ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ಚಿಂತಿಪೆ ಬರಿದೆ ನೀ -ವಿಧಿಬರೆದ - |ವಾಕುತಪ್ಪದು ಪಣೆಯೊಳುಪಹುಟ್ಟುವುದಕೆ ಮೊದಲೆ ತಾಯ್ಮೊಲೆಯೊಳು |ಇಟ್ಟಿದ್ದೆಯೊ ಪಾಲನು ||ತೊಟ್ಟಿಲೊಳಿರುವಾಗಲೆ - ಗಳಿಸಿ ತಂ - |ದಿಟ್ಟು ಕೊಂಡುಣುತಿದ್ದೀಯಾ 1ಉರಗವೃಶ್ಚಿಕಪಾವಕ-ಕರಿಸಿಂಹ |ಅರಸು ಹುಲಿ ಚೋರ ಭಯವು ||ಹರಿಯಾಜೆÕಯಿಂದಲ್ಲದೆ - ಇವು ಏಳು - |ಶರಧಿಪೊಕ್ಕರು ಬಿಡವೊ- ಮರುಳೆ2ಇಂತು ಸುಖ - ದುಃಖದೊಳ್ಸಿಲುಕಿ - ಮರುಗಿ ನೀನು - |ಭ್ರಾಂತನಾಗಿ ಕೆಡಬೇಡವೊ ||ಸಂತೋಷದಿಂದ ಅರ್ಚಿಸಿ - ಭಜಿಸೋ ನೀ - |ಸಂತತಪುರಂದರವಿಠಲನ - ಮರುಳೆ3
--------------
ಪುರಂದರದಾಸರು
ಬಾತೆಗೆ ಬಾರದ ವಸ್ತು ಬಹಳಿದ್ದರೇನುಹೋತಿನ ಕೊರಳೊಳಗೆ ಮಾಲೆಯಿದ್ದರೇನು ? ಪ.ತಾನು ಉಣ್ಣದ ದ್ರವ್ಯ ತಾಳೆಯುದ್ದ ಇದ್ದರೇನು?ದಾನವಿಲ್ಲದ ಮನೆಯು ದೊಡ್ಡದಾದರೇನು ?ಹೀನ ಕುಲದವಂಗೆ ಹಿರಿತದ ಬಂದರೇನುಶ್ವಾನನ ಮೊಲೆಯೊಳು ಹಾಲಿದ್ದರೇನು 1ವಾದಿಸುವ ಮಗನು ಒಯ್ಯಾರದಲಿದ್ದರೇನುಕಾದುವಸತಿ ಕೆಲದೊಳಿದ್ದರೇನು ?ಕ್ರೋಧವನು ಅಳಿಯದ ಸೋದರನು ಇದ್ದರೇನುಮಾದಿಗರ ಮನೆಯಲಿ ಮದುವೆ ಆದರೇನು 2ಹೋಗದೂರಿನ ಹಾದಿಕೇಳಿ ಮಾಡುವುದೇನುಮೂಗನ ಕಾಡ ಏಕಾಂತವಿನ್ನೇನು ?ಯೋಗಿ ಶ್ರೀ ಪುರಂದರವಿಠಲನ ನೆನೆಯದವಯೋಗಿಯಾದರೆ ಏನು ಜೋಗಿಯಾದರೆ ಏನು ? 3
--------------
ಪುರಂದರದಾಸರು
ರಂಗ ಕೊಳಲನೂದಲಾಗ |ಮಂಗಳಮಯವಾಯ್ತುಧರೆ-ಜ -ಪನಂಗಳು ಚೈತನ್ಯ ಮರೆದು |ರಂಗಧ್ಯಾನಪರರಾದರು ಅ.ಪಬಾಡಿದ ಮಾಮರಗಳು ಗೊನೆಯೊಡೆದವು |ತೀಡುತ ಮಾರುತ ಮಂದಗತಿಗೊಯ್ಯೆ ||ಬಾಡಿದ ಬರಲು ಫಲದ ಗೊಂಚಲು |ಪಾಡಲೊಲ್ಲವಳಿಕುಲಗಳು ||ಹೇಡಿಗೊಂಡವು ಜಕ್ಕವಕ್ಕಿ ಗಿಳಿ ಮಾ-|ತಾಡದೆ ಕಳೆಗುಂದಿದವು ಕೋಗಿಲೆ ||ಓಡಾಟ ವೈರಾಟ ಬಿಟ್ಟು ಖಗಮೃಗ |ಗಾಢ ನಿದ್ರಾವಶವಾದವು 1ಕೆಳಗಿನುದಕ ಉಬ್ಬೇರಿ ಬಂದುವು |ತುಳುಕಿ ಚೆಲ್ಲಾಡಿ ನಿಂದಳು ಯಮುನೆ ||ಮಳೆಯ ಮೋಡೊಡ್ಡಿ ಮೇಘಾಳಿ ಧಾರಿಟ್ಟುವು |ಕಲುಕರಗಿ ಕರಗಿ ನೀರಾದುವು ||ನಳಿನಚಂಪಕನಾಗಪುನ್ನಾಗಪಾ-|ಟಲ ಸೇವಂತಿಗೆ ಕುಂದ-ಮೊಲ್ಲೆ ಮಲ್ಲಿಗೆ ಬ-||ಕುಲ ಮಾಲತಿ ಜಾಜಿ ಪರಿಮಳಗೂಡಿ |ನೀಲಾಂಗನಂಘ್ರಿಗೆ ನೆರೆದುವು 2ಕೆಚ್ಚಲು ಬಿಗಿದು ತೊರೆದ ಮೊಲೆಯೊಳು |ವತ್ಸದೊಡಲಾಸೆಜರಿದುಎಳೆಹಲ್ಲ||ಕಚ್ಚದಲ್ಲಿಗಲ್ಲಿ ನಿಂದುವು ತಮ್ಮಯ |ಪುಚ್ಚವ ನೆಗಹಿ ನೀಂಟಿಸಿ ||ಅಚ್ಯುತನಾಕೃತಿ ನೋಡಲು ಸುರರಿಗೆ |ಅಚ್ಚರಿಯಾಯಿತು ಆವು ಕಂಡಾನಂದ ||ಪೆಚ್ಚಿ ಮುಕುಂದನ ಲೀಲಾವಿನೋದಕೆ |ಮೆಚ್ಚಿ ಕುಸುಮವ ಸುರಿದರು 3ಮುದ್ದು ಮೋಹನನ ಮಂಜುಳ ಸಂಗೀತ |ಸದ್ದನಾಲಿಸಿ ಗೋಪಾಂಗನೆಯರೆಲ್ಲ ||ಬುದ್ಧಿ ಸೂರಾಡಿ ತಮ್ಮಾಲಯವನೆ ಬಿಟ್ಟು |ಎದ್ದು ಪರವಶರಾದರು ||ಸಿದ್ದ ಮುನಿಜನರಿದ್ದ ಸಮಾಧಿಯಿಂ-|ದೆದ್ದೆದ್ದು ಕುಣಿದೆದ್ದರು ಎದುರಾಗಿ ||ಗದ್ದುಗೆಯರಸನ ಒಲಿಸಿಕೊಂಡರು |ಗೆದ್ದರು ಭವದ ಸಮುದ್ರವನು 4ಶ್ರೀಮನೋಹರ ಗೋಪಾಲ ಮೂರುತಿ |ಆ ಮಧು ಕುಂಜ ವನದಿ ತ್ರಿಭಂಗಿಯಲಿ ||ಹೇಮಾಂಬರವುಟ್ಟು ಗೀರುಗಂಧ ಕಸ್ತೂರಿ |ನಾಮ ಮುಕುಟದ ಬೆಳಕಿನಲಿ ||ದಾಮವನಮಾಲೆ ಶ್ರೀವತ್ಸಕೌಸ್ತುಭ|ಸ್ವಾಮಿ ಪುರಂದರವಿಠಲರಾಯನ |ರಾಮಶ್ರಿ-ಗುಂಡಶ್ರಿ ಮೇಘರಂಜನೆ ಪಾಡಿ |ಸಾಮಗಾನಪ್ರಿಯ ನಮೊ ಎಂದರು 5
--------------
ಪುರಂದರದಾಸರು