ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿಶುವಿನ ಯಾತಕ ದೂರವಿರೆ| ನಿಶಿದಿನ ನೋಡಲು ಮಾತವರಿದವಾ| ಮರಳನೆ ಮಾಡುವರೆ ಪ ಅತಿ ಮೋಹದಿಂದಲಿ ಮೊಲೆಯನು| ಬಾಯೊಳಗಿಟ್ಟರೆ ಸೇವಿಸನು| ಮಿಲೆ ಯಿಲ್ಲದ ಪಾಲ್ಮೊಸರನು| ಕುಡಿಯಲು ತಕ್ಕವನೆ 1 ಪರಿಪರಿಯಿಂದಲಿ ಮುಂದಕೆ ಕರೆದರೆ|ಸರಕನೆ ಹೆಜ್ಜಿಡನು| ಹರಿ ನಿಮ್ಮುಡುಗೆಯ ಸೆಳೆದು ಕೊಳುತಲಿ| ಮರವನೆ ಏರುವನೆ 2 ಸುರಜನ ಪಾಲಕ ಮಹಿಪತಿ ನಂದನ|ಜೀವನ ಮೂರುತಿಯಾ| ಕುರುಪಿಡಬಹುದೆನೆ ಮಾನವನೆಂದು| ಲೀಲೆಯ ದೋರುತಿಹ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರ ಮಗನೆಂದರಿಯೆವೆ ಇವ ನಮ್ಮಕೇರಿಯೊಳು ಸುಳಿದು ಪೋದ ಪ. ನೀಲವರ್ಣನ ಮೈಯ್ಯವ ತುಲಸಿ ವನ-ಮಾಲೆ ಕೊರಳೊಳು ಕೌಸ್ತುಭಬಾಲಪ್ರಾಯದ ಚೆನ್ನಿಗ ಬಂದು ಪೋ-[ಗ]ಲು ಸನ್ನೆಯ ಮಾಡಿದ1 ಚಿಕ್ಕಪ್ರಾಯದ ಚೆನ್ನಿಗ ಯೌವನದಲುಕ್ಕುವ ಕಡುಚೆಲುವನೆಚೊಕ್ಕಟಾದ ಚದುರನೊಬ್ಬ ಕುಚಕೆ ಕೈ-ಯಿಕ್ಕಿ ಕಸ್ತೂರಿ ಪೂಸಿದ 2 ಪೀತಾಂಬರನುಡಿಸಿದ ವಿನಯ ಸವಿ-ಮಾತುಮಾತಿಗೆ ನಗಿಸಿದಪ್ರೀತಿಯಿಂದಲಿ ತನ್ನ ಚೆಂದುಟಿಯ ಅಧರಾ-ಮೃತವನುಣಿಸಿದ3 ಪಾರಿಜಾತವ ಸೂಡಿದ ಕಸ್ತೂರಿಯಗೀರುನಾಮವ ತಿದ್ದಿದದೂರದಲಿ ನಿಂತು ಎನ್ನ ಸೋಗೆಗಣ್ಣಓರೆನೋಟದಿ ನೋಡಿದ4 ಆಗ ಮೊದಲಾಗಿ ತನುವಾ ಮದನಶರತಾಗಿ ಕಟ್ಟುಡುಗಿದಾವೆಬೇಗದಲಿ ಹಯವದನ ಬಂದೆನ್ನಮೋಹದಿಂದಲಿ ಕೂಡಿದ5
--------------
ವಾದಿರಾಜ
