ತತ್ತೆ ್ವೀಶರಿಗೆ ನಮಸ್ಕಾರ ಪ
ಸತ್ತ ್ವಗುಣಿಗಳಾದ ಸಾಧುಜನರಿಗೂ ಅ.ಪ
ಮರತನುತ್ವಕ್ಕಿಗೆ ಶ್ರವಣದಿ ದಿಗ್ದೇ
ವರು ಕಣ್ಣಲಿ ಭಾಸ್ಕರನಿರುವಾ
ಕರ ಇಂದ್ರನು ಪದಕಿಂದ್ರಜ ವೈಶ್ವಾ
ನರವಾಕ್ಕಿಗೆ ಗುಹ್ಯದಿ ಮನುಪತಿ1
ಗುದಕೆ ಮಿತ್ರ ರಸನದಿ ವರುಣನು ಘ್ರಾ
ದಸ್ರರು ಯೀಪತ್ತು ಜನಂ
ವಿದುಧರ ಹಂಕಾರದಿ ಮನಕಿಂದು ಮ
ತಿದಾತ ಚಿತ್ತದೊಳುದಧಿಜೆ ಕರ್ತಳು 2
ಐದು ಭೂತದೊಳಗೈದುರೂಪ ಮ
ತ್ತೈದು ವಿಷಯದೊಳು ತದ್ರೂಪ
ವೈದುತಲಿಪ್ಪತ್ತೈದಕೆ ಸಾಕ್ಷಿಯು
ಮೋದಮಯನು ಶ್ರೀಗುರುರಾಮ ವಿಠಲನು 3