ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಮುನೇ ದುರಿತೋಪಶಮನೇ ಪ ಶರಣೆಂಬೆ ತವ ಪಾದಾಂಬುರುಹ ಯುಗಳಿಗೆ ದಿವಾ ಕರತನಯೆ ಸಪ್ತಸಾಗರ ಭೇದಿನೀ ಹರಿತೋಷ ಲಾಭ ಸುಂದರಿ ಸುಭಗೆ ನಿನ್ನ ಸಂ ದರುಶನಕೆ ಬಂದೆ ಭಕ್ತರ ಪಾಲಿಪುದು ಜನನಿ 1 ಮಕರಾದಿ ಮಾಸದಲಿ ವಿಖನಸಾವರ್ತ ದೇ ಶಕೆ ಬಂದು ವಿಜ್ಞಾನ ಭಕುತಿಯಿಂದಾ ತ್ರಿಕರಣದ ಶುದ್ಧಿಯಲಿ ಸಕೃತ ಸ್ನಾನದ ಗೈಯೆ ಸಕಲ ಸುಖವಿತ್ತು ದೇವಕೀಸುತನ ತೋರಿಸುವೆ 2 ಕನಕಗರ್ಭಾವರ್ತವೆನಿಪ ದೇಶದಲಿ ಸ ಜ್ಜನರ ಪಾಲಿಪೆನೆಂಬ ಅನುರಾಗದಿ ಪ್ರಣವಪಾದ್ಯಗೆ ವಿಮಲ ಮುನಿಯಂತೆ ನಿರುತ ಕುಂ ಭಿಣಿಯೊಳಗೆ ಸರಸ್ವತಿ ದ್ಯುನದಿಯಂದದಿ ಮೆರೆದೆ 3 ಜಮದಗ್ನಿ ಮುಖ್ಯ ಸಂಯಮಿಗಳನುದಿನದಿ ಆ ತಮ ತಮ್ಮೊಳಗೆ ರಮಾರಮಣ ದಾಮೋದರನ ಸುಮಹಿಮೆಗಳನು ಪೊಗಳುತಮಿತ ಮೋದದಲಿಹರು 4 ಪಿಂಗಳಾಧಿಷ್ಠಿತೆ ಶುಭಾಂಗಿ ಸುಮನವನಿತ್ತು ಕಂಗೊಳಿಸು ಎನ್ನಂತರಂಗದಲ್ಲಿ ತುಂಗ ಸುಮಹಿಮ ಜಗನ್ನಾಥ ವಿಠಲನ ಸುಗು ಣಂಗಳ ತುತಿಪುದಕೆ ಮಂಗಳ ಮತಿಯನೀಯೇ 5
--------------
ಜಗನ್ನಾಥದಾಸರು