ಏನು ಕರುಣೆಗೈದೆ ನಳಿನಾಕ್ಷ ಪ ಈ ನಿನ್ನ ಭಕ್ತನೊಳೇನು ಮಮತೆಯೋ ನಿನಗೆ ಅ.ಪ. ಹಿಂದೆ ಬಲಿಯು ತಾ ಯಜ್ಞವ ಮಾಡಲು ಇಂದ್ರ ಪದವು ಪ್ರಾಪ್ತಿ ನಿನ್ನಿಂದಲ್ಲದೆ ಇಂದು ಆ ಪದವಿಯನತಿಯುಕ್ತಿಯಿಂದಲಿ ಸಂದೇಹವಿಲ್ಲದೆ ಸೂರೆಗೈದವ ನೀನೆ 1 ಪರಮ ವಿದ್ವಾಂಸರನು ಧೈರ್ಯಶೀಲರನು ನೆರೆಮೋಹಗೊಳಿಸುವುದೈಹಿಕ ಭಾಗ್ಯವು ಪರಮ ಕಾರುಣ್ಯದಿಂದೊಲಿದು ನೀನಿವನನು ಸಿರಿಮೋಹದಿಂದಲಿ ಪಾರುಮಾಡಿದೆ ದೇವ 2 ನೀನಿಂದು ಗೈದುದು ಪರಮೋಪಕಾರವು ನಾನದರೊಳು ಲೇಶದೋಷವೆಣಿಸನಯ್ಯಾ ಶ್ರೀನಿಧಿ ಕರಿಗಿರೀಶನೆ ನಿನ್ನ ಚರಣಕ್ಕೆ ಆನಮಿಸುವೆನಿಂದು ದೀನವತ್ಸಲ ಸ್ವಾಮಿ 3
--------------
ವರಾವಾಣಿರಾಮರಾಯದಾಸರು
ಮರುಳು ಜೀವ ಏನು ಕಾಣುವೆ ಕೊನೆಗೆ ಪ ಸರ್ವಸಮರ್ಪಣೆ ಮಾಡದೆ ಇದರೊಳು ಅ.ಪ ಯಮನವರೆಳೆಯದೆ ಬಿಡುವರೆ ಛೀ ಹುಚ್ಚಾ 1 ಇಂದ್ರಿಯಂಗಳು ನಿನ್ನಾಧೀನವಲ್ಲ ಬಂದಮಾರ್ಗ ಸುಖ ಮರೆತು ಹೋದೆಯಲ್ಲ ಮುಂದಿನ ಗತಿ ಗೋತ್ರ ಮೊದಲಿಗೆ ಇಲ್ಲ ಮುಪ್ಪುತನವು ಹತ್ತಿರೇ ಬಂದಿತಲ್ಲ 2 ಕರ್ಮವೆಂಬುವುದೊಂದು ಅನಾದಿಯಾಗಿ ಧರ್ಮವ ಗಳಿಸುವವನೆ ಪರಮತ್ಯಾಗಿ ನಿರ್ಮಲ ಮನದಿ ದುರಾಶೆಯ ನೀಗಿ ಮರ್ಮವನರಿತುಕೊಂಡವನೇ ಮಹಾಯೋಗಿ3 ಭೋಗದಾಸೆಯ ಬಿಡು ಮೂರುದಿನದ ಬಾಳು ಕೂಗುತಿಹವು ಶೃತಿ ಸ್ಮøತಿಪುರಾಣಗಳು 4 ಸತಿಸುತರನು ನಾನೆ ಸಾಕುವೆನೆಂದು ಮತಿಗೆಟ್ಟು ಭ್ರಾಂತಿ ಹೊಂದುವೆ ನೀ ಮುಂದು ಮಿತಿಯ ಬರಹ ತಪ್ಪುವುದಿಲ್ಲ ಎಂದು ಪತಿ ಗುಣಸಿಂಧು 5 ಆಹಾರ ನಿದ್ರೆಯಲ್ಲವೆ ನಿನ್ನ ಆಟ ಸಾಹಸ ನೋಡೆ ಮಾಳಿಗೆಯ ಓಡ್ಯಾಟ ಮೋಹದಿಂದಲಿ ಮುಂದೆ ಬರುವುದು ಗೂಟ ಮೂಜಗದೊಳಗೆಲ್ಲಾ ಇದು ಗೊಂಬೆ ಆಟ 6 ಕಾಮಕ್ರೋಧಗಳು ಬಿಡಲಾರೆಯೇನೊ ಪಾಮರ ಜೀವ ಅಸ್ವಾತಂತ್ರಾ ನೀನೊ ಯಾಮಯಾಮಕೆ ಗುರುರಾಮವಿಠಲನಂಘ್ರಿ ನೇಮದಿಂದಲಿ ಭಜಿಸಿ ಸುಖವಾಗುವುದು ಕಾಣೊ7
--------------
ಗುರುರಾಮವಿಠಲ