ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಡಾನೆ ವರ ಪಾಲಿಸೋ ಕೋಶಿಗಿಯೊಡೆಯ ಹನುಮನೆ ಪ ತಡೆಯಾದೆ ತವ ಪಾದಯುಗಳ, ಜಡಜ ನಂಬಿದೆ ಅ.ಪ ಕಡಲ ಲಂಘಿಸಿ ರಾಮನ ಮಡದಿಗುಂಗುರವನ್ನೆ ಇತ್ತು ನಗರ ಬಡಬಗೆ ನೀಡಿ ಬಂದೆ ನೀ 1 ದುರುಳ ದುಶ್ಯಾಸನುದರ ಕರುಳುಗಳಿಂದ ದುೃಪದ ತರಳೆಯಳಾ ಮನಪೂರ್ತಿಸಿ ಹಿಂಗುರುಳು ಕಟ್ಟಿದ ಧೀರನೆ 2 ದಿಟ್ಟ ಮೋದತೀರ್ಥರೆÉನಿಸಿ ದುಷ್ಟ ಮಾಯಾವಾದ ಮತ ಸುಟ್ಟ ಶ್ರೀ ಗುರುಜಗನ್ನಾಥ ವಿಠಲ ಪದ ಭಜಕನೆ 3
--------------
ಗುರುಜಗನ್ನಾಥದಾಸರು
ನೀನ್ಯಾಕೊ ನಿನ್ನ ಗೊಡಿವ್ಯಾಕೊ ಹನುಮೇಶ ಪ ಅನ್ಯಮತಿ ಪೊಂದಿ ಮಿಥ್ಯಾಜ್ಞಾನಿಯಾಗದೆ ಪಾದ ಪೊಂದಿದ್ದರೆ ಸಾಕೊ ಅ.ಪ ಜೀವೋತ್ತಮರ ಭಾವವನನುಸರಿಸಿ ನೋವಾಗುವ ಮಾರ್ಗವ ಜರಿದು ಭಾವಜನಯ್ಯ ನಿನ್ನ ಭಾವವ ಕಂಡು ಆವಾಗಲು ಸುಖಿಪರ ಗೃಹ ಕಾವನಾದರೆ ಸಾಕು 1 ದೇಹಸ್ಥಿರವಲ್ಲ ದಹನಶೀಲಭವ ಇಹಸುಖ ಹೇಯವೆಂದು ಮೋಹಪಾಶಕೆ ಸಿಗಿಸದೆ ನಿನ್ನನುಪಮ ಮಹಿಮೆಗಳ ಕೇಳುತ ಆನಂದವಾದರೆ ಸಾಕು 2 ಮೋದತೀರ್ಥರೆ ಸದ್ಗುರು ಭೇದ ಜ್ಞಾನವೆ ಗತಿಪ್ರದ ವೇದ ಸಚ್ಛಾಸ್ತ್ರಂಗಳೆ ಸತ್ಯ ತಿಳಿದು ಆದಿ ವಿಜಯ ರಾಮಚಂದ್ರವಿಠಲನೆ ಅಗಾಧಮಹಿಮ ಮಮ ಪ್ರೀಯನೆಂಬ ಭಕ್ತಿ ಇತ್ತರೆ ಸಾಕೊ3
--------------
ವಿಜಯ ರಾಮಚಂದ್ರವಿಠಲ
ವಾಯುದೇವರು ನಿನ್ನ ನಂಬಿ ಬಂದೆ ಪಂಚಮುಖಿ ಪ್ರಾಣ ಅನ್ಯ ಹಂಬಲ ಬಿಡಿಸಿ ಬಿಂಬ ಮೂರುತಿ ತೋರೋ ಪ ಹಿಂದೆ ತ್ರೇತಾಯುಗದಿ ರಾಮನಾಜ್ಞೆಯ ಹೊಂದಿ ಸಿಂಧು ದಾಟಿ ಸೀತೆಗೆರಗಿ ನಿಂದು ಸುಂದರ ರಾಮ ಮುದ್ರಿಕೆಯಿತ್ತು ಲೀಲೆಯಲಿ ಕೊಂದ ರಕ್ಕಸ ಪುರವನನಲಗೆ ಇತ್ತೆ 1 ಬಂಡಿ ಅನ್ನವನುಂಡು ಭಂಡ ಬಕನಾ ಕೊಂದು ಹಿಂಡು ನೃಪರಾ ಜರಿದು ಕೊಂಡು ದ್ರೌಪದಿಯಾ ಮಂದಮತಿಗಳನಳಿದು ತಂದಿ ಸೌಂಗಂಧಿಕವ ಪುಂಡ ಕೀಚಕರಳಿದ ಪಾಂಡವಪ್ರಿಯದೂತ 2 ಮೋದತೀರ್ಥರೆನಿಸಿ ವಾದಿಗಳ ನಿಗ್ರಹಿಸಿ ಬೋಧಿಸಿ ಸುಜನರಿಗೆ ಮಾಧವನ ಗುಣವ ಸಾಧು ವಂದಿತ ಬಾದರಾಯಣರು ಇರುತಿರುವ ಬದರಿಯಲ್ಲಿರುವಿ ಶ್ರೀ ನರಹರಿಯ ತೋರೋ 3
--------------
ಪ್ರದ್ಯುಮ್ನತೀರ್ಥರು