ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತನಾಗೋ ಹರಿಗೆ ಓ ಮನುಜ ಪ ನಾಲಗೆಯಲಿ ಶ್ರೀಲೋಲನ ನಿಜಗುಣ ಜಾಲವ ಕೊಂಡಾಡೋ ಓ ಮನುಜ 1 ಮಾನಸದಲಿ ಸದಾ ಜಾನಕಿ ರಮಣನ ಧ್ಯಾನವ ಮಾಡುತಿರೋ ಓ ಮನುಜ2 ಕರಯುಗಳಗಳಿಂ ವರಗೋಪಾಲನ ಚರಣ ಪೂಜೆಮಾಡೋ ಓ ಮನುಜ 3 ರವಿಕುಲ ತಿಲಕನ ಸುವಿಮಲ ಚರಿತೆಯ ಕಿವಿಯಲಿ ಕೇಳುತಿರೋ ಓ ಮನುಜ4 ಶ್ರೀಹರಿಯ ಜಗನ್ಮೋಹನ ಮೂರ್ತಿಯ ಊಹಿಸಿ ನೋಡುತಿರೋ ಓ ಮನುಜ 5 ಶಾಸ್ತ್ರ ಸಿದ್ಧವಹ ಕ್ಷೇತ್ರತೀರ್ಥಗಳ ಯಾತ್ರೆಯ ನೀಮಾಡೋ ಓ ಮನುಜ 6 ಶ್ರೀಶಗರ್ಚಿಸಿದ ಸುವಾಸಿತ ತುಲಸಿಯ ನಾಸಿಕದಲಿ ಮೂಸೊ ಓ ಮನುಜ7 ಸಾಧುಜನಗಳಿಗೆ ಮೋದವೀವ ಶ್ರೀ ಪಾದಗಳಿಗೆ ನಮಿಸೋ ಓ ಮನುಜ 8 ಭೋಗಿಶಯನಗನುರಾಗದಿಂದ ಶಿರ ಬಾಗಿ ಸತತ ನಡೆಯೋ ಓ ಮನುಜ 9 ಈಜಗದಲಿ ತಾ ಜಾಜಿ ಶ್ರೀಶನು ರಾಜಿಪುದನು ಕಾಣೋ ಓ ಮನುಜ 10
--------------
ಶಾಮಶರ್ಮರು
ಮಂಗಲವಾ ಪಾಡುವೆನಾ ಮಂಗಲಾಂಗ ಗುರುದೇವಗೆ ಸಂಗರಹಿತ ಸಂಪೂರ್ಣಗೆ ಕಂಗೊಳಿಸುವ ಪರಮಾತ್ಮಗೆ ಪ ಬೋಧಿಸುತಲಿ ಪ್ರೇಮದಿಂದ ಸಾಧನೆ ಸಾಧ್ಯಗಳ ಮರ್ಮ ಛೇದಿಸುತಲಿ ಭವಜಾಲವ ಮೋದವೀವ ಘನ ಮಹಿಮಗೆ 1 ಬಲು ಶಾಸ್ತ್ರದ ತೊಡಕಿಲ್ಲದೆ ಸುಲಭದಿಂದ ಬೋಧಿಸುವಾ ತಿಳಿ ಆತ್ಮನೇ ನೀನೆನ್ನುತ ಘನ ಶಾಂತಿಯ ನೀಡಿದವಗೆ 2 ನಾರಾಯಣ ಗುರುದೇವನ ಪರಮ ಪ್ರೀತಿ ಪಾತ್ರನೀತ ಧರೆಯೊಳಗವತರಿಸಿದ ಶ್ರೀ ಗುರುಶಂಕರದೇವನಿಗೆ 3
--------------
ಶಂಕರಭಟ್ಟ ಅಗ್ನಿಹೋತ್ರಿ
ರಾಜವದನೆ ನೀ ಗುರು- ರಾಜರಿರುವ ಸಂಭ್ರಮ ನೋಡೆ ಪ ರಾಜಿಸುವ ಮುಖನ ಪೂಜಿಸುವ ಯತಿವರನೆ ಅ.ಪ ದೂಷಿತ ದುರ್ಜನರ ತಾಸು ಬಾಳದಂತೆ ವಿ- ಶೇಷದಿಂದ ಭಜಿಸುವರ ಪೋಷಿಸುವ ಯತಿವರನೆ 1 ಪಾದ ನಂಬಿದವರಿಗೆ ಮೋದವೀವ ದೇವನೆ ಬೀದಿಬಿಡುವ ನಂಬಿದವರ ವಾದಿರಾಜ ದೊರೆವರನೆ 2 ಅಜಪದಕೆ ಅರ್ಹನೆಂದು ಗಜವರದನ ದಾಸನೆಂದು ಭಜನೆ ಮಾಡುವ ನಿಜವ ಪೇಳುವ ವಿಜಯವಿಠಲನ ಸೇವಕರಿವರೇ 3
--------------
ವಿಜಯದಾಸ
ಹೊಡೆಯೊ ನಗಾರಿ ಮೇಲೆ ಕೈಯ |ಆನಂದಮದವೇರಿ ಗಡಗಡ ಪ.ಮೃಡಸಖನಪಾದ ಬಿಡದೆ ಭಜಿಂಸರಫ |ಬಿಡಿಸಿ ಕಾಯ್ವ ಜಗದೊಡೆಯ ಶ್ರೀ ಹರಿಯೆಂದು 1ವೇದಗಮ್ಯ ಸಕಾಲಾರ್ತಿನಿವಾರಕ |ಮೋದವೀವ ಮಧುಸೂದನ ದೊರೆಯೆಂದು 2ಗಾನಲೋಲ ತನ್ನ ಧ್ಯಾನಿಸುವರನೆಲ್ಲ |ಮಾನದಿಂದ ಕಾಯ್ವ ಶ್ರೀನಿಧಿ ಪರನೆಂದು 3ನಿಷ್ಠೆಯಿಂದಲಿ ಮನಮುಟ್ಟಿ ಭಜಿಸುವರ |ಕಷ್ಟವ ಕಳೆವ ಶ್ರೀ ಕೃಷ್ಣನು ಪರನೆಂದು 4ಈ ಪೃಥಿವಿಯೊಳಗೆ ವ್ಯಾಪಕನಾಗಿಪ್ಪ |ಶ್ರೀಪತಿ ಪುರಂದರವಿಠಲನು ಧಣಿಯೆಂದು 5
--------------
ಪುರಂದರದಾಸರು