ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೋಗುವೆವಮ್ಮ ಪ ಉದಯವಾಗದ ಮುನ್ನ ಬರುವ ಕಣಮ್ಮ ಕದವ ಬಾರಿಸಿ ಒಳಪೊಕ್ಕ ಕಣಮ್ಮ ಮೊದಲೆನ್ನ ಮಗಳ ತಕ್ಕೈಸಿದನಮ್ಮ ಸದರದಲಿ ಮೊಸರನೆಲ್ಲ ಕುಡಿದ ಕಣಮ್ಮ 1 ಉಟ್ಟ ಸೀರೆಯ ಬೆಲೆ ಏನೆಂದಮ್ಮ ಪಟ್ಟೆ ಕುಪ್ಪಸಕೇನು ಪಣವೆಂದನಮ್ಮ ತೊಟ್ಟು ಕೊಂಡೆನ್ನನು ಬಿಡದೆ ಕಾಣಮ್ಮ 2 ನಸುಗಪ್ಪಿನೊಳು ಸಜ್ಜೆಮನೆಯೊಳಗಮ್ಮ ಮೊಸರು ಪಾಲ್ಬೆಣ್ಣೆಯ ಮೆದ್ದ ಕಾಣಮ್ಮ ಸೊಸೆಯು ಪಿಡಿಯೆ ಬಿಗಿದಪ್ಪಿದನಮ್ಮ ನಸು ಬೆವರಿಡೆ ತನು ಬಿಡದೆ ಕಾಣಮ್ಮ 3 ಜಾರ ಜೋರರ ಶಿಖಾಮಣಿಯಿವನಮ್ಮ ಯಾರೆಂದು ಹೊರಗೊಬ್ಬ ಕರೆಯೆ ಗೋಪಮ್ಮ ಚೋರ ಗಂಡಿಯ ಪೊಕ್ಕು ಓಡಿದನಮ್ಮ 4 ಊಚು ನೀಚುಗಳೇನು ಇವಗಿಲ್ಲವಮ್ಮ ನಾಚಿಕೆನಮಗಾಗುತಿದೆ ಹೇಳಲಮ್ಮ ಕೀಚಕರಿಪು ಕೋಣೆ ಲಕ್ಷ್ಮೀಶಗಮ್ಮ ವಾಚಿಸೆ ನೀನೊಂದ ಮಾತ ನಮ್ಮಮ್ಮ 5
--------------
ಕವಿ ಪರಮದೇವದಾಸರು
ಶ್ರೀ ಹರಿಸ್ತುತಿ ಗೋಪಿ ನಿನ್ನ ಮಗ ಪ ಯಥೇಷ್ಟ ಮಾಡುವ ಈ ಕಳ್ಳ ಕೃಷ್ಣನು ಅ.ಪ ಅಡಗಿ ಮನೆಯೊಳಡಗಿಕೊಂಡಿರುವ ಅಲ್ಲಿದ್ದ ಭಾಂಡಗಳ್ ಬುಡಮೇಲ್ ಮಾಡಿ ಅಡಕಲೇರಿಸುವಾ ಅಡಿಗಳನು ಮೆಲ್ ನಿಡುತ ನೆಲವಿಲಿ ಇಡುವ ಪಾಲ್ ಮೊಸರನೆಲ್ಲ ಸವಿಯುವ ಗಡನೆ ಗೆಳೆಯರ ನೊಡನೆ ಬಂದು ಕಡೆವ ಗಡಗಿಯ ನೊಡೆದು ಪೋಗುವಾ 1 ಸಿಕ್ಕಮನೆ ಮನೆ ಹೊಕ್ಕು ನೋಡುವನೆ ತಾ ಸಿಕ್ಕದಿರನು ತಕ್ಕ ಕಳ್ಳಿವ ಠಕ್ಕನಾಗಿಹನು ಅಕ್ಕ ಕೇಳೆÀ ಅಕ್ಕರದಿ ಕೈಯಿಕ್ಕಿ ಕಡೆದಿಹ ಚೊಕ್ಕ ಬೆಣ್ಣೆಯ ಚಿಕ್ಕ ಬಾಲರಿಗಿಕ್ಕಿ ತಿನ್ನುವ ಮಿಕ್ಕ ಬೆಣ್ಣೆಯ ಬೆಕ್ಕಿಗ್ಹಾಕುವ 2 ಎಂಥವನಿವ ಖಳರಂತೆ ಮಾಡುವನೆ ಬೇ ಕಂತೆ ಕರುಗಳ ತಂತುಬಿಚ್ಚಿ ನಿಂತುನೋಡುವನೆ ಅಂಥ ಇಂಥವನಲ್ಲ ನಿನ್ನ ಮಗ ಸಂತ ಜನಮನ ದಂತರಂಗನು ಕಾಂತೆಯರು ಮನದಂತೆ ಬೈದರೆ ನಿಂತು ನಗವಾನಂತಾದ್ರೀಶನು 3
--------------
ಅನಂತಾದ್ರೀಶರು
ಗೋಪಿನಿನ್ನ ಮಗನಿಗಾಗೆ-ಕೇರಿಯ ಬಿಟ್ಟು |ಪೋಪೆವೆ ಬೆಳಗಾಗೆ ಪಮಕ್ಕಳನಾಡಗೊಡ-ಮನೆಯ ಹೊಕ್ಕು |ಉಕ್ಕುವ ಪಾಲ್ ಕುಡಿವ||ಗಕ್ಕನೆ ಕಂಡರೊಡನೆ ನಮ್ಮೆಲ್ಲರ ಕೈಗೆ |ಸಿಕ್ಕದೆ ಓಡಿದನೆ 1ಮೊಸರನೆಲ್ಲವ ಸುರಿದ-ಮೇಲಿಟ್ಟಂಥ |ಹೊಸಬೆಣ್ಣೆಗೆ ತಾ ಹಾರಿದ ||ಕೊಸರಿ ನೆಲುವಿನ ಮೇಲಿರಿದ ಕೃಷ್ಣ ತಾ |ಮುಸುರೆನೊಳಗೆ ಸುರಿದ 2ಅಂತಿಂಥವನಲ್ಲ ಕಾಣೆ-ನಿನ್ನವ ಜಗ-|ದಂತರ್ಯಾಮಿಯು ಜಾಣೆ ||ಅಂತರಂಗದಲ್ಲಿ ನೋಡಲು ಪುರಂದರ-|ವಿಠಲ ಬಂದಿದ್ದ ಕಾಣೆ 3
--------------
ಪುರಂದರದಾಸರು