರರಾಯ 8 ನೀತ ಗುರುವೆ ನಿಮ್ಮ ನಂಬಿದೆ ಸಲಹಯ್ಯ | ಶ್ರೀ ಗುರುವರರಾಯ ಖ್ಯಾತ ಶ್ರೀ ಗೋಪಾಲಕೃಷ್ಣವಿಠಲ ಪ್ರಿಯ | ಶ್ರೀ ಗುರುವರರಾಯ 9
--------------
ಅಂಬಾಬಾಯಿ
ಸುಳಾದಿ ಧ್ರುವತಾಳ ಶ್ರೀನಿವಾಸನೆ ನೀನು ಬ್ಯಾಗನೆ ಬಂದು ಸಾನುರಾಗದಿ ಸಂಸಾರ ಬಿಡಿಸೋ ಭಾನುಕೋಟಿ ಪ್ರಕಾಶಭಾಗ್ಯನಿಧಿಯೆನ್ನ ಮಾನವ ಕಾಯ್ವುದು ಮಂಗಳಾಂಗನೆ ಏನೇನು ಕಾರ್ಯಗಳು ನಿನ್ನಾಧೀನವಾಗಿರಲು ನಾನುನನ್ನದು ಎಂದು ಮಮತೆಯನೆ ಕೊಟ್ಟು ಅನ್ಯಾಯದಿಂದ ಎನ್ನzಣಿಸುವುದು ದಾನವಾಂತಕರಂಗ ಮುದ್ದುಮೋಹನವಿಠಲ ನೀನೆಗತಿಯೆಂದವಗೆ ನಿರ್ಭಯವೊ ಹರಿಯೆ 1 ಮಠ್ಯತಾಳ ಎನ್ನಪರಾಧಗಳು ಅನಂತವಿರುವದನ್ನು ನಿನ್ನಸ್ಮರಣೆ ಒಂದೆ ಸಾಕೊ ಹರಿಯೆ ಬನ್ನ ಬಡಿಸುವದ್ಯಾಕೊ ಮನ್ಮನದಲಿಪೊಳೆದು ಚೆನ್ನಾಗಿ ಸಲಹೋಘನ್ನಮಹಿಮಾ ಮುದ್ದುಮೋಹನವಿಠಲನೇ 2 ತ್ರಿವಿಡಿತಾಳ ಬಿಂಬನೆನೆಸಿಕೊಂಡು ಪ್ರತಿಬಿಂಬಗಳೊಳಗೆಕಾರ್ಯ ಅಂಭ್ರಣಿಸಹಿತವಾಗಿ ನೀಮಾಡಿ ಮಾಡಿ ಸೂವಿ ಅಂಬುಜನಾಭಾನೆ ಎನ್ನಾಡಂಭಕ ಭಕುತಿ ಬಿಡಿಸಿ ಸಂಭ್ರಮದಿಂದ ಕಾಯೊ ಕರುಣಾನಿಧೆ ಶಂಬರಾರಿಯಜನಕ ಮುದ್ದುಮೋಹನವಿಠಲ ಕಂಬದಿಂದಲಿ ಬಂದು ಭಕುತನ್ನಸಲಹಿದ ದೇವ 3 ಅಟ್ಟತಾಳ ಏನೇನುದಾನ ಅನಂತ ಮಾಡಲೇನು ಕಾನನದಲಿ ಪೋಗಿ ತಿರುಗಿತಿರುಗಿದಂತೆ ಜ್ಞಾನದಿಂದಲಿ ತಾರತಮ್ಯಾನುಸಾರ ನಿನ್ನ ಧ್ಯಾನವನ್ನ ಒಂದು ಕ್ಷಣವಾದರೂತೋರಿಸೊ ವಾನರ ವಂದ್ಯ ಮುದ್ದುಮೋಹನವಿಠಲ ನಾನಾವಿಧದಿಂದ ನಂಬಿದೆನೊ ಹರಿಯೇ4 ಆದಿತಾಳ ನೀನೆ ಅನಾಥಬಂಧು ನೀನೆ ಅದ್ಭುತಮಹಿಮ ನೀನೆ ಅಸುರಾಂತಕ ನೀನೆ ಅಮರಾದಿವಂದ್ಯ ನೀನೆ ಭವರೋಗ ವೈದ್ಯ ನೀನೆ ಭಕ್ತವತ್ಸಲ ನೀನೆ ಪರಿಪೂರ್ಣ ಸುಖ ನೀನೆ ಪರಂಜ್ಯೋತಿ ನೀನೆ ಪರಬ್ರಹ್ಮ ನೀನೆ ಪುರುಷೋತ್ತಮ ನೀನೆ ಪುಣ್ಯೈಶ್ವರ್ಯ ನೀನೆ ನಿರ್ಮಲ ಜ್ಞಾನ ನೀನೆ ಶಶಿ ಕೋಟಿಲಾವಣ್ಯ ನೀನೆ ಮುದ್ದುಮೋಹನ ವಿಠಲ ನೀನೆ ವೇಗದಿ ಬಂದು ನೀನೆ ರಕ್ಷಿಸು ಎನ್ನನು 5 ಜೊತೆ ಸ್ವಾಮಿ ಪುಷ್ಕರಣಿವಾಸ ಕಾಮಿತಫಲದಾನೆ ಶ್ರೀಮನೋಹರ ನಮ್ಮ ಮುದ್ದುಮೋಹನ ವಿಠಲ
--------------
ಮುದ್ದುಮೋಹನವಿಠಲದಾಸರು
ನಿಜವಿರಬೇಕು ಸಜ್ಜನರಿಗೆ ಒಂದು ಪಅಜಜನಕಾನೆ ಈ ತ್ರಿಜಗಕೆ ಒಡೆಯನೆಂದು ಅ.ಪಉದಯಾಸ್ತಮಾನ ಮಾಡುವ ವ್ಯಾಪಾರವುಪದುಮಾಕ್ಷ ಕೃಷ್ಣನ ಸೇವೆಯೆಂದುಸುದತಿಯೊಡನೆ ಕೂಡಿ ಮಧುರ ಮಾತುಗಳಾಡಿಮಧುವೈರಿಚರಿತೆಯ ಮುದದಿ ಕೇಳುವಂಥ1ಮಡದಿ ಮಕ್ಕಳು ತನ್ನ ಒಡಹುಟ್ಟಿದವರೆಲ್ಲಒಡೆಯನ ಅಡಿಗೆ ಸೇವಕರು ಎಂದುದೃಢದಿ ತಿಳಿದು ಮೃಡನೊಡೆಯನ ಪಾದವಬಿಡದೆ ಭಜಿಸುವಂಥ ದೃಢ ಬುದ್ಧಿ ಎಂಬುವ 2ಮಾತಾಪಿತರು ಸುತ ಭ್ರಾತರಿಷ್ಟಾಬಂಧುವ್ರಾತರೆಲ್ಲರು ಹರಿಗೆ ದೂತರೆಂದುಮಾತುಳಾಂತಕತಂದೆಮುದ್ದುಮೋಹನವಿಠಲಖ್ಯಾತಾನೆಂದು ಪ್ರೀತಿ ಪೊಂದುವುದಕ್ಕೆ 3
--------------
ತಂದೆ ಮುದ್ದುಮೋಹನ ವಿಠಲರು