ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾರಿಜಗಣ ನಿಲಯೇ ಕಮನೀಯೆ ತಾಯೇ ಕಾಯೇ ನರಹರಿ ಜಾಯೇ ಪ ಸಾರಸಭವಮುಖ ಸುರ ಮಹನೀಯೆ ಚಾರುವದನೆ ಜಾಂಬೂನದ ಛಾಯೆ ಅ.ಪ ನಿನ್ನ ಕಟಾಕ್ಷ ಮಹಾಸುರಧೇನು ನಿನ್ನ ಮನವು ಚಿಂತಾಮಣಿಯು ನಿನ್ನಯ ಕರಗಳು ಸುರತರುವೆನಗೆ ಇಂದಿರೆ 1 ಹೃನ್ಮಂದಿರದಲಿ ಜ್ಞಾನವನು ಮನ್ಮಂದಿರದಲಿ ಭಾಗ್ಯವನು ಅಮ್ಮ ಬೆಳಸೆ ಕಮಲೆ ಸುವಿಮಲೆ ಇಂದಿರೆ 2 ಈಶನಂಘ್ರಿಯಲಿ ಭಕ್ತಿಯನು ಹರಿ ದಾಸದಾಸ್ಯದಲಿ ಶಕ್ತಿಯನು ಮೋಸಕೆ ಸಿಗದ ವಿರಕ್ತಿಯನು ಕರುಣದಲಿ ನೀಡೆ ಪ್ರಸನ್ನೆ3
--------------
ವಿದ್ಯಾಪ್ರಸನ್ನತೀರ್ಥರು
ವಾಸುದೇವ ನಿನ್ನ ದಾಸನಾಗಲು ಬಲು ಆಸೆಯ ಪೊಂದಿ ಸಂತೋಷದಲಿರುವೆನೊ ಪ ಈ ಸಂಸಾರದ ಮೋಸಕೆ ಸಿಲುಕೆ ನಾ ಶ್ರೀಶನ ಚರಣವ ಲೇಶ ಭಜಿಸಲಿಲ್ಲ ಪಾಶಕೆ ಸಿಲುಕದ ಸುಜನರುಗಳ ಸಹ ವಾಸವಿತ್ತು ಅವಕಾಶವ ನೀಡೊ ಅ.ಪ ಸಾರುತಲಿರುವ ಸಮೀರ ಸಮಯಗಳ ಸಾರವನರಿಯದೆ ದೂರಿದೆ ನಿನ್ನನು ಯಾರ ಕರುಣವೊ ತೋರಿತು ಮನದಲಿ ಘೋರತರದ ಅಪರಾಧಗಳೆಲ್ಲವು ಭೂರಿ ದಯದಿ ನಿನ್ನ ಚಾರು ಚರಣದಲಿ ಸೇರಿಸೊ ಮನವ 1 ಪರಿಪರಿ ವಿಧದ ಕುಶಾಸ್ತ್ರಗಳೋದಲು ಬರಿಗಾಳಿಯ ಗುದ್ದಿ ಮುರಿದವು ಕರಗಳು ಸಿರಿರಮಣನೆ ನಿನ್ನ ಪರಿಚಾರಕನೆಂಬೊ ಅರಿವಿನಿಂದಲೆ ಪರತರ ಸುಖವೆಂದು ಪರಿಪರಿಯರುಹುವ ಗುರು ಮಧ್ವರಾಯರ ವರಶಾಸ್ತ್ರಗಳಿಗೆ ಸರಿಯುಂಟೆ ಜಗದೆ 2 ಅನ್ಯಸೇವೆಗಳಲ್ಲಿ ಅನ್ಯಾಯದಿ ಕಾಲ ಮುನ್ನ ಕಳೆದುದನು ಮನ್ನಿಸೆಲೋ ಹರಿ ನಿನ್ನ ಸೇವೆಯ ಸುಖವನ್ನು ಅರಿತೆನೊ ಎನ್ನ ಮನಕೆ ಬಲವನ್ನು ಕರುಣಿಸುತ ಇನ್ನಾದರು ಚ್ಯುತಿಯನ್ನು ಪೊಂದಿಸದೆ ನಿನ್ನ ದಾಸನಲಿ ಪ್ರಸನ್ನನಾಗೆಲೊ 3
--------------
ವಿದ್ಯಾಪ್ರಸನ್ನತೀರ್ಥರು
