ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನುಧನ್ಯನೊ ಇವನು ಎಂಥ ಪುಣ್ಯನೊ ದೀನದಯಾಳು ಜಾನಕೀಶನ ಧ್ಯಾನ ಮಾಳ್ಪ ಮಾನವನು ಪ ಜ್ಞಾನದಿಂದ ತಿಳಿದು ಜಗ ಶೂನ್ಯವೆಂದು ಊಹಿಸಿ ಮನದಿ ದಾನವಾಂತಕನಾದ ಹರಿಯ ಧ್ಯಾನವೊಂದೇ ಕಾರಣೆಂದು ಜ್ಞಾನಬೆಳಗಿನೊಳಗೆ ನೋಡಿ ಆನಂದಿಸುತಲ್ಹಿಗ್ಗುವವ 1 ಆಶಪಾಶಗಳನು ನೀಗಿ ಈ ಮೋಸಮಯ ಸಂಸಾರದೊಳು ವಾಸನಾರಹಿತನಾಗಿ ಸದಾ ದಾಸಸಂಗಸುಖಪಡೆದು ಈಶ ಭಜನೆಯೊಳ್ಮನವಿಟ್ಟು ಈಸಿಭವಾಂಬುಧಿ ಪಾರಾಗುವವ 2 ನಂಬಿಗಿಲ್ಲದ ದೇಹವಿದನು ನಂಬಿನೆಚ್ಚಿ ಸಂಭ್ರಮಿಸದೆ ಕಂಬುಕಂಧರ ಶಂಭುವಿನುತ ಅಂಬುಜಾಕ್ಷ ಶ್ರೀರಾಮನ ನಂಬಿ ಗಂಭೀರಸುಖದೊಳಿರುವವ 3
--------------
ರಾಮದಾಸರು
ಸಿರಿ ಇಂದಿರೇಶ ದಾಸಜನಪೋಷ ದಾಸನಾಶೋತ್ತರಕೆ ಬೇಸರಿಯಬೇಡ ಪ ಭೇದಭಾವನೆ ಬಿಡಿಸು ವಾದಮತಿ ಪರಿಹರಿಸು ಸಾಧುಸಜ್ಜನರ ಸುಬೋಧನುಡಿಗಲಿಸು ಕ್ರೋಧ ತಾಮಸ ಕಡಿಸು ವೇದವಾಕ್ಯವ ತಿಳಿಸು ಸಾಧನದಿ ಪರಲೋಕ ಹಾದಿಯೊಳು ನಡೆಸು 1 ಶಾಂತಿ ಸದ್ಗುಣ ಕಲಿಸು ಶಾಂತಿನುಡಿಗಳು ನುಡಿಸು ಶಾಂತಿ ಮಂತ್ರವ ಬೋಧಿಸು ಶಾಂತಿಸ್ಥಿರಗೊಳಿಸು ಶಾಂತರೊಡನಾಟವಿರಿಸು ಶಾಂತಿಸುಖ ಕರುಣಿಸು ಶಾಂತಜನಪ್ರಭುವೆ ವೇದಾಂತ ಎನಗೊಲಿಸು 2 ಕಾಸಿನಾಸೆಯು ಬಿಡಿಸು ಹೇಸಿ ಬವಣೆಯ ಗೆಲಿಸು ಮೋಸಮಯಪಹರಿಸು ದೋಷದೂರೆನಿಸು ದೋಷನಾಶನ ಜಗದೀಶ ಶ್ರೀರಾಮ ನಿನ್ನ ಸಾಸಿರ ನಾಮ ಎನ್ನ ಧ್ಯಾಸದೊಳು ನಿಲಿಸು 3
--------------
ರಾಮದಾಸರು