ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧಿಕಾರಿ ಮೋಕ್ಷಾಧಿಕಾರಿ ಬಲುಗುದಿಗೆಯ ಮಾರಿ ಅನಧಿಕಾರಿ ಪ ಮುರುಕು ಮಾಳಿಗೆಯಲಿರೆ ಮರುಗುತಲ-ವರಿಗೆ ಮನೆಯ ಕೊಡುವನವನಧಿಕಾರಿಮರಗಳ ಕಡಿವನು ಮುಂದುಗಾಣದಲೆಮನೆ ಹೊಗಗೊಡದವ ಅನಧಿಕಾರಿ1 ಕೇಳುತ ತತ್ವವ ಆಲೋಚನೆಮಾಡಿ ಅಂತೆಯ ನಡೆವವನಧಿಕಾರಿಖೂಳರೊಳಾಡುತ ಕುಂಚಿತನೆ ಕುರುಡನವನು ಅನಧಿಕಾರಿ 2 ಪಡೆಯನು ಪಾಪವ ಬಿಡನವ ಸತ್ಯವನುಡಿವ ಸುವಾಕ್ಯವನಧಿಕಾರಿಮಡದಿಯ ಮೋಹಕೆ ಮುಂದುಗಾಣದಲಿಹಮುಡುದಾರನೆನಿಪವ ಅನಧಿಕಾರಿ 3 ತಿಳಿದರ ಸೇವೆಗೆ ತೇಯುವ ತನುವನು ತಗಲನು ನಿಂದ್ಯಕೆ ಅಧಿಕಾರಿತಲೆಯನು ಮಣಿಯನು ಮನದಲಿ ಮೋಸವ ಚಿಂತಿಪನವನು ಅನಧಿಕಾರಿ 4 ಚಿತ್ ಬಿಂದು ಉಕ್ಕುತ ಚಿತ್ಸುಖ ಸವಿದು ಚಿದಾನಂದನಾಗುವನಧಿಕಾರಿಎಡಬಲ ನೋಡುತ ಎತ್ತತ್ತ ಒಲೆವುತ ನಿಂತಿಹನವನು ಅನಧಿಕಾರಿ 5
--------------
ಚಿದಾನಂದ ಅವಧೂತರು
ಗೆಲವ ನೀಡೆನಗೆ ಇಹ್ಯದ ಗೆಲವ ನೀಡೆನಗೆ ಪ ಗೆಲವ ನೀಡಿಯೆನ್ನ ಮಲಿನಬಿಡಿಸಿ ನಿನ್ನ ವರ ದಿವ್ಯಪಾದನಳಿನದೊಲುಮೆಯಿತ್ತು ಅ.ಪ ಎಡರು ಆವರಿಸಿದ ಕಾಲದಿ ದೈರ್ಯವ ದಯಮಾಡೊ ಸಡಗರಸಿರಿ ಬಂದ ಕಾಲದಿ ಶಾಂತಿ ವಿನಯ ಕೊಡೊ ಕಡುಜವ್ವನದಲಿ ದುಡುಕನುಕೊಡದಿರು ಪಿಡಿದು ನೇಮವನು ಬಿಡದ ಛಲವನಿತ್ತು 1 ಧರಣಿಯ ಸುಖಕಾಗಿ ಎನ್ನಿಂ ಪುಸಿಯ ನುಡಿಸದಿರೋ ಹರಣಪೋದರು ಪರರಿಗೆ ದೇಹಿಯೆನಿಸದಿರೋ ಪರಮಹರುಷದಿಂದ ಹರಿಶರಣರು ಮೆಚ್ಚಿ ಶಿರವದೂಗುವಂಥ ನಿರುತವರ್ತನೆಯಿತ್ತು 2 ಸತತದಿ ಕರ್ಣಕ್ಕೆ ಹರಿಕಥೆ ಕೀರ್ತನೆ ಕರುಣಿಸೊ ಪತಿತಪಾವನವೆನಿಪ ಭಜನಾನಂದವ ಪಾಲಿಸೊ ಕ್ಷಿತಿಯೋಳಧಿಕ ಸದುಗತಿ ಮೋಕ್ಷಾಧಿ ಪತಿ ಶ್ರೀರಾಮ ನಿಮ್ಮ ಪಾದಭಕ್ತಿಯಿತ್ತು 3
--------------
ರಾಮದಾಸರು
ದತ್ತವಧೂತ ಶ್ರೀ ಗುರು ಸಾಕ್ಷಾತ ನಿತ್ಯವಾಗಿಹ್ಯ ನಿಜ ನಿರ್ಗುಣನೀತ ಪ ನಿರ್ಗುಣ ನಿಶ್ಚಲ ಗಗನಾಕಾರ ಸುಗುಣದಲಿ ತಾನೆ ಸಹಕಾರ 1 ಸಹಕಾರನಹುದು ಸದ್ಗುರುನಾಥ ಬಾಹ್ಯಾಂತ್ರದಲಿ ತಾನೆ ಪ್ರಖ್ಯಾತ 2 ಪ್ರಖ್ಯಾತನಹುದು ತ್ರಿಗುಣರಹಿತ ಮುಖ್ಯಮುನಿಗಳಿಗೆ ಮೋಕ್ಷ ಸುದಾತ 3 ದಾತನಹುದು ತ್ರೈಲೋಕ್ಯದೊಳೀತ ಈತನೆ ವಿಶ್ವದೊಳಗೆ ದೈವತ 4 ದೈವತನಹುದು ದೇವಾದಿಗಳಾತ್ಮ ಮೂರ್ತಿ ಶ್ರೀಹರಿ ಸರ್ವಾತ್ಮ 5 ಹರಿ ಸರ್ವಾತ್ಮನಾಗಿಹ ನಿಜಪೂರ್ಣ ಪರಿಪರಿ ಆಗುವ ಅಗಣಿತಗುಣ 6 ಅಗಣಿತಗುಣ ಅಗಾಧ ಅಪಾರ ನಿಗಮಗೋಚರ ನಿರುಮಪ ನಿರ್ಧಾರ 7 ನಿರ್ಧಾರನು ನಿಜನಿಷ್ಟರಪ್ರಾಣ ಸಾಧಕರಿಗೆ ಸದ್ಗತಿ ಸಾಧನ 8 ಸಾಧನದೊಡೆಯನಹುದು ಶಾಶ್ವತ ಆದಿದೇವ ಸಕಲಾಗಮ ಪೂಜಿತ 9 ಪೂಜಿತ ಬ್ರಹ್ಮಾದಿಗಳ ಕೈಯ ಮೂಜಗದೊಳು ರಾಜಿಸುತಿಹ 10 ರಾಜಿಸುತಿಹ ತಾ ರಾಜರಾಜೇಂದ್ರ ಸುಜನರ ದೃಷ್ಟಿಯೊಳಿಡದಿಹ ಸಾಂದ್ರ 11 ಸಾಂದ್ರವಾಗಿಹನು ಸಾರ್ವಭೌಮ ಇಂದ್ರಾಧಿಕÀರೊಂದಿತ ಮಹಿಮ 12 ಮಹಿಮನಹುದು ಮುನಿಜನ ಮಂದಾರ ಧ್ಯಾಯಿಸುವರ ನಿಜ ಸಾಕ್ಷಾತಾರ 13 ಸಾಕ್ಷಾತಾರ ಶ್ರೀಗುರು ಜಗದೀಶ ಮೋಕ್ಷಾಧಿಕರಿಗಳಾತ್ಮ ಉಲ್ಹಾಸ 14 ಉಲ್ಹಾಸವೆ ನಿಜ ವಸ್ತುವೆ ತಾನು ಕಲ್ಪದ್ರುಮ ನಿಜ ಕಾಮಧೇನು 15 ಕಾಮಧೇನುವಾಗಿ ರಕ್ಷಿಸುವ ಬ್ರಹ್ಮನಿಷ್ಠರ ಹೃದಯದಲಿ ಭಾಸಿಸುವ 16 ಭಾಸುವ ಭಾಸ್ಕರಕೋಟಿ ಪ್ರಕಾಶ ಋಷಿ ಮುನಿಗಳ ನಿಜಮಾನಸ ಹಂಸ 17 ಹಂಸನಾಗಿ ವಿಶ್ವಂಭರಿತ ಸೂಸುವ ಸರ್ವಾಂತ್ರಲಿ ಅನಂತ 18 ಅನಂತ ಕೋಟಿ ಬ್ರಹ್ಮಾಂಡನಾಯಕ ಅನುಭವಿಗಳಿಗೆ ದೋರುವ ಕೌತುಕ 19 ಕೌತುಕದೋರಿದ ಕರುಣದಲ್ಯನಗೆ ಜೀವಪಾವನಗೈಸಿದ ಜಗದೊಳಗೆ 20 ಜಗದೊಳು ಸ್ತುತಿಸುವೆನು ಅನುದಿನ ಶ್ರೀಗುರು ದತ್ತವಧೂತ ಪೂರ್ಣ 21 ಪೂರ್ಣ ಸ್ಮರಿಸುವೆನು ಮನದೊಳು ನೋಡಿ ಪುಣ್ಯ ಪ್ರಭೆಯ ನಿಜ‌ಘನ ಒಡಗೂಡಿ22 ಒಡಗೂಡಿದ ನಿಜಾನಂದದ ಗತಿಯು ಕ್ಷಿತಿಯೊಳು ಕೊಂಡಾಡಿದ ಮಹಿಪತಿಯು 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನನ್ನ ಕರ್ಮವು ಬಂದು ಇನ್ನು ಬಾಧಿಸುತಿರೆ ಅನ್ಯರೇನ ಮಾಡುವರೈ ಪ ಕನ್ನೆ ಶಿರೋಮಣಿ ದ್ರೌಪತಿ ವರದನೆ ಎನ್ನ ಪಾಲಿಸೊವೋ ಪ್ರಸನ್ನ ರಂಗನಾಥ ಅ.ಪ ಭಿಕ್ಷಕ್ಕೆ ಬಂದಾಗ ಲಕ್ಷ್ಯವಿಡದೆ ಹೋಗಿ ಸಾಕ್ಷಿಯ ನಾಕಂಡೆನೈ ಪಕ್ಷಿ ವಾಹನನೆ ನೀರಕ್ಷಿಸಬೇಕಯ್ಯ ಸಾಕ್ಷಾತನೆಂತೆಂಬೊ ಮೋಕ್ಷಾಧಿಕಾರಿಯೆ 1 ದೋಷಕ್ಕೆ ಗುರಿಯಾದೆನೈ ಆಶೆಯ ಬಿಡಿಸಯ್ಯಾ ಶ್ರೀ ವೆಂಕಟರಮಣ ದೋಷರಹಿತ ಗುರುವು ದಾಸ ತುಲಸೀರಾಮ 2
--------------
ಚನ್ನಪಟ್ಟಣದ ಅಹೋಬಲದಾಸರು
ಹೆಚ್ಚಿನ ಗೋಜ್ಯಾಕೆಲೆ ಹುಚ್ಚು ತಿಳಿ ಮುಚ್ಚಿಕೊಂಡಿದೆ ನಿನ್ನ ಭವಕಿಚ್ಚು ಪ ಹುಚ್ಚು ಮತಿಯ ನೀಗಿ ಅಚ್ಯುತನಂಘ್ರಿಯ ಮೆಚ್ಚಿಸಿ ಮೆಲಿ ಅನುಭವದ್ಹುಚ್ಚು ಅ.ಪ ಕೀಳನಾಗದೆ ನೀ ನಿಜವ ತಿಳಿ ನಿನ್ನ ಕಾ ಲೊಳು ಬಿದ್ದಾದ ಸಂಕೋಲಿ ನಾಳೆಗೆ ಬರುತಾದ ಕಾಲನ ದಾಳಿಯು ತಾಳದೆಳಿತಾರ ಜಡಿದ್ವಜ್ರದ ಕೀಲಿ 1 ಹಂದಿಯ ಜನುಮಕೆ ಬೀಳಬೇಡ ಬೇಡಿ ಮಂದರ ನಿಲಯನ ಹೊಂದಿ ಭಜಿಸಿ ಆನಂದಪಡಿ 2 ದೂರದಿಂದ ಬಂದಿದ್ದಿ ಹೌಹಾರಿ ತ್ವರ ವ್ಯಾ ಪಾರ ಮಾಡಿಕೊಳ್ಳೊ ಭರ್ಜರಿ ಸಾರ ಮೋಕ್ಷಾಧಿಪ ಧೀರ ಶ್ರೀರಾಮನ ಪಾದ ವಾರಿಜ ನಂಬಿ ಹೊಡಿ ಜಯಭೇರಿ 3
--------------
ರಾಮದಾಸರು