ಶ್ರೀಹರಿಶರಣರು ನಮ್ಮವರು ಭವ ಶರಧಿಯ ಜಿಗಿದರು ನಮ್ಮವರು ಪ ಪರಮನ ಚರಣದಿ ಅರಿವಿಟ್ಟುರತರ ದುರಿತದಿಂದುಳಿದರು ನಮ್ಮವರು ಅ.ಪ ನಿತ್ಯತೃಪ್ತರು ನಮ್ಮವರು ಜಗ ಮಿಥ್ಯೆಂದರಿತರು ನಮ್ಮವರು ನಿತ್ಯ ಸರ್ವೋತ್ತಮ ಹರಿಯೆಂಬ ವೃತ್ತಿ ಬಲಿಸಿದರು ನಮ್ಮವರು 1 ಸತ್ತು ಚಿತ್ತರು ನಮ್ಮವರು ಮಹ ನಿತ್ಯ ಮುಕ್ತರು ನಮ್ಮವರು ಮುಕ್ತಿದಾಯಕನಂ ಗುರ್ತಿಟ್ಟರಿಯುವ ಸತ್ವ ಕಾಲಗಳು ನಮ್ಮವರು 2 ನಿರ್ಮಲಾತ್ಮಕರು ನಮ್ಮವರು ನಿಜ ಧರ್ಮ ನಿರತರೈ ನಮ್ಮವರು ಬೊಮ್ಮನಯ್ಯನ ಮರ್ಮ ತಿಳಿದು ದು ಷ್ಕರ್ಮವ ಗೆಲಿದರು ನಮ್ಮವರು 3 ದೋಷದೂರರು ನಮ್ಮವರು ನಿ ರಾಸೆ ತಾರರು ನಮ್ಮವರು ಹೇಸಿದೈವಗಳ ಆಶಿಸಿ ಬೇಡದ ಕೇಶವನ ದಾಸರು ನಮ್ಮವರು 4 ಭಜನಾನಂದರು ನಮ್ಮವರು ಸ್ಥಿರ ನಿಜ ಪದವರಿದರು ನಮ್ಮವರು ಕುಜನ ಕುಹಕಿಗಳ ಗಜಿಬಿಜಿಗಳುಕದೆ ಸುಜನರೆನಿಸಿದರು ನಮ್ಮವರು 5 ಭೂರಿ ಶೀಲರು ನಮ್ಮವರು ದುಷ್ಟ ಕೇರಿಯ ಮೆಟ್ಟರು ನಮ್ಮವರು ಸಾರಸಾಕ್ಷನ ಸವಿಸಾರವರಿದು ಪಾದ ಸೇರಿಕೊಂಡಿರುವರು ನಮ್ಮವರು 6 ಸದಮಲಾನಂದರು ನಮ್ಮವರು ದು ರ್ಮದವ ನೂಕಿದರು ನಮ್ಮವರು ಅಧಮತನದಲಿಂದೊದರುವ ಹೊಲೆಯರ ಎದೆಯ ತುಳಿವರೈ ನಮ್ಮವರು 7 ಮೋಸಕೆ ಸಿಲ್ಕರು ನಮ್ಮವರು ಯಮ ಪಾಶವ ಗೆಲಿದರು ನಮ್ಮವರು ಈಶನ ತಿಳಿದರು ನಮ್ಮವರು 8 ಸುಗಣ ಸಂತರು ನಮ್ಮವರು ಮಹ ಭಗವದ್ಭಕ್ತರು ನಮ್ಮವರು ರಘು ಶ್ರೀರಾಮ ಜಗಸರ್ವೋತ್ತಮೆಂದು ಪೊಗಳುತ ನಲಿವರು ನಮ್ಮವರು 9
--------------
ರಾಮದಾಸರು
ಹರಿಸರ್ವೋತ್ತಮನೆಂದರಸುವರು ಪ ಹರಿದಾಸರಿವರು ಧರೆಯೊಳಿವರಿಗೆ ಸರಿಗಾಣೆ ಕೇಳಮ್ಮ ಜಾಣೆ ಅ.ಪ ಸಾಧುಸಜ್ಜನರಿಗೆ ಬಾಗುವರು ವೇದಕೆ ನಮಿಸುವರು ವಾದವಾಂಛಲ್ಯವ ತೊಡದಿಹ್ಯರು ಭೇದಿಲ್ಲದಿವರು 1 ಕಾಮ ಕ್ರೋಧಾದಿಗಳು ಜೈಸಿಹ್ಯರು ತಾಮಸಬಿಟ್ಟಿಹರು ಭೂಮಿ ಮೋಹಾದಿಗಳನಳಿದಿಹ್ಯರು ಸ್ವಾಮಿನ ಭಜಿಸುವರು 2 ಕ್ಲೇಶಪಂಚಕದಿಂದುಳಿದಿಹ್ಯರು ಮೋಸಕೆ ಒಳಪಡರು ಅಶಪಾಶಗಳೆಲ್ಲ ತುಳಿದಿಹ್ಯರು ವಾಸನೆ ತೊಳೆದಿಹ್ಯರು 3 ಮೆಚ್ಚದೆ ಸಂಸಾರ ತುಚ್ಛೀಕರಿಸಿಹ್ಯರು ಎಚ್ಚರಗೊಂಡಿಹ್ಯರು ಅಚ್ಚುತಾನಂತನೆ ಗತಿಯೆಂಬುವರು ಬಚ್ಚಿಟ್ಟು ನೆನೆಯುವರು 4 ಹರಿಯೆ ಪರದೈವವೆಂದರಿತಿಹ್ಯರು ಹರಿಯ್ಹೊರತಿಲ್ಲೆಂಬುವರು ಸರುವ ಜಗಭರಿತನೆಂದವರು ಸಿರಿರಾಮನ್ನ ತಿಳಿದಿಹ್ಯರು 5
--------------
ರಾಮದಾಸರು