ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋಜೋ ಶ್ರೀ ಗೋಪಾಲಕೃಷ್ಣ ಮೂರುತಿಯೆ ಪತಿ ಲೋಕ ದೊರೆಯೆ ಜೋಜೋ ಈ ಲೋಕದೊಳು ನಿನಗಿನ್ನು ಸರಿಯೆ ಜೋಜೋ ಶ್ರೀ ಗುರುಕರಾರ್ಚಿತದಿ ಬಂದ್ಹರಿಯೆ ಪ. ತಂದೆ ಮುದ್ದುಮೋಹನರು ಕೊಟ್ಟ ಅಂಕಿತದಿ ಪೊಂದಿದ್ದ ರೂಪ ಗ್ರಹದಲ್ಲಿ ಹೊಂದಿ ಮುಂದೆಂಟು ವತ್ಸರಕೆ ಎನ್ನೊಡನೆ ಬಂದಿ ತಂದೆ ಮುದ್ದುಮೋಹನರ ಕರಸ್ಪರ್ಶ ಪೊಂದಿ 1 ನಮ್ಮ ಹಿರಿಯರ ಪೂಜೆ ಒಮ್ಮೊಮ್ಮೆ ಎಂದು ಒಮ್ಮೆ ದುರುಳನು ಮುಟ್ಟೆ ಮಲಿನಾದೆನೆಂದು ನಮ್ಮ ಗುರು ಕರಸ್ಪರ್ಶದಿಂ ಪುನಃ ಬಂದು ಪತಿ ಎನ್ನ ಕರಪೂಜೆ ಬೇಕೆಂದು 2 ಘನ್ನ ಗುಣರು ನಿನ್ನ ಪೂಜಿಸಿ ಪೋಗಲಂದು ಮನೆ ಪೆಟ್ಟಿಗೆಯೊಳ್ ಸುಮ್ಮನಿರಲಾರೆನೆಂದು ಮನಕೆ ಪ್ರೇರಿಸೆ ದುರುಳರಿಗೆ ಕದ್ದು ಒಯ್ದು ಘನ ಮೂರ್ತಿಗಳು ಪೋಗೆ ನೀನೊಬ್ಬ ಬಂದು 3 ಬಹುದಿವಸ ಮಲಿನವಾಗಿರುತಿರಲು ನೀನು ಮಹಮಹಿಮೆ ಅರಿಯಲಿಲ್ಲಾಗ ನಾನಿನ್ನು ಅಹಹ ನಮ್ಮ ಗುರುಗಳೆರೆಯಲು ಜ್ಞಾನವನ್ನು ಮಹಿಯೊಳೆನ್ನ ಪೂಜೆಯನು ಬಯಸಿದೆಯೊ ನೀನು 4 ಮನದಲ್ಲಿ ಪ್ರೇರಿಸಲು ಘನವಲ್ಲವೆಂದು ಕನಸಿನಲಿ ಎನ್ನ ಹಸ್ತದೊಳ್ ಬಂದು ನಿಂದು ಸನುಮತದಿ ಹರುಷದಲಿ ನಿನ್ನ ನಾ ತಂದು ಘನ ಮಹಿಮ ಗುರುಗಳಿಗೆ ಒಪ್ಪಿಸಲು ಅಂದು 5 ಅಂತರಾತ್ಮನ ಗುರುವು ವಿಗ್ರಹದೊಳಿಟ್ಟು ಸಂತೋಷದಿಂದ ಮನಮುಟ್ಟಿ ಕೊಡಲಷ್ಟು ಅಂತಾಯ್ತು ಮಲಿನ ಕುಂದಿತು ತೇಜವೆಷ್ಟು ನಿಂತೆನ್ನ ಕೈಲಿ ಪೂಜೆಯಗೊಂಬ ಗುಟ್ಟು 6 ದಿನದಿನಕೆ ಭಜನೆ ಪೂಜೆಯನೆಗೊಂಬ ಚಂದ ಘನಭಕ್ತರನು ಪೊರೆವ ಬಿರುದು ಆನಂದ ಮುನಿಜನರ ಮೋಹಕನೆ ಸಚ್ಚಿದಾನಂದ ಎನಗೊಲಿದೆ ಗೋಪಾಲಕೃಷ್ಣ ಗೋವಿಂದ 7 ರಮೆ ಬ್ರಹ್ಮ ಸುರರಿಗೆ ಸರಿ ಪೂಜಿಸುವೆನೆ ಕಮಲಾಕ್ಷ ಅಣು ನಾನು ನಿನ್ನ ಒಲಿಸುವೆನೆ ರಮಣೀಯವಾದ ವಸ್ತುಗಳ ನಾ ತಹೆನೆ ಕ್ಷಮಿಸು ನಿನ್ನ ದಾಸಿ ನನ್ನಪರಾಧಗಳನೆ 8 ಅಂತರಂಗದಲಿಪ್ಪ ಬಿಂಬ ಮೂರುತಿಯೆ ನಿಂತು ಈ ವಿಗ್ರಹದಿ ಈ ರೀತಿ ಮೆರೆಯೆ ಸಂತೋಷ ನೋಳ್ಪರಿಗೆ ಕೊಡು ಭಕ್ತಿ ಹರಿಯೆ ಕಂತುಪಿತ ಕಮಲಾಕ್ಷ ಕಾಯೊ ಸಿರಿದೊರೆಯೆ 9 ಪೂಜ್ಯಪೂಜಕನೆಂದು ಪೂಜೆ ಮಾಡುವೆನೊ ಮೂರ್ಜಗತ್ಪತಿ ನಿನ್ನ ಲಾಲಿ ಪಾಡುವೆನೊ ಪೂಜ್ಯ ಶ್ರೀ ಗೋಪಾಲಕೃಷ್ಣವಿಠ್ಠಲ ನೀನು ಗೋಜು ಬೇಡನ್ಯರದು ಪೊರೆಯೊ ದಾಸರನು 10
--------------
ಅಂಬಾಬಾಯಿ
ತುರುಗಾಯ ಬಂದ ಗೋಪಿಯ ಕಂದಆನಂದದಿಂದ ಪ ಮೃಗ ಜಲಚರ ಮೋಹಿಸೆತರಳೇರ ಮನ ಸೂರೆಯಾಗೆ ಕೊಳಲಿನಿಂದ ಅ.ಪ. ತಂದೆಯ ಕಂದನೆಂದು ಕೊಂಕುಳೊಳಿಟ್ಟುಕಂದನ ಕೆಳಗಿಟ್ಟುಅಂದಿಗೆ ಗೆಜ್ಜೆ ಕಿವಿಗಳಿಗಿಟ್ಟುಮುತ್ತಿನ ಬಟ್ಟುಹೊಂದಿಸಿ ಗಲ್ಲದಲ್ಲಿ ತಾನಿಟ್ಟುಕಸ್ತೂರಿಯ ಬಟ್ಟುಮುಂದಾಗಿ ಮೂಗಿನ ಮೇಲಳವಟ್ಟುಮನೆಬಾಗಿಲ ಬಿಟ್ಟುಕಂದರ್ಪನ ಶರದಿಂದ ನೊಂದು ಬಹುಕಂದಿ ಕುಂದುತಲಿಂದುವದನೆಯರುಇಂದಿರೇಶನಾನಂದದ ಗಾನಕೆಚಂದ್ರಮುಖಿಯರೊಂದಾಗುತ ಬರುತಿರೆ 1 ಮುರಳಿಯ ಸ್ವರಕೆ ಮೋಹಿತರಾಗೆಕರುಗಳನು ತಂದುಕರದಿಂದಲೆತ್ತಿ ತೊಟ್ಟಿಲೊಳಗೆಇರಿಸುತ್ತ ಹಾಲಬೆರಸುತ್ತ ಮಜ್ಜಿಗೆ ಮೊಸರಿನೊಳಗೆಪರಮಾತ್ಮನ ನೆನೆದುಹೊರಟರು ಬಿಸಿಲು ಚಳಿ ಮಳೆಯೊಳಗೆಮನೆಮನೆಯೊಳಗೆತರಳರ ಬೆದರಿಸಿ ಮಾರ್ಜಾಲಕೆ ಮೊಲೆತ್ವರಿತದಿ ಉಣಿಸುತ ಸರಿಸರಿಯೆನುತಲಿಪರಿಪರಿ ಭ್ರಾಂತರಾಗಿ ನೋಡುತಪುರಮಾರ್ಗಕೆ ಬರುವರು ನಿರುಕಿಸುತ 2 ಮದನ ಶತಕೋಟಿ ತೇಜನು ಬಂದಸ್ತ್ರೀರೆದುರಲಿ ನಿಂದಅಧರಾಮೃತ ಪಾನವ ಮಾಡಿರೆಂದಬಾಯಾರಿದಿರೆಂದಬದಿಯಲ್ಲಿ ಬಂದು ಕುಳ್ಳಿರಿಯೆಂದಅವರಿರವನೆ ನೋಡ್ದಚದುರೇರ ಮೋಹಕನೆ ನಾನೆಂದವಾದ್ಯದ ರವದಿಂದಸದಯನೆದುರ ರಂಭೆ ಊರ್ವಶಿ ಮೇನಕೆಒದಗಿ ನಾಟ್ಯಗಳ ಚದುರತನದಲಾಡೆಮಧುಸೂದನ ಭಕ್ತರ ಕಾಯ್ವುದಕೀವಿಧದೊಳಗಾಡಿದ ರಂಗವಿಠಲ ತಾ 3
--------------
ಶ್ರೀಪಾದರಾಜರು
ಬಗೆಬಗೆ ಆಟಗಳೆಲ್ಲಿ ಕಲಿತೆಯೊ |ಜಗದ ಮೋಹಕನೆ ಪಖಗವರಗಮನನೆಅಗಣಿತಮಹಿಮನೆ |ಜಗದೊಳು ನೀ ಬಹು ಮಿಗಿಲಾಗಿ |ಪರಿಅ.ಪಒಬ್ಬಳ ಬಸಿರಿಂದಲಿ ಬಂದು-ಮ-|ತ್ತೊಬ್ಬಳ ಕೈಯಿಂದಲಿ ಬೆಳೆದು ||ಕೊಬ್ಬಿದ ಭೂಭಾರವನಿಳುಹಲು ಇಂಥ |ತಬ್ಬಿಬ್ಬಾಟಗಳೆಲ್ಲಿ ಕಲಿತೆಯೊ 1ಮಗುವಾಗಿ ಪೂತಣಿ ಮೊಲೆಯ-ಉಂಡು |ನಗುತಲವಳ ಅಸುವನೆ ಕೊಂಡು |ಅಘಹರ ನೀ ಗೋಪಿಯೊಳು ಜನಿಸಿ ಇಂಥ |ಸೊಗಸಿನ ಆಟಗಳೆಲ್ಲಿ ಕಲಿತೆಯೊ 2ಲೋಕರಂತೆ ನೀ ಮಣ್ಣನು ತಿನಲು |ತಾ ಕೋಪಿಸಿ ಜನನಿಯು ಬೇಗ ||ಓಕರಿಸೆನ್ನಲು ಬಾಯೊಳು ಸಕಲ |ಲೋಕವ ತೋರಿದುದೆಲ್ಲಿ ಕಲಿತೆಯೊ | 3ಮಡುವ ಧುಮುಕಿ ಕಾಳಿಂಗನ ಪಿಡಿದು |ಪಡೆಯ ಮೇಲೆ ಕುಣಿದಾಡುತಿರೆ ||ಮಡದಿಯರು ನಿನ್ನ ಬಿಡದೆ ಬೇಡಲು |ಕಡುದಯೆದೋರಿದುದೆಲ್ಲಿ ಕಲಿತೆಯೊ | 4ಒಂದುಪಾದಭೂಮಿಯಲಿ ವ್ಯಾಪಿಸಿ ಮ-|ತ್ತೊಂದುಪಾದಗಗನಕ್ಕಿಡಲು ||ಅಂದದಿ ಬಲಿಯ ಶಿರದಿ ಮೂರನೆಯದಿಟ್ಟು |ಬಂಧಿಸಿದಾಟಗಳೆಲ್ಲಿ ಕಲಿತೆಯೊ | 5ಭರದಿ ಭಸ್ಮಾಸುರ ವರವನು ಪಡೆದು |ಹರನು ಶಿರದಿ ಕರವಿಡ ಬರಲು ||ತರುಣಿರೂಪವ ತಾಳಿ ಉರಿಹಸ್ತದವನ |ಮರುಳುಗೊಳಿಸಿದುದನೆಲ್ಲಿ ಕಲಿತೆಯೊ | 6ಜಗಕೆ ಮೂಲನೆಂದು ನಾಗರಾಜ ಕರೆಯೆ |ಖಗವಾಹನನಾಗದೆ ನೀ ಬಂದು ||ನಗುತ ನಗುತ ಆ ವಿಗಡನಕ್ರನ ಕೊಂದ |ಹಗರಣದಾಟಗಳೆಲ್ಲಿ ಕಲಿತೆಯೊ 7ವೇದಗಳರಸಿಯು ಕಾಣದ ಬ್ರಹ್ಮ ನೀ-|ನಾದರದಲಿ ವಿದುರನ ಗೃಹದಿ ||ಮೋದದಿ ಒಕ್ಕುಡಿತೆಯ ಪಾಲನೆ ಕೊಂಡು |ಹಾದಿಯೊಳ್ ಹರಿಸಿದುದೆಲ್ಲಿ ಕಲಿತೆಯೊ 8ಡಂಬಕಹಿರಣ್ಯಕಶಿಪು ಪ್ರಹ್ಲಾದನ |ಹಂಬಲವಿಲ್ಲದೆ ಶಿಕ್ಷಿಸಲು ||ಸ್ತಂಭದಿ ಭಕ್ತಗೆ ರೂಪವ ತೋರಿ |ಸಂಭ್ರಮವಿತ್ತುದನೆಲ್ಲಿ ಕಲಿತೆಯೊ 9ಚಕ್ರಧರನೆ ಜರಾತನಯನೊಂದಿಗೆ ಕಾದಿ |ಸಿಕ್ಕಿ ಓಡಿದವನಿವನೆಂದೆನಿಸಿ ||ಭಕ್ತ ಭೀಮನ ಕೈಯಲಿ ಕೊಲ್ಲಿಸಿದ |ಠಕ್ಕಿನಾಟಗಳನೆಲ್ಲಿ ಕಲಿತೆಯೊ | 10ಆ ಶಿರವಾತನ ತಂದೆಯ ಕರದೊಳು |ಸೂಸುತ ರಕ್ತವ ಬೀಳುತಿರೆ ||ಸೋಸಿ ನೋಡದೆ ರುಂಡ ಬಿಸುಡಲವನ ಶಿರ |ಸಾಸಿರ ಮಾಡಿದುದೆಲ್ಲಿ ಕಲಿತೆಯೊ 11ಪ್ರಾಣ ಸೆಳೆವನೀ ದಿನವೆಂದರ್ಜುನ |ಧೇನಿಸದಲೆ ಸೈಂಧವಗೆನಲು ||ಕಾಣದಂತೆ ಸೂರ್ಯಗೆ ಚಕ್ರವನಿಟ್ಟು |ಬಾಣ ಹೊಡಿಸಿದುದನೆಲ್ಲಿ ಕಲಿತೆಯೊ 12ಸರ್ಪನ ಬಾಣವು ಉರಿಯುತ ಬರಲು ಕಂ-|ದರ್ಪನ ಪಿತ ನೀ ಕರುಣದಲಿ ||ತಪ್ಪಿಸಿ ಪಾರ್ಥನ ರಥ ನೆಲಕೊತ್ತಿ |ತೋರ್ಪಡಿಸಿದಾಟವೆಲ್ಲಿ ಕಲಿತೆಯೊ 13ದುರುಳದುಃಶಾಸನ ದ್ರೌಪದಿ ಸೀರೆಯ |ಕರದಿಂದ ಸಭೆಯೊಳು ಸೆಳೆಯುತಿರೆ ||ಹರಿಶ್ರೀ ಕೃಷ್ಣ ನೀ ಪೊರೆಯೆನಲಾಕ್ಷಣ |ಅರಿವೆ ರೂಪದೆ ಬಂದುದೆಲ್ಲಿ ಕಲಿತೆಯೊ 14ಕುರುಪತಿ ಸಭೆಯೊಳು ಗುರುವಿನಿಂದಿರುತ |ಸಿರಿಕೃಷ್ಣನು ಬರೆ ವಂದಿಸದೆ ||ಸ್ಥಿರವಾಗಿ ಕುಳಿತಿರೆ ಚರಣದಿ ಧರೆಮೆಟ್ಟಿ |ಕುರುಪನನುರುಳಿಸಿದ್ದೆಲ್ಲಿ ಕಲಿತೆಯೊ | 15ದುರಿಯೋಧನ ಪಾಂಡವರ ಶಿಕ್ಷಿಸಲು |ಮೊರೆಯಿಡಲವನ ಮರುಳುಗೊಳಿಸಿ ||ಧುರದೊಳುಪಾರ್ಥಗೆ ಸಾರಥಿಯಾಗಿ ನೀ |ಕುರುಕುಲವಳಿದುದನೆಲ್ಲಿ ಕಲಿತೆಯೊ | 16ಪತಿಶಾಪದಿ ಶಿಲೆಯಾದ ಅಹಲ್ಯೆಯ |ಹಿತದಿಂದವಳನು ಉದ್ಧರಿಸಿ ||ಪತಿಯೊಡಗೂಡಿಸಿ ಪತಿವ್ರತೆಯೆನಿಸಿದ-ಅ-|ಮಿತಮಹಿಮೆಯ ಕೃತಿಯೆಲ್ಲಿ ಕಲಿತೆಯೊ 17ಅಂಬರೀಷ ದ್ವಾದಶಿ ವ್ರತ ಸಾಧಿಸೆ |ಡೊಂಬೆತನದಿದೂರ್ವಾಸಬರೆ ||ಇಂದುಧರಾಂಶನು ರಾಜನ ಪೀಡಿಸ-|ಲಂದು ಚಕ್ರದಿ ಕಾಯ್ದುದೆಲ್ಲಿ ಕಲಿತೆಯೊ | 18ಕುಲಛಲಗಳನಳಿದ ಅಜಮಿಳ ಸರಸದಿ |ಹೊಲತಿಯ ಕೂಡಿರೆ ಮರಣ ಬರೆ ||ಬಲು ಮೋಹದ ಸುತ ನಾರಗನೊದರಲು |ಒಲಿದು ಗತಿಯನಿತ್ತುದೆಲ್ಲಿ ಕಲಿತೆಯೊ 19ಬಡತನ ಪಾರ್ವನ ಬಿಡದೆ ಬಾಧಿಸಲು |ಮಡದಿಯ ನುಡಿಕೇಳಿಆಕ್ಷಣದಿ ||ಒಡೆಯ ನೀನವನೊಪ್ಪಿಡಿಯವಲನು ಕೊಂಡು |ಕಡುಭಾಗ್ಯನಿತ್ತುದನೆಲ್ಲಿ ಕಲಿತೆಯೊ | 20ಎಂದೆಂದು ನಿನ್ನ ಗುಣವೃಂದಗಳೆಣಿಸಲು |ಇಂದಿರೆಬೊಮ್ಮನಿಗಸದಳವು ||ಮಂದರಧರಸಿರೆಪುರಂದರವಿಠಲನೆ |ಚೆಂದ-ಚೆಂದದಾಟಗಳೆಲ್ಲಿ ಕಲಿತೆಯೊ 21
--------------
ಪುರಂದರದಾಸರು