ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರಿಗ್ಯಾತಕೆ ಮೊರೆಯಿಡಲಿ ಸಾರಿದವರನ ಪೊರೆವ ಶ್ರೀರಮಣ ನೀನಿರಲು ಪ ಬೆಳಸಿಗೊಬ್ಬನ ಕೇಳೆ ಮಳೆಗೆ ಮತ್ತೊಬ್ಬನೆ ಅಳತಿಗೆ ಇನ್ನೊಬ್ಬನೆ ಹಾಗೆವೆ ವಳತಿಗೊಬ್ಬರು ದೊರೆಗಳೆ ಮ್ಯಾಲೆನ್ನ ಪ್ರಳಯಕೆ ಮತ್ತೊಬ್ಬನೆ ಪರಿಪರಿ ಖಳರ ಮಾತುಗಳೇ ಸ್ವಾಮಿ 1 ಆಕಾಲ ನೀನೆವೆ ಈ ಕಾಲದಲಿ ನೀನೆ ಸಾಕುವನು ಇನ್ನೊಬ್ಬನೆ ಸ್ಥಿರವಾಗಿ ತಾಕು ತಗಲಿಲ್ಲದೆಲೆ ಬೊಮ್ಮಾದಿ ಲೋಕಪತಿಗಳ ಒಡಿಯನೇ ಈ ವ್ಯಾಳ್ಯ ಲೋಕರನ ಕಾಯಬೇಕೊ ಸ್ವಾಮಿ 2 ಕಾಸು ಒಬ್ಬರಿಗಿಲ್ಲ ಲೇಸು ತೋರದಲೇವೆ ದೇಶಕೊಬ್ಬರು ಪೋದರೋ ಪೊಟ್ಟಿಗೆ ಕೂಸುಗಳ ಮಾರುಂಡರೋ ಈ ಜನರ ಕ್ಲೇಶಬಡಸದಲೆ ಪೊರಿಯೊ ಕರುಣದಲಿ ವಾಸುದೇವವಿಠಲ ಸ್ವಾಮಿ 3
--------------
ವ್ಯಾಸತತ್ವಜ್ಞದಾಸರು
ಇಂದು ನಮ್ಮ ಸಲಹಯ್ಯಾ ಸಿರಿರಮಣಾ| ದುರಿತ ನಿವಾರಿಸು ಪೂರ್ಣ| ಮಂದಮತಿಗಳಾ ನೋಡದೆವೆ ನ್ಯೂನಾ| ಛಂದದಿಂದ ಕೊಡು ನಿನ್ನ ಚರಣ ಧ್ಯಾನಾ ಪ ಹಿಂದ ವ್ಯಾಧನೊಬ್ಬ ಹರಿಣಿ ಹಿಡಿಯಲಿ| ನಿಂತು ಚತುರ್ವಿಧ ಬಲಿಯಾನೊಡ್ಡಿರಲಿ| ಮೃಗ ಮೊರೆಯಿಡಲಿ| ಬಂದು ಕರುಣಿಸಿ ರಕ್ಷಿಸಿದ ಪರಿಲಿ 1 ಬಸಿರೊಳಗಿದ್ದ ಪರೀಕ್ಷಿತಗೆಂದು| ಎಸೆಯಲು ಬಾಣಗಳ ದ್ರೋಣಿ ಮುಳಿದು| ಬಿಸಜಾಕ್ಷ ನಿನ್ನ ಚಕ್ರ ಮರೆವಿಡಿದು| ಪರಿ ಬಂದು 2 ದಿನ ವತ್ಸಲ ದಯಾನಿಧಿ ಎನುವಾ| ಖೂನದೋರಿಸಯ್ಯಾ ಬಿರುದಿನ ಅನುವಾ| ನಿನೇ ತಾಯಿ ತಂದೆ ಬಂಧು ಸಖದೈವ| ಘನಗುರು ಮಹಿಪತಿ ಸುಖ ಜೀವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಷ್ಟೇಕೆ ಎನ್ನ ಮೇಲೆ ಈ ಸಿಟ್ಟು ಹರಿಯೆ ಸೃಷ್ಟಿಗೆ ನೀ ಕರ್ತನಾಗಿ ಶ್ರೀನಿವಾಸಧೊರಿಯೆ ಪ ಇನ್ಯಾರು ಹರಿ ಎನಗಿನ್ನು ಈ ಜಗದೊಳಗೆ ಎನ್ನ ದೂರು ಯಾರಿಗೆ ಮೊರೆಯಿಡಲಿ ಎನಗೆ ಮನ್ನಿಸಿ ದಯಮಾಡಿ ಸುಮತಿಯ ನೀ ತಂದು ಕೈಯನ್ನೇ ಹಿಡಿದು ಇನ್ನು ಈಗ ರಕ್ಷಿಸದಲೆ 1 ಸಕಲ ಜೀವ ರಕ್ಷಕÀನು ಸಾಧುಜನ ಪೋ- ಷಕನು ಸಕಲ ಲೋಕಗಳೆಲ್ಲ ಸಲಹುತಿಹನೊ ಅಕಳಂಕ ಮಹಿಮ ಶ್ರೀ ಆದಿದೇವರ ದೇವ ಭಕುತ ವತ್ಸಲನೆಂಬ ಬಿರುದು ನಿನ್ನಲ್ಲಿ 2 ಇಂದು ಮಾಡಿದ ಪಾಪಗಳು ಇಂದು ಪರಿಹಾರ ಮಾಡಿ ಎನ್ನ ಮುಂದೆ ಧನ್ಯನ ಮಾಡಿ ಮುಕ್ತಾನಂತೆನಿಸಿ ತಂದೆ ' ಹೊನ್ನಯ ವಿಠಲ’ ದಯಮಾಡಿ ಸಲಹದಲೆ 3
--------------
ಹೆನ್ನೆರಂಗದಾಸರು
ಸನ್ನುತ ವಿಠಲ | ಇವನ ಪೊರೆಯೋ ಪ ಅವಿಕಾರಿ ಆದ್ಯ ನಿರ | ವದ್ಯ ಎಲೊ ಹರಿಯೆ ಅ.ಪ. ತೈಜಸನೆ ನೀನಾಗಿ | ಮಾಜದಲ್ಯುಪದೇಶಯೋಜಿಸುವೆನೆಂದೆನುತ | ಪೇಳ್ದುದಕ್ಕಾಗೀಆರ್ಜವದ ಮನದಲ್ಲಿ | ಪ್ರಾರ್ಥಿಸಲು ಸ್ವಪ್ನದಲಿಯೋಚಿಸಿಹೆ ಅಂಕಿತವ | ಹೇ ನೈಜಮೂರ್ತೇ 1 ಚಿಣ್ಣನಿರುವನು ಇವನು | ಕಣ್ಣೆಗೆವೆಯಂದದಲಿಇನ್ನೀವನ ಕಾಯುವುದು | ಬನ್ನಬಡಿಸದಲೇಅನ್ನ ಆರೋಗ್ಯಕ್ಕೆ | ನಿನ್ನನೆ ಮೊರೆಯಿಡಲಿಅನ್ಯ ಹಂಬಲ ನೀಗೊ | ಪನ್ನಂಗ ಶಯನಾ 2 ತೊಡರು ಬರಲಿ | ಬಿಡದೆ ನಿನ್ನಂಘ್ರಿಯನುಧೃಡಭಕ್ತಿಯಿಂ ಸ್ಮರಿಪ | ಮುದ ಮನವ ನೀಯೋ |ಎಡಬಲದಿ ನೀನಾಗಿ | ಬಿಡದೆ ಬೆಂಬಲ ವಿರಲುಕಡು ಭವಾರ್ಣವವೆಲ್ಲ | ಅಡಿಯ ಪರಿಮಿತಿಯೋ 3 ಸಿರಿ ವಾಯು ಮೊದಲಾದಸುರರೆಲ್ಲ ಹರಿಯ ಕಿಂಕರರೆಂಬ ಮತಿಯಿತ್ತುಪೊರೆವುದಿವನನ ಎಂದು | ಹರಿಯೆ ಭಿನ್ನವಿಪೆ 4 ನಾಮ ಸ್ಮರಣೆ ಯೆಂಬ | ವಜ್ರಕವಚವ ತೊಡಿಸಿಈ ಮಹಾ ಕಲಿಯುಗದಿ | ಸಾಧನವ ಗೈಸೋಶ್ರೀ ಮನೋಹರ ಗುರು | ಗೋವಿಂದ ವಿಠಲಯ್ಯಈ ಮಹತ್ತುಪಕಾರ | ನಾ ಮರೆಯನಯ್ಯ 5
--------------
ಗುರುಗೋವಿಂದವಿಠಲರು