ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪದ್ಮಾಲಯೆ ಪೊರೆಯೆ ಸದಯೆ ಪ. ಪದ್ಮಸಂಭವೆ ಬೇಡುವೆ ಕೊಂಡಾಡುವೆ ನಿನ್ನ ಪಾಡುವೆ ಅ.ಪ. ಮನಸಿಜನಯ್ಯನ ಮೋಹದ ರಾಣಿಯೆ ಮುನಿಸಿಂತೇತಕೆ ಭೂಸುತೆ ಮುನಿಸನ್ನುತೆ ಕರುಣಾನ್ವಿತೆ 1 ಜೋಡಿಸಿ ಕರಮಂ ಪಾಡುತ ನಿನ್ನಂ ಬೇಡುವ ಕಂದನ ಪಾಲಿಸೆ ಮೊರೆಲಾಲಿಸೆ ದಯೆತೋರಿಸೆ 2 ಸುರನರವಂದಿತ ಚರಣಸರೋಜದಿ ಶರಣೆನ್ನುವ ಕಂದನಂ ವರಿಸೀ ದಿನದಿನಮೆಂದೆನು 3 ಮಾತೆಯೆ ಮುಳಿದೊಡೆ ಪೋತನ ಪೊರೆವಾ ದಾತರುಮಿರ್ಪರೆ ನೀನುಡಿ ಗತಿ ನಿನ್ನಡಿ ಅಣುಗರ ಕೈಪಿಡಿ4 ಪರಮಪಾವನ ಶೇಷಗಿರೀಶನ ಕರುಣಾರೂಪಿಣಿ ಭಾಮಿನೀ ಶುಭದಾಯಿನೀ ಜಯನಂದಿನೀ5
--------------
ನಂಜನಗೂಡು ತಿರುಮಲಾಂಬಾ