ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಪೆಯ ತೋರಬಾರದೇನೋ | ಗೋಪಾಲರಾಯ ಪ ತಾಪತ್ರಯ ಬಲು ದೀಪನವಾಗಿದೆನೀ ಪರಿಹರಿಸದೆ ಮತ್ತೋರ್ವರನರಿಯೆ ಅ.ಪ. ಸೂನು ಶ್ರೀನಿವಾಸಾ |ಸಾರುತ ತವಪದ ಸೇವಿಸಿ ಭಕುತಿಲಿ |ದೂರೋಡಿಸಿದನು ಜವನವರಾ 1 ಗಿರಿಜಾತೆಯ ಪ್ರಿಯ ಕುವರಾ | ನೃಪವರದಶರಥ ಸುತ ಭರತಗೆ ಅವರಾ |ಮಾರುತಿ ಮತವನು ಅರುಹುತ ನೀ ಸಂಸಾರಕೆ | ತಾರಕ ನೆನಿಸಿದ ಧೀರಾ 2 ಭೋಗಿ ಶೀಲಾ | ನೀನಘದೂರ ಕಳೆಯೊ ಮೋಹಜಾಲಾ |ಭೋಗಿಶಯನ ಗುರು ಗೋವಿಂದ ವಿಠಲನಬಾಗಿ ಭಜಿಸುವಂಥ ಭಾಗ್ಯವ ನೀಯೋ 3
--------------
ಗುರುಗೋವಿಂದವಿಠಲರು
ಬಾರೆ ಸಖಿ ಪೋಗಿ ರಾಸ ಕ್ರೀಡೆಯಾಡುವ ಪ ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ ಅ.ಪ ಜಾರನೆಂದು ಸಣ್ಣಮಾತನಾಡಿದ್ದಾಯಿತು ಚೋರನೆಂದು ಬಹಳ ದೂರು ಮಾಡಿದ್ದಾಯಿತು ಮೂರು ನಿಮಿಷ ಅವನ ಮರೆಯಲಾಗದಾಯಿತು ಬೀರುತಿರುವ ಮೋಹಜಾಲ ಸಡಲದಾಯಿತು 1 ಯಾವನೀತನೆಂದು ಚಿಂತೆ ಮಾಡಿದ್ದಾಯಿತು ಗೋವಳನಿವನಲ್ಲವೆಂದು ನಿರ್ಧರಾಯಿತು ಯಾವನಾದರೇನು ಇವನ ಕ್ಷಣವು ಕಾಣದೆ ಜೀವನ ಕಳೆಯುವುದೆ ದೊಡ್ಡ ಭಾರವಾಯಿತು 2 ಮಂದಹಾಸದಿಂದ ಸಕಲ ಜಗವ ಬೆಳಗುವ ಚಂದ್ರನು ತಾನಿವನ ನೋಡಿ ಬಹಳ ನಾಚುವ ಸಾಂದ್ರವಾಯಿತಂತರಿಕ್ಷ ಮಧುರ ನಾದದಿ ಮಲಯ ಮಾರುತ ತಾ ತಲೆಯನಾಡುವ 3 ನಾದದ ಸುಧೆ ಸಾಗರದಲಿ ತೇಲುವಂತಿದೆ ಮಾಧವ ತಾ ಸುಧೆಯ ರಸವನೆರಚುವಂತಿದೆ ಬಾಧಿಸುತಿಹ ಭವದ ತಾಪವಡಗಿದಂತಿದೆ ಮಾದರಿಫಲ ರಾಸಕ್ರೀಡೆ ತೋರುವಂತಿದೆ 4 ಸಕಲ ಲೋಕನಾಥನೀತನೆಂದು ತಿಳಿಯಿತು ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು ಭಕುತಿ ಹರಿದು ಎನ್ನ ವiನ ಪ್ರಸನ್ನವಾಯಿತು 5
--------------
ವಿದ್ಯಾಪ್ರಸನ್ನತೀರ್ಥರು
ಶ್ರೀ ಸುಮಧ್ವ ವಿಜಯಸ್ಥ ಅಷ್ಟೋತ್ತರ ಶತನಾಮಾವಳಿ ನಮಿಸುವೆ ಜಗದ್ಗುರುಗಳೇ ಪ ಅಮಿತ ಮಹಿಮನ ವಿಮಲ ಪದಪದ್ಮ ತೋರ್ವುದೆಮಗೇ ಅ.ಪ. ಭೂರಿ ವಿಶ್ವ ಭೂಷಣರೇ ಪಾಹಿಮಾಂ ಪಾಹಿ 1 ಪರಿಪೂರ್ಣ ಪ್ರಮತಿಯೇ | ಪುರುಸಂಖ್ಯ ಪೂರ್ಣೇಕ್ಷ ಅರವಿಂದ ಲೋಚನರೆ | ಗುರುಮತ್ಯಮಿತ ಬುದ್ಧಿ ಮರುದಂಶ ಪ್ರಚುರಧೀ | ಪುರು ಕರುಣ ಆಂಬುಧಿಯ ಮೇರೆಯನು ಮೀರಿದವರೆ || ಸರುವಿತ್ ಪೂರ್ಣದೃಕ್ | ಉರುಮತಿಯೆ ಸಕಲಜ್ಞ ಸರುಧೀ ಪೃಥು ಹೃದಾ | ಪುರುಧೀ ಪ್ರಭೂತಧೀಃ ಪರಮ ಆನಂದ ಸತ್ತೀರ್ಥ ಸೂರಿರಾಜಾಧಿ ರಾಜರೆ ಪಾಹಿ ಪಾಹಿ 2 ಫುಲ್ಲ ಬೋಧ ಬಹುಲ ಪ್ರಬೋಧರೇ | ಮಹೀಷ್ಟ ಸುಹೃದಯರೇ ಬಹುಲ ಬೋಧಾಖ್ಯರೇ | ಮಹಾ ಪುರುಷೋತ್ತಮನ ದಾಸರೊಳಧಿಕನೆ ಪಾಹಿ 3 ನಮೊ ನಮೋ ಧೀರಮತಿ | ನಮೊ ಪೃಥೂ ದರ್ಶನರೆನಮೊ ನಮೋ ಸುಖ ತೀರ್ಥ | ನಮೊ ಪೃಥುಲ ಚೇತಾತ್ಮನಮೊ ನಮೋ ಪೃಥುಮತಿಯೆ | ನಮೊ ನಮೊ ಸಮಗ್ರ ಧೀರ್ಸುಸ್ಮಿತೇಂದುಗಳೆ ಪಾಹಿ || ನಮೊ ವಿಪುಲ ಹೃದಯರೇ | ಅಮಂದಧಿಯೆ ಶುದ್ಧಧೀಃ ನಮೊ ನಮೋ ಸುವಿಚಾರ | ನಮೊ ದಾನವರ್ಭೀಮ ನಮೊ ಪುಷ್ಟ ಬುದ್ಧಿಯೇ | ನಮೊ ಪೃಥುಲ ಹರಿ ನಿಗೂಢ ಮೂರ್ತಿಯೆ ಪಾಹಿ ಪಾಹಿ4 ಆನಂತ ಬೋಧಾಖ್ಯ | ಅನೂನ ಬೋಧರು ಎನಿಪಆನಂದ ತೀರ್ಥಾಖ್ಯ | ಅನುಮಾನ ತೀರ್ಥರೇಸ್ವರ್ಣವರ್ಣಾಭಿಧರೆ | ಧನ್ಯ ಪ್ರವರರು ಎನಿಪ ಆದೀನ ಸತುವಾಭಿಧರೆ ||ಅನಂತಧಿಯ ಮಧ್ವ ಸು | ಪೂರ್ಣ ಸಂಖ್ಯ ಧೀರದಿಹನುಮಂತ ಕೃಷ್ಣೇಷ್ಟ | ಪ್ರಾಣೇತ ಪ್ರಾಜ್ಯೇಕ್ಷಆನಮಿಸಿ ಬೇಡ್ವೆ ಸಂ | ಪೂರ್ಣ ಪ್ರಮತಿಯೆ ತವ ಚರಣ ತೋರಿಸಿ ಸಲಹುವುದೂ 5 ಪಾಹ್ಯದ ಭ್ರಮನೀಷ | ಪಾಹಿ ಪ್ರಚುರ ಪ್ರಜ್ಞಪಾಹಿ ವಿಪುಲ ಪ್ರಮತಿ | ಪಾಹಿ ಆಯುತ ಚೇತಪಾಹಿ ಪೃಥು ಪ್ರಬೋಧಾ | ಪಾಹಿ ಪ್ರಬರ್ಹ ಬೋಧಾಖ್ಯರೇ ಪಾಹಿ ಪಾಹಿ ||ಪಾಹ್ಯ ಮಂದಮನೀಷ | ಪಾಹ್ಯದ ಭ್ರಸುಸಂಖ್ಯಪಾಹಿ ಬೃಹತು ಪ್ರಬೋಧ | ಪಾಹ್ಯತಿ ಭದ್ರ ಭಾಷಣಪಾಹ್ಯ ಪೂರ್ವ ಪುರುಷ | ಪಾಹಿ ದಶಧಿಷಣಾರ್ಯಾ ವರ್ಯ ಚರ್ಯರೇ ಪಾಹಿ 6 ಸಿರಿ ಮಾಧವನ | ಗುಣ ಸಾಧಕಾಗ್ರಣಿಯೆ ಪಾಹಿಮಾಂ ಪಾಹಿ ಪಾಹಿ 7 ವಾಸುದೇವ ಪರಿ | ಶಿಕ್ಷಣದಿ ದಕ್ಷನೆನಿಸುವನಿಗೇ ಜಯವಾಗಲಿ ||ಜಯ ಹರಿಗಧಿಷ್ಠಾನ | ಜಯ ಮುಖ್ಯ ಪ್ರತಿ ಬಿಂಬಜಯ ಜಯತುದಾರಮತಿ | ಜಯ ಹರಿದಯಿತ ವರನೆಜಯ ಶ್ರೀ ಮದಾನಂದ | ತೀರ್ಥಾರ್ಯವರ್ಯ ಜಯ ಜಯತು ನಿಮ್ಮ ಪದಗಳಿಗೇ 8 ಮಧ್ವಾಖ್ಯ ಶೃತಿಪ್ರತೀ | ಪಾದ್ಯರೆಂದೆನಿಸುತಲಿಮಧ್ವ ವಿಜಯಾಖ್ಯ ಪ್ರ | ಸಿದ್ಧ ಗ್ರಂಥದಿ ಪೊಳೆವಮಧ್ವಗುರು ತವನಾಮ | ಶಬ್ದಾಖ್ಯ ಮಣಿಗಳಷ್ಟೋತ್ತರದ ಮಾಲೆಯನ್ನೂ ||ಮುದ್ದು ಮೋಹಜ ತಂದೆ | ಮುದ್ದು ಮೋಹರಲಿರುವಮಧ್ವಗುರುವೇ ನಿಮ್ಮ | ಹೃದ್ಗುಹದಲಿರುವಂಥಮುದ್ದು ಗುರುಗೋವಿಂದ | ವಿಠ್ಠಲನಿಗರ್ಪಿಸುವೆ ಉದ್ಧರಿಪುದೆಮ್ಮ ಸತತ 9
--------------
ಗುರುಗೋವಿಂದವಿಠಲರು
ಹಿಗ್ಗಿದಳು ನಂದನ ಸತಿ ಮುಗ್ಧೆ ತನ್ನಯ ಸುತನ ಮುದ್ದು ಮುಖವ ನೋಡಿ ಅ.ಪ ಪಾಲು ಬೆಣ್ಣೆ ಕಳ್ಳ ತಾಳು ಕಟ್ಟುವೆ ನಿನ್ನ ಕಾಲುಗಳನೆಂದು ಕರಗಳಲಿ ಪಿಡಿದು ನೀಲಮೇಘಶ್ಯಾಮ ಶ್ರೀಲಕುಮಿಯರಸನನು ಬಾಲನೆಂದರಿತು ಆಲಿಂಗನದಿ ಮೈ ಮರೆತು1 ಅಂಬುಜೋದ್ಭವನಯ್ಯ ಅಂಬೆಗಾಲಿಡುವುದನು ನಂಬಬಹುದೇ ಮೋಹಜಾಲವಿರಲು ಸಂಭ್ರಮದಿ ಸುತನನ್ನು ಚುಂಬಿಸುತ ರಭಸದಲಿ ಮೋದ ಕಂಬನಿಯ ಸುರಿಸುತ್ತ 2 ಓರೆಗಣ್ಣಿನ ನೋಟ ನಾರಿಯರ ಪೇಚಾಟ ಮೂರು ಲೋಕಕೆ ಹರ್ಷಕರ ಮಂದಹಾಸ ಸೇರಿಸಿದ ಮುಕ್ತಗಳ ಮೀರಿ ಪೊಳೆಯುವ ದಂತ ಚಾರುಮುಖಿ ಸುತನ ಮನಸಾರ ದರುಶನದಿಂದ 3 ಭೃಂಗಗಳ ಧಿಕ್ಕರಿಪ ಮಂಗುರುಳು ಮಸ್ತಕದಿ ರಂಗಿನಾ ಕಸ್ತೂರಿತಿಲಕ ಪಣೆಯಲ್ಲಿ ಸಿಂಧು ಶ್ರೀರಂಗನ್ನ ನೋಡುತಲಿ ಅಂಗನಾಮಣಿ ಅಂತರಂಗ ಪ್ರೇಮದ ಭರದಿ 4 ತನ್ನ ಉದರದಿ ನಳಿÀನಜಾಂಡವನೆ ಪೊತ್ತಿರುವ ಉನ್ನತೋನ್ನತ ಸುಗುಣ ಜ್ಞಾನಮಯನ ತನ್ನ ಮಗನೆಂದರಿತು ಸ್ತನ್ಯಪಾನದಿ ಸುಪ್ರ ಸನ್ನಮುಖಿ ಹರುಷ ಪುಳಕಿತಳಾಗಿ ಹೆಮ್ಮೆಯಲಿ 5
--------------
ವಿದ್ಯಾಪ್ರಸನ್ನತೀರ್ಥರು
ಬಿನ್ನಹಕೆ ಬಾಯಿಲ್ಲ ಎನಗೆ ಅದರಿಂದ |ನಿನ್ನ ಮರೆದೆನೊ ಸ್ವಾಮಿ ಎನ್ನ ಕಾಯಯ್ಯ ಪಅನ್ನಮದ ಅರ್ಥಮದಅಖಿಳವೈಭವದ ಮದ |ಮುನ್ನ ಪ್ರಾಯದ ಮದವುರೂಪಮದವು ||ತನ್ನ ಸತ್ವದ ಮದ ಧರಿತ್ರಿ ವಶವಾದ ಮದ |ಇನ್ನು ಎನಗಿದಿರಿಲ್ಲವೆಂಬ ಮದದಿ 1ಶಶಿವದನೆಯರ ಮೋಹಜನನಿ- ಜನಕರ ಮೋಹ |ರಸಿಕ ಭ್ರಾಂತಿಯ ಮೋಹ ರಾಜಮನ್ನಣೆ ಮೋಹ ||ಪಶು ಮೋಹ ಶಿಶುಮೋಹ ಬಂಧುವರ್ಗದ ಮೋಹ |ಹಸನುಳ್ಳ ವಸ್ತ್ರ ಆಭರಣಗಳ ಮದದಿ 2ಇಷ್ಟ ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ |ಅಷ್ಟು ದೊರಕಿದರೆ ಮತ್ತಷ್ಟರಾಸೆ ||ಕಷ್ಟ ಜೀವನದಾಸೆಕಾಣಾಚಿಕೊಂಬಾಸೆನಷ್ಟ ಜೀವನ ಬಿಡಿಸೆಪುರಂದರವಿಠಲ3
--------------
ಪುರಂದರದಾಸರು