ಬಾರಯ್ಯ ಯದುಕುಲತಿಲಕ ತೋರಯ್ಯ ನಿನ್ನ ಮುದ್ದು ಮುಖವಓರಂತೆ ಮುದ್ದಿಸಿ ಯಶೋದೆ ಕುಮಾರನೆ ಬಾರೆಂದಳೈಪ.
ಅಂದವಾದ ನಿನ್ನ ಮುದ್ದುಮುಖದ ಚೆಂದವನ್ನು ತಾ ನೋಡಿಕಂದಿಕುಂದಿ ಇಂದಿರೆಯು ಮರುಳಾಗಿ ಕಂದ ನಿನ್ನ ಪೊಂದೇನೆಂದಳೈ 1
ಕೃಷ್ಣ ನಿನ್ನ ಮಕ್ಕಳಾಟಿಕೆ ಶ್ರೇಷ್ಠರಿಗೆ ಮೋಹನವಾಯಿತುದುಷ್ಟಮತಮಾತಂಗಕ್ಕೆ ಅಟ್ಟುವೊ ಸಿಂಹದ ಮರಿಯೆ2
ಇಂಥ ಹಯವದನನ ಇಂಥ ದೇವರ ನಾ ಕಾಣೆಪಂಥವೇನೊ ಎನ್ನ ಕೂಡೆ ದಿನಮಣಿ ತಿಂತಿಣಿಯೆ ಬಾರೆಂದಳೈ3