ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಸಿರಿ ರಮಣಿಯೆ ಕರಗಳ ಮುಗಿಯುವೆ ವರಮತಿ ನೀಡೆನಗೆ ಪ ಸರಸಿಜಾಕ್ಷನ ವಕ್ಷಸ್ಥಳದಿ ನಿವಾಸಿಯೆ ನಿರುತದಿ ಹರಿಪಾದ ಸ್ಮರಣೆ ಎನಗೆ ಕೊಡು ಅ.ಪ ಮಂದರೋದ್ಧರ ಗೋವಿಂದ ಗುಣಗಳಾ- ನಂದದಿ ಸ್ತುತಿಸಿ ಹಿಗ್ಗುವ ಜನನಿ ಇಂದಿರೆ ರಮೆ ಭಾರ್ಗವಿಯೆ ನಿನ್ನಯ ಪಾದ ದ್ವಂದ್ವಕೆ ನಮಿಪೆ ಸುಗಂಧಿ ಸುಂದರಿಯೆ 1 ಪರಮಪುರುಷ ಪುರುಷೋತ್ತಮನರಸಿಯೆ ಪಾವನಿ ಜನನಿ ಸುರರು ಕಿನ್ನರರು ಕಿಂಪುರುಷರು ಸ್ತುತಿಪರು ವರ ಮಹಾಲಕ್ಷ್ಮಿ ಸುಂದರಿ ಜಯ ಜಯ ಎಂದು 2 ಗಂಗಾಜನಕ ಪಾಂಡುರಂಗ ನಿಜ ಸತಿ ಭೃಂಗಕುಂತಳೆ ಭಾಗ್ಯದ ಖಣಿಯೆ ಅಂಗಜಜನಕ ವಿಹಂಗವಾಹನನ ಪಾ- ದಂಗಳ ಸ್ಮರಣೆಲಿ ನಲಿವ ಮನವ ಕೊಡು 3 ಪಕ್ಷಿವಾಹನ ಕಮಲಾಕ್ಷನ ಮಹಿಮೆಯ ವೀಕ್ಷಿಸಿ ಮನದಿ ಹಿಗ್ಗುವ ಜನನಿ ರಾಕ್ಷಸನಾಮ ವತ್ಸರದಲಿ ಭಕುತರ ಮೋಕ್ಷದಾತನು ಸಲಹುವ ಸುಜನರನು4 ಕಮಲಸಂಭವ ಕಮಲಾಲಯೆ ಹರಿಪಾದ ಕಮಲಭೃಂಗಳೆ ಹಿರಣ್ಯಹರಿಣಿ ಕಮಲನಾಭ ವಿಠ್ಠಲನೊಡಗೂಡಿ ಹೃ- ತ್ಕಮಲದಿ ಶೋಭಿಸು ಎನುತ ಸ್ತುತಿಸುವೆನು 5
--------------
ನಿಡಗುರುಕಿ ಜೀವೂಬಾಯಿ