ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ಕಾಯೊ ಗೋಪಾಲಾಚರಣವ ಸ್ಮರಿಸುವೆ ಶರಣರ ಪಾಲಾ ಪ ಹರಣ ಹೋಗದ ಮುನ್ನ | ಹರಿ ನಿನ್ನ ಹಂಬಲನ್ನಕರುಣಿಸಿ ಕಾವುದೆನ್ನ | ಕರುಣ ನಿಧಿಯೆ ಘನ್ನಮೊರೆಯಿಡುವೆನು ನಿನ್ನ | ಚರಣ ಸರೋಜವನ್ನಶಿರದೊಳಗಿರಿಸೆನ್ನ | ಪರಮ ಪಾವನ್ನ 1 ಮರುತನ ಮತದಲ್ಲಿ | ಕರೆ ತಂದು ಎನ್ನನುತರತಮ ಜ್ಞಾನವ | ಅರುಹುವುದೊಳಿತಲ್ಲೆ |ಹರಿಯೆ ಸರ್ವೋತ್ತಮ | ಮರುತ ಜೀವೋತ್ತಮಹರ ವೈಷ್ಣವೋತ್ತಮ | ವರ ಜ್ಞಾನ ಪಾಲಿಸಿ 2 ಪನ್ನಗಾಚಲವಾಸ | ಪ್ರಸನ್ನರಘನಾಶನಿನ್ನ ನಾಮವ ಅನಿಶ | ಎನ್ನಿಂದ ನುಡಿಸೀಶ |ಅನ್ನಂತ ಗುಣ ಗುರು | ಗೋವಿಂದ ವಿಠಲನೆಎನ್ನ ಬಿನ್ನಪ ಸಲಿಸು | ಮನ್ನಿಸಿ ಕುಂದುಗಳ 3
--------------
ಗುರುಗೋವಿಂದವಿಠಲರು
ಕಾಪಾಡೆಲೊ ದೇವ ಕರುಣಾರ್ಣವ ಪ ನಾ ಪಾಪಿಯು ಎಂದು ನೀ ಪರಿ ಪಾಲಿಸದೀಪರಿಗೈದರೆ ಆಪದ್ಭಾಂಧವ ಅ.ಪ. ಮೊರೆಯಿಡುವೆನು ಇನ್ಯಾರಿಗೆ | ನೀನಿಲ್ಲದೆ ಪೊರೆವ ಪ್ರಭುವಾರೆನಗೆ | ಶರಣ ಮಂ ದಾರನೆಂದರಿತು ನಿನ್ನಯ ಪಾದ ನೆರೆ ನಂಬಿದೆನು ಇನ್ನು ಪೊರೆಯಬೇಕೆನ್ನನು 1 ಕರಿರಾಜನ ಭಯ ಪರಿಹರಿಸಿದ | ವರ ಗರುಡಗಮನ ಸಿರಿವರದ | ಜನಾದರ್Àನ ಪರಮ ಪುರುಷ ಶ್ರೀ ಕರಿಗಿರಿ ಮಂದಿರ ನರಹರಿ ನಮಿಪೆನು ಚರಣ ಸರಸಿಜಕೆ 2
--------------
ವರಾವಾಣಿರಾಮರಾಯದಾಸರು