ಎಂದು ಕಾಣಬೇಕೋ ಹೀಂಗಾದ ಮೇ
ಲೆಂದು ಕಾಣಬೇಕೋ ಪ
ಎಂದು ಕಾಣಬೇಕು ಮಂದಮನವೇ ನೀ
ಹೊಂದಿ ಭಜಿಸವಲ್ಲ್ಯಾಮಂದರಧರನಡಿ ಅ.ಪ
ದುರಾಸೆ ತೊರಿವಲ್ಲಿ ನಿನ್ನ ದುರ್ಗುಣ ಬಿಡವಲ್ಲಿ
ಅರಿವು ನಿಲ್ಲಿಸವಲ್ಲಿ ಮರುಳುಗುಣಳಿವಲ್ಲಿ
ನಿರುತ ಭಜಿಸುವಲ್ಲಿ ನರಹರಿ ಚರಣ 1
ಸಂಶಯ ಬಿಡವಲ್ಲಿ ಮನದ ಹಿಂಸಗುಣಳಿವಲ್ಲಿ
ಧ್ವಂಸ ಮಾಡುವಲ್ಲಿ ಸಂಸಾರದ ಬಲೆ
ಹಿಂಸನೆ ನೆನೆವಲ್ಲಿ ಕಂಸಾರಿಯಪಾದ 2
ಕ್ಲೇಶ ನೀಗುವಲ್ಲಿ ವಿಷಯದಾಸೆ ತೊರೆಯವಲ್ಲಿ
ವಾಸನಳಿಯುವಲ್ಲಿ ಮೋಸಬಿಡವಲ್ಲಿ
ಪಾದ